Viral Video: ನಡು ಬೀದಿಯಲ್ಲಿ ಸಿಗರೇಟ್ ಸೇದುತ್ತಾ ನಿಂತ ಹದಿ ಹರೆಯದ ಹುಡುಗಿಯರು; ವಿಡಿಯೋ ವೈರಲ್
ಈಗಿನ ಯುವಜನತೆಗೆ ಸಿಗರೇಟ್ ಸೇದುವುದು ಫ್ಯಾಶನ್ ಆಗಿಬಿಟ್ಟಿದೆ. ಹೌದು ಸಿಗರೇಟ್ ಸೇದುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿದಿದ್ದರೂ ಕೂಡಾ ಧೂಮಪಾನ ಮಾಡುವುದನ್ನು ಬಿಡುತ್ತಿಲ್ಲ. ಇದಕ್ಕೆ ಉದಾಹರಣೆಯಂತಿರುವ ಆಘಾತಕಾರಿ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಹದಿಹರೆಯದ ಹೈಸ್ಕೂಲ್ ಹುಡುಗೀರು ಬೀದಿಯಲ್ಲಿ ನಿಂತು ರಾಜಾರೋಷವಾಗಿ ಸಿಗರೇಟ್ ಸೇದಿದ್ದಾರೆ.
ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಕೂಡಾ ಕೆಲವರಂತೂ ಧೂಮಪಾನವನ್ನು ಬಿಡುತ್ತಿಲ್ಲ. ಅದರಲ್ಲೂ ಮದ್ಯಪಾನ, ಧೂಮಪಾನ ಮತ್ತು ಮಾದಕ ವಸ್ತುಗಳಿಗೆ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಹೌದು ಮಾದಕ ವಸ್ತುಗಳ ಸೇವನೆಯಿಂದಾಗುವ ಅಪಾಯದ ಬಗ್ಗೆ ತಿಳಿದಿದ್ದರೂ ಕೂಡಾ ಯುವ ಸಮೂಹ ಫ್ಯಾಶನ್ ಹೆಸರಿನಲ್ಲಿ ಮದ್ಯಪಾನ ಧೂಮಪಾನದ ದಾಸರಾಗುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಬಿಡಿ, ಸ್ಕೂಲ್ ಮಕ್ಕಳು ಕೂಡಾ ಕೈಯಲ್ಲಿ ಸಿಗರೇಟು ಹಿಡಿದು ಓಡಾಡುವ ಕಾಲ ಬಂದಿದೆ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಒಂದಷ್ಟು ಹೈಸ್ಕೂಲ್ ಹುಡುಗೀರು ನಡು ಬೀದಿಯಲ್ಲಿಯೇ ರಾಜಾರೋಷವಾಗಿ ಸಿಗರೇಟ್ ಸೇದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಈ ದೃಶ್ಯವನ್ನು ಕಂಡು ಎತ್ತ ಸಾಗುತ್ತಿದೆ ಯುವ ಸಮೂಹ ಎಂದು ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು ಶೋನಿ ಕಪೂರ್ (Shoneekapoor) ಎಂಬವರು ಸೋಷಿಯಲ್ ಮೀಡಿಯಾದ ಫ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಈ ಮಕ್ಕಳನ್ನು ನೋಡಿ ಅವರಿಗೆ ಸರಿಯಾಗಿ ಧೂಮಪಾನ ಮಾಡುವುದು ಹೇಗೆಂಬುದು ಸಹ ಗೊತ್ತಿಲ್ಲ, ಆದ್ರೂ ಸಿಗರೇಟ್ ಸೇದುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Look at these kids, they don’t even know how to smoke🤦♂️pic.twitter.com/iRW8xz9RWh
— ShoneeKapoor (@ShoneeKapoor) August 29, 2024
ವೈರಲ್ ವಿಡಿಯೋದಲ್ಲಿ ಇಬ್ಬರು ಹೈಸ್ಕೂಲ್ ಹುಡುಗೀರು ಕೈಯಲ್ಲಿ ಸಿಗರೇಟ್ ಹಿಡಿದು ನಿಂತಿರುವುದನ್ನು ಕಾಣಬಹುದು. ಧೂಮಪಾನ ಮಾಡಲು ಸರಿಯಾಗಿ ಗೊತ್ತಿಲ್ಲದಿದ್ರೂ ಕೂಡಾ ಆ ಇಬ್ಬರೂ ಸ್ಟೈಲ್ ಆಗಿ ಸಿಗರೇಟ್ ಸೇದಿದ್ದಾರೆ.
ಇದನ್ನೂ ಓದಿ: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಗೂಬೆಗಳೆರಡು ಚುಂಬಿಸುತ್ತಿರುವ ಅಪರೂಪದ ದೃಶ್ಯ
ಆಗಸ್ಟ್ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇತ್ತೀಚಿಗಂತೂ ಈ ಯುವ ಸಮೂಹ ಧೂಮಪಾನವನ್ನು ಫ್ಯಾಶನ್ ಆಗಿ ಪರಿಗಣಿಸಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸಬೇಕುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ