Viral Video: ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಬೀದಿಗಿಳಿದು ಯುವಕರ ಪ್ರತಿಭಟನೆ; ವಿಡಿಯೋ ವೈರಲ್
ಬೆಲೆ ಏರಿಕೆ, ಹಗರಣಗಳು, ರೈತರ ಪ್ರತಿಭಟನೆಗಳು ಸೇರಿದಂತೆ ಇತ್ಯಾದಿ ಕಾರಣಗಳಿಗೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಇಲ್ಲೊಂದಷ್ಟು ಯುವಕರು ಬ್ಯೂಟಿ ಪಾರ್ಲರ್ ಅನ್ನೇ ಬಂದ್ ಮಾಡಿಸಿ ಎಂದು ಬೀದಿಗಿಳಿದು ಪ್ರತಿಭಟನೆಯನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅರೇ ಈ ಹುಡುಗ್ರಿಗೆ ಹೆಣ್ ಮಕ್ಳು ಹಾಗೂ ಬ್ಯೂಟಿ ಪಾರ್ಲರ್ ಮೇಲೆ ಇದ್ಯಾಕೆ ಇಷ್ಟು ದ್ವೇಷನಪ್ಪಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಭಾರತದಂತಹ ಪ್ರಜಾಪ್ರಭುತ್ವ ದೇಶಗಳಲ್ಲಿ ಪ್ರತಿಭಟನೆಗಳು ಸರ್ವೇ ಸಾಮಾನ್ಯ. ಬೆಲೆ ಏರಿಕೆ, ಹಗರಣಗಳು, ಅಪರಾಧಗಳು, ಸರ್ಕಾರದ ಕೆಲವೊಂದು ನಿರ್ಧಾರಗಳ ವಿರುದ್ಧ ತೀವ್ರ ರೂಪದ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಇಲ್ಲೊಂದು ವಿಚಿತ್ರ ಪ್ರತಿಭಟನೆ ನಡೆದಿದ್ದು, ಇವರ ಪ್ರತಿಭಟನೆಯ ಕಾರಣ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಹೌದು ಹೆಂಗಳೆಯರ ಫೆವರೇಟ್ ಸ್ಥಳವಾಗಿರುವ ಬ್ಯೂಟಿ ಪಾರ್ಲರ್ ಅನ್ನೇ ಬಂದ್ ಮಾಡಿಸಿ ಎಂದು ಇಲ್ಲೊಂದಷ್ಟು ಯುವಕರು ಬೀದಿಗಿಳಿದು ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅರೇ ಈ ಹುಡುಗ್ರಿಗೆ ಹೆಣ್ ಮಕ್ಳು ಹಾಗೂ ಬ್ಯೂಟಿ ಪಾರ್ಲರ್ ಮೇಲೆ ಇದ್ಯಾಕೆ ಇಷ್ಟು ದ್ವೇಷನಪ್ಪಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಈ ವಿಚಿತ್ರ ಪ್ರತಿಭಟನೆ ಬಿಹಾರದ ಸಸಾರಾಮ್‌ನಲ್ಲಿ ನಡೆದಿದ್ದು, ಯುವಕರ ಗೊಂಪೊಂದು ಬ್ಯೂಟಿ ಪಾರ್ಲರ್ ಅನ್ನು ಬಂದ್ ಮಾಡಿಸಿ ಎಂದು ಪ್ರತಿಭಟನೆ ಮಾಡಿದೆ. ಈ ವಿಚಿತ್ರ ಪ್ರೊಟೆಸ್ಟ್ ಗಂಭೀರ ಉದ್ದೇಶಕ್ಕಾಗಿ ನಡೆಸಲಾಗಿದೆಯೇ ಅಥವಾ ಕೇವಲ ಮನೋರಂಜನೆಯ ಚೇಷ್ಟೆಗಾಗಿ ಮಾಡಲಾಗಿದೆಯೇ ಹಾಗೂ ಈ ಪ್ರತಿಭಟನೆಯ ಹಿಂದಿನ ನಿಜವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಈ ಕುರಿತ ಪೋಸ್ಟ್ ಒಂದನ್ನು Bhojpuri_vlogs_00 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಒಂದಷ್ಟು ಯುವಕರ ಗುಂಪು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬಂದ್ ಮಾಡಿಸಿ ಬಂದ್ ಮಾಡಿಸಿ ಬ್ಯೂಟಿ ಪಾರ್ಲರ್‌ಗಳನ್ನು ಬಂದ್ ಮಾಡಿಸಿ ಎಂದು ಘೋಷಣೆಯನ್ನು ಕೂಗುತ್ತಾ ವಿಚಿತ್ರ ಪ್ರತಿಭಟನೆಯನ್ನು ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
View this post on Instagram
ಇದನ್ನೂ ಓದಿ: Richest Dog: 3300 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ವಿಶ್ವದ ಶ್ರೀಮಂತ ಶ್ವಾನವಿದು
ಆಗಸ್ಟ್ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಹುಡುಗರು ಹೇರ್ ಕಟ್ ಮಾಡಿಸಲು ಹೋಗುವ ಸಲೂನ್‌ಗಳನ್ನು ಬಂದ್ ಮಾಡಿಸಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಚಿತ್ರ ವಿಚಿತ್ರ ಪ್ರತಿಭಟನೆಗಳು ಕೂಡಾ ನಮ್ಮ ದೇಶದಲ್ಲಿ ನಡೆಯುತ್ತದೆಯೇʼ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Sun, 1 September 24