Viral: ತಿಂಡಿಗೆ ಅವಲಕ್ಕಿ ಬದಲು ಡ್ರೈ ಫ್ರೂಟ್ಸ್‌ ಕೊಟ್ಟ ಗಂಡ, ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಪರೀಕ್ಷೆಯಲ್ಲಿ ಫೇಲ್‌ ಆದ್ರೆ, ಲವ್‌ ಬ್ರೇಕಪ್‌ ಆದ್ರೆ, ಗಂಡನ ಕಿರುಕುಳ ತಾಳಲಾರದೆ, ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗಂಡ ಬೆಳಗ್ಗಿನ ಉಪಹಾರಕ್ಕೆ ತನ್ನಿಷ್ಟದ ಅವಲಕ್ಕಿ ಬದಲು ಡ್ರೈಫ್ರೂಟ್ಸ್‌ ನೀಡಿದನೆಂದು ಕೋಪದ ಕೈಗೆ ಬುದ್ಧಿ ಕೊಟ್ಟು ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ತಿಂಡಿಗೆ ಅವಲಕ್ಕಿ ಬದಲು ಡ್ರೈ ಫ್ರೂಟ್ಸ್‌ ಕೊಟ್ಟ ಗಂಡ, ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ
ವೈರಲ್​​ ಸುದ್ದಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 02, 2024 | 9:09 AM

ಗಂಡ ಹೆಂಡತಿ ಮಧ್ಯೆ ಪ್ರೀತಿಯಿರುವ ಹಾಗೆಯೇ ಜಗಳಗಳು ಸಹ ಸಾಮಾನ್ಯವಾಗಿರುತ್ತದೆ. ಊಟ ತಿಂಡಿಯ ವಿಚಾರಕ್ಕೆ, ಮಕ್ಕಳನ್ನು ನೋಡಿಕೊಳ್ಳುವ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಸಣ್ಣ ಪುಟ್ಟ ಜಗಳ, ಮನಸ್ಥಾಪಗಳು ನಡೆಯುತ್ತಲೇ ಇರುತ್ತವೆ. ಹೌದು ಅಡುಗೆಗೆ ಉಪ್ಪಿಲ್ಲ, ಖಾರ ಇಲ್ಲ ಅನ್ನೋ ವಿಚಾರಕ್ಕೆ ಆಗಾಗ್ಗೆ ಸಣ್ಣಪುಟ್ಟ ಜಗಳಗಳು ನಡೆಯುತ್ತಿರುತ್ತವೆ. ಆದ್ರೆ ಎಂದಿಗೂ ಈ ಜಗಳಗಳು ಆತ್ಮಹತ್ಯೆ ಅಥವಾ ಕೊಲೆಯ ಹಂತಕ್ಕೆ ಹೋಗುವುದಿಲ್ಲ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಬೆಳಗ್ಗಿನ ತಿಂಡಿಯ ವಿಚಾರವಾಗಿ ಶುರುವಾದ ಜಗಳ ಆತ್ಮಹತ್ಯೆಯಲ್ಲಿ ಕೊನೆಗೊಂಡಿದೆ. ಹೌದು ಇಲ್ಲೊಬ್ಳು ಮಹಿಳೆ ತನ್ನ ಗಂಡ ಬೆಳಗ್ಗಿನ ಉಪಹಾರಕ್ಕೆ ತನ್ನಿಷ್ಟದ ಪೋಹ ಮಾಡದೆ ಬರಿ ಡ್ರೈ ಫ್ರೂಟ್ಸ್‌ ತಿನ್ನಲು ಕೊಟ್ಟಿದ್ದಾನೆಂದು ಕೋಪಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತ ಸುದ್ದಿಯೊಂದು ಭಾರೀ ವೈರಲ್‌ ಆಗಿದೆ.

ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದ್ದು, ಗಂಡ ಅವಲಕ್ಕಿ (ಪೋಹಾ) ಮಾಡಿಲ್ಲವೆಂದು ದುಡುಕು ನಿರ್ಧಾರವನ್ನು ತೆಗೆದುಕೊಂಡು ಮಹಿಳೆಯೊಬ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ಮುರಾರ್‌ ಪ್ರದೇಶದ ಬಾಲ್ಕಿಶನ್‌ ಜದೌನ್‌ ಎಂಬವರು ಒಂದು ವರ್ಷದ ಹಿಂದೆ ಕವಿತ ಎನ್ನುವವರನ್ನು ಮದುವೆಯಾಗಿದ್ದರು. ಇಬ್ಬರೂ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದ್ರೆ ಕ್ಷುಲ್ಲಕ ಕಾರಣಕ್ಕೆ ದುಡುಕು ನಿರ್ಧಾರವನ್ನು ತೆಗೆದುಕೊಂಡು ಕವಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: 2 ವರ್ಷದ ಮಗುವಿನ ಮೇಲೆ ಹರಿದ ಕಸದ ಟ್ರಕ್‌; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶನಿವಾರ (ಆಗಸ್ಟ್‌ 31) ಕವಿತಾ ಬೆಳಗ್ಗಿನ ಉಪಹಾರಕ್ಕೆ ಅವಲಕ್ಕಿಯನ್ನು ಮಾಡಿಕೊಂಡು ಎಂದು ಕೇಳಿಕೊಂಡಿದ್ದರು. ಆದರೆ ಪತಿ ಕೇವಲ ಡ್ರೈ ಫ್ರೂಟ್ಸ್‌ ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಕವಿತಾ ಸೀದಾ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ವರದಿಯಾದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದ್ದಾರೆ. ಕವಿತಾ ನವ ವಿವಾಹಿತೆ ಆಗಿರುವುದರಿಂದ ವರದಕ್ಷಿಣೆ ಸೇರಿದಂಯೆ ಕೌಟುಂಬಿಕ ದೌರ್ಜನ್ಯದಂತಹ ಇತ್ಯಾದಿ ಆಯಾಮಗಳಿಂದಲೂ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಇಲ್ಲಿನ ಹೆಚ್ಚುವರಿ ಎಸ್ಪಿ ನಿರಂಜನ್‌ ಶರ್ಮಾ ಅವರು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​