Viral: ಕಾಲೇಜು ಶೌಚಾಲಯದಲ್ಲಿ ಕಾಣಿಸಿಕೊಂಡ ರಾಶಿ ರಾಶಿ ಹಾವಿನ ಮರಿಗಳು; ಎದೆ ಝಲ್‌ ಎನಿಸುವ ವಿಡಿಯೋ

ಮನೆ ಅಥವಾ ಯಾವುದೇ ಸ್ಥಳಗಳಲ್ಲಾಗಿರಲಿ ಶೌಚಾಲಯಗಳನ್ನು ಸ್ಪಚ್ಛವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ರೋಗಗಳು ಹರಡುವುದು ನಿಶ್ಚಿತ. ಆದ್ರೆ ಇಲ್ಲೊಂದು ಸರ್ಕಾರಿ ಕಾಲೇಜಿನಲ್ಲಿ ಸ್ವಚ್ಛತೆಯೇ ಕಾಣದ ಶೌಚಾಲಯದಲ್ಲಿ ರಾಶಿ ರಾಶಿ ಹಾವಿನ ಮರಿಗಳು ಕಾಣಿಸಿಕೊಂಡಿವೆ. ಬೆಚ್ಚಿ ಬೀಳಿಸುವ ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ನೈರ್ಮಲ್ಯ ಪಾಲಿಸದ ಪರಿಣಾಮವೇ ಇದು ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

Viral: ಕಾಲೇಜು ಶೌಚಾಲಯದಲ್ಲಿ ಕಾಣಿಸಿಕೊಂಡ ರಾಶಿ ರಾಶಿ ಹಾವಿನ ಮರಿಗಳು;  ಎದೆ ಝಲ್‌ ಎನಿಸುವ ವಿಡಿಯೋ
Follow us
| Updated By: ಅಕ್ಷತಾ ವರ್ಕಾಡಿ

Updated on: Sep 05, 2024 | 4:57 PM

ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಶೌಚಾಲಯಗಳನ್ನು ಕೂಡಾ ನಿತ್ಯವೂ ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಏನಾದರೂ ನೈರ್ಮಲ್ಯವನ್ನು ಪಾಲಿಸದಿದ್ದರೆ ಶೌಚಾಲಯದ ಕಾರಣದಿಂದಲೇ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವು ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಶೌಚಾಲಯಗಳಲ್ಲಿ ಶೌಚಾಲಯದ ಸ್ವಚ್ಛತೆಯನ್ನು ಪಾಲಿಸುತ್ತಿಲ್ಲ. ಅದೇ ರೀತಿ ಇಲ್ಲೊಂದು ಸರ್ಕಾರಿ ಕಾಲೇಜಿನ ಶೌಚಾಲಯದಲ್ಲಿಯೂ ನೈರ್ಮಲ್ಯ ಮಾಯವಾಗಿದ್ದು, ಪರಿಣಾಮ ಟಾಯ್ಲೆಟ್‌ ಬೇಸಿನ್‌ನಲ್ಲಿ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡಿವೆ. ಬೆಚ್ಚಿ ಬೀಳಿಸುವ ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ನೈರ್ಮಲ್ಯ ಪಾಲಿಸದ ಪರಿಣಾಮವೇ ಇದು ಎಂದು ನೆಟ್ಟಿಗರು ಹೇಳಿಕೊಳ್ಳುತ್ತಿದ್ದಾರೆ.

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಿಗ್ನರ್‌ ಅಣ್ಣಾ ಸರ್ಕಾರಿ ಮಹಿಳಾ ಕಾಲೇಜಿನ ದೃಶ್ಯ ಇದಾಗಿದ್ದು, ನೈರ್ಮಲ್ಯದ ಕೊರತೆಯಿಂದ ಈ ಕಾಲೇಜಿನ ಶೌಚಾಲಯದಲ್ಲಿ ರಾಶಿ ರಾಶಿ ಹಾವಿನ ಮರಿಗಳು ಕಾಣಿಸಿಕೊಂಡಿವೆ. ಶೌಚಾಲಯದ ಸುತ್ತ ಮುತ್ತ ಪೊದೆಗಳೇ ತುಂಬಿವೆ, ಅಲ್ಲದೆ ಸರಿಯಾದ ಸ್ವಚ್ಛತೆ ಕೂಡಾ ಇಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ಹಾವುಗಳು ಕಾಣಿಸಿಕೊಂಡ ಬಳಿಕ ಈ ಕಾಲೇಜಿನ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋಗಲು ಭಯಪಡುತ್ತಿದ್ದು, ಆದಷ್ಟು ಬೇಗ ಶೌಚಾಲಯದ ಸುತ್ತ ಮುತ್ತ ಸ್ವಚ್ಛತೆಯ ಕೆಲಸವನ್ನು ಪ್ರಾರಂಭಿಸಿ ಹಾಗೂ ಹದಗೆಟ್ಟ ವ್ಯವಸ್ಥೆಯನ್ನು ಎಂದು ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿಗೆ ಮನವಿಯನ್ನು ಮಾಡಿದ್ದಾರೆ. ಕಾಲೇಜು ವಾಶ್‌ರೂಮ್‌ನ ಕಳಪೆ ನೈರ್ಮಲ್ಯಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಈ ಕಂಪನಿ ತನ್ನ ಕೆಲಸಗಾರರಿಗೆ ನೀಡುತ್ತಿದೆ ಡೇಟಿಂಗ್ ಮಾಡಲು ಟಿಂಡರ್ ಲೀವ್

ಈ ಕುರಿತ ವಿಡಿಯೋವೊಂದನ್ನು NutBoult ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ʼನೈರ್ಮಲ್ಯದ ನಿರ್ಲಕ್ಷ್ಯದಿಂದ ಕಾಲೇಜೊಂದರ ಶೌಚಾಲಯದಲ್ಲಿ ಕಾಣಿಸಿಕೊಂಡ ಹಾವುಗಳು; ವಿದ್ಯಾರ್ಥಿಗಳ ಆಋಓಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಬಗ್ಗೆ ತಕ್ಷಣದ ಕ್ರಮ ತೆಗೆದುಕೊಳ್ಳಬೇಕಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ನೈರ್ಮಲ್ಯ ಹದಗೆಟ್ಟಿರುವ ಕಾಲೇಜು ಶೌಚಾಲಯದ ಟಾಯ್ಲೆಟ್‌ ಬೇಸಿನ್‌ನಲ್ಲಿ ರಾಶಿರಾಶಿ ಹಾವಿನ ಮರಿಗಳು ತೇಲಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಸೆಪ್ಟೆಂಬರ್‌ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ 400ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಆದಷ್ಟು ಬೇಗ ವ್ಯವಸ್ಥೆಯನ್ನು ಸರಿಗೊಳಿಸಿ ಎಂದು ನೆಟ್ಟಿಗರು ಕೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ