Viral : ಆರ್ಡರ್ ಕ್ಯಾನ್ಸಲ್ ಮಾಡಿ ಎರಡು ವರ್ಷವಾಯ್ತು, ಆದ್ರೆ ಮನೆ ಬಾಗಿಲಿಗೆ ಬಂತು ಪ್ರೆಶರ್ ಕುಕ್ಕರ್
ಕಳೆದ ಎರಡು ವರ್ಷಗಳ ಹಿಂದೆ ಅಮೆಜಾನ್‌ನಿಂದ ವ್ಯಕ್ತಿಯೊಬ್ಬರು ಪ್ರೆಶರ್ ಕುಕ್ಕರ್ ಅನ್ನು ಆರ್ಡರ್ ಮಾಡಿದ್ದರು. ನಂತರ ಕ್ಯಾನ್ಸಲ್ ಮಾಡಿ ಮರುಪಾವತಿ ಆಗಿದ್ದರೂ ಆದರೆ ಇದೀಗ ಎರಡು ವರ್ಷಗಳ ನಂತರ ಕುಕ್ಕರ್ ಮನೆಗೆ ಡೆಲಿವರಿ ಆಗಿದೆ. ತಮಗಾದ ಅನುಭವವನ್ನು ಜಯ್ ಎನ್ನುವ ವ್ಯಕ್ತಿಯೂ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ನಗರಗಳಷ್ಟೇ ಅಲ್ಲ ಹಳ್ಳಿಗಳ ಜನರು ಆನ್ಲೈನ್ ಮೂಲಕ ನಾನಾ ರೀತಿಯ ಪ್ರಾಡಕ್ಟ್ ಗಳನ್ನು ಖರೀದಿ ಮಾಡುತ್ತಾರೆ. ಹೀಗಾಗಿ ಶಾಪಿಂಗ್ ಮಾಡಲು ಈಗ ಹೆಚ್ಚು ಇಕಾಮರ್ಸ್ ವೆಬ್ಸೈಟ್ ಗಳನ್ನು ಹೆಚ್ಚು ಅವಲಂಬಿಸಿದ್ದಾರೆ. ಆದರೆ, ಕೆಲವೊಮ್ಮೆ ಆರ್ಡರ್ ಮಾಡದ ವಸ್ತುಗಳು ಕೂಡ ಮನೆ ಬಾಗಿಲಿಗೆ ಬರುವುದಿದೆ. ಇದೀಗ ಇಂತಹದೊಂದು ಘಟನೆಯೂ ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬರು ಎರಡು ವರ್ಷಗಳ ಹಿಂದೆ ಅಮೆಜಾನ್‌ನಿಂದ ಪ್ರೆಶರ್ ಕುಕ್ಕರ್ ಅನ್ನು ಆರ್ಡರ್ ಮಾಡಿದ್ದರು. ಆ ಬಳಿಕ ಅದನ್ನು ಕ್ಯಾನ್ಸಲ್ ಮಾಡಿ ಹಣವು ಮರುಪಾವತಿ ಆಗಿದ್ದರೂ ಎರಡು ವರ್ಷಗಳ ಬಳಿಕ ಕುಕ್ಕರ್ ಮನೆಗೆ ಡೆಲಿವರಿ ಆಗಿದೆ.
ಜಯ್ ಎನ್ನುವ ಹೆಸರಿನ ಬಳಕೆದಾರರೊಬ್ಬರು ಈ ಅನುಭವವನ್ನು ಸಾಮಾಜಿಕ ಮಾಧ್ಯಮವಾದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, 2 ವರ್ಷಗಳ ನಂತರ ನನ್ನ ಆರ್ಡರ್ ಡೆಲಿವರಿ ಮಾಡಿದ್ದಕ್ಕಾಗಿ ಅಮೆಜಾನ್‌ಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಪ್ರೆಶರ್ ಕುಕ್ಕರ್ ಅನ್ನು ಅಕ್ಟೋಬರ್ 1, 2022 ರಂದು ಆರ್ಡರ್ ಮಾಡಲಾಗಿದೆ. ಆದರೆ ಎರಡು ವರ್ಷಗಳ ನಂತರ ಆಗಸ್ಟ್ 28, 2024 ರಂದು ಡೆಲಿವರಿ ಆಗಿದೆ. ಇದು ವಿಶೇಷವಾದ ಒತ್ತಡದ ಕುಕ್ಕರ್ ಆಗಿರಬೇಕು. ಇಂದಿನ ವೇಗದ ಜಗತ್ತಿನಲ್ಲಿ ಎರಡು ವರ್ಷಗಳ ಹಿಂದೆ ರದ್ದುಪಡಿಸಿರುವ ಆರ್ಡರನ್ನು ಇತ್ತೀಚೆಗೆ ಸ್ವೀಕರಿಸಿದ್ದೇನೆ ಎಂದಿದ್ದಾರೆ.
Thank you Amazon for delivering my order after 2 years.
The cook is elated after the prolonged wait, must be a very special pressure cooker! 🙏 pic.twitter.com/TA8fszlvKK
— Jay (@thetrickytrade) August 29, 2024
ಜಯ್ ಅವರ ಪೋಸ್ಟ್ ನೋಡುತ್ತಿದ್ದಂತೆ ಅಮೆಜಾನ್ ಕಸ್ಟಮರ್ ಕೇರ್ ಸಿಬ್ಬಂದಿಯೊಬ್ಬರು ಕಾಮೆಂಟ್ ಮಾಡಿದ್ದು, ಈ ಘಟನೆಯಿಂದ ಜಯ್ ಅವರಿಗಾದ ಅನಾನುಕೂಲತೆಗೆ ಕ್ಷಮೆಯಾಚಿಸಿದ್ದು ವೆಬ್ಸೈಟ್ ಗೆ ವರದಿ ಮಾಡುವಂತೆ ತಿಳಿಸಿದ್ದಾರೆ. ಇದಕ್ಕೆ ಜಯ್ ಅವರು ಏನು ವರದಿ ಮಾಡಬೇಕೆಂದು ಕೇಳಿದ್ದು, ಅಮೆಜಾನ್ ಈಗಾಗಲೇ ಎರಡು ವರ್ಷಗಳ ಹಿಂದೆ ತನಗೆ ಹಣವನ್ನು ಮರುಪಾವತಿಯನ್ನು ನೀಡಿದೆ ಎಂದು ತಿಳಿಸಿದ್ದಾರೆ. ಆದರೆ ಈ ಈಗ ಕುಕ್ಕರ್ ಕೊಡುವುದಾದರೂ ಹೇಗೆ ಎಂದು ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಯುವತಿಯ ಸ್ನೇಕ್ ಯೋಗಾಸನ ಹೇಗಿದೆ ನೋಡಿ?
ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರ ‘ಕುಕ್ಕರ್‌ನಿಂದ ಒತ್ತಡ ಮಾತ್ರವಲ್ಲದೇ, ಎರಡು ವರ್ಷಗಳ ನಂತರ ಅದರ ವಿತರಣೆಯಿಂದಾಗಿ ಅಮೆಜಾನ್‌ನಲ್ಲಿ ಹೆಚ್ಚಿನ ಒತ್ತಡವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ಇದು ಮಂಗಳ ಗ್ರಹದಿಂದ ಡೆಲಿವರಿ ಆಗಿರಬೇಕು’ ಎಂದಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ