Viral Video: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಗೂಬೆಗಳೆರಡು ಚುಂಬಿಸುತ್ತಿರುವ ಅಪರೂಪದ ದೃಶ್ಯ
ಗೂಬೆಗಳೆರಡು ಪರಸ್ಪರ ಚುಂಬಿಸುತ್ತಿರುವ ಅಪರೂಪದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಕಾಲ್ಟನ್ ಲಾಕ್ರಿಡ್ಜ್ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.
2 ಗೂಬೆಗಳು ಪರಸ್ಪರ ಚುಂಬಿಸುತ್ತಿರುವ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಸುಂದರ ಅಪರೂಪದ ದೃಶ್ಯವನ್ನು ಕೆನಡಾದ ವನ್ಯಜೀವಿ ಛಾಯಾಗ್ರಾಹಕರಾದ ಕಾಲ್ಟನ್ ಲಾಕ್ರಿಡ್ಜ್ ಅವರು ಸೆರೆ ಹಿಡಿದಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮರದ ಕೊಂಬೆಯ ಮೇಲೆ ಎರಡು ಗೂಬೆಗಳು ಕುಳಿತಿದ್ದು, ಪರಸ್ಪರ ಸಮೀಪಕ್ಕೆ ಬಂದು ಚುಂಚಿಸುತ್ತಿರುವುದು ಸೆರೆಯಾಗಿದೆ.
ವೀಡಿಯೊ ವಾಸ್ತವವಾಗಿ ಕಳೆದ ವರ್ಷ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಇದೀಗ ‘ಇನ್‌ಸೈಡರ್ ಹಿಸ್ಟರಿ'(insiderhistory) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಪ್ರಕೃತಿ ಪ್ರಿಯರು ಮತ್ತು ಇಂಟರ್ನೆಟ್ ಬಳಕೆದಾರರ ಗಮನವನ್ನು ಸೆಳೆದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: Richest Dog: 3300 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ವಿಶ್ವದ ಶ್ರೀಮಂತ ಶ್ವಾನವಿದು
ಈ ಅಪರೂಪದ ದೃಶ್ಯವನ್ನು ಸೆರೆಹಿಡಿದಿರುವ ಫೋಟೋ ಗ್ರಾಫರ್ ಕಾಲ್ಟನ್ ಲಾಕ್ರಿಡ್ಜ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (killercatnip) ಹಂಚಿಕೊಂಡಿದ್ದರು. ಈ ವಿಡಿಯೋ 5ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ ಇವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಅಪರೂಪದ ವನ್ಯಜೀವಿಗಳ ವಿಡಿಯೋಗಳನ್ನು ಕಣ್ತುಂಬಿಸಿಕೊಳ್ಳಬಹುದು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ