
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಗರವೊಂದರಲ್ಲಿ ರಾಜಾರೋಷವಾಗಿ ಕಾಡಾನೆಯೊಂದು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಾರ್ಚ್ 9 ರಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಎರಡೇ ದಿನಗಳಲ್ಲಿ 2.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಊರಿಗೆ ಬಂದ ಕಾಡಾನೆಯ ವಿಡಿಯೋ ಬೀದಿ ಬದಿಯ ಕಟ್ಟಡದ ಹೊರಗೆ ಇರಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: ಹೋಳಿ ಆಚರಣೆಯ ವೇಳೆ ಜಪಾನಿ ಯುವತಿಗೆ ಕಿರುಕುಳ, ವಿಡಿಯೋ ವೈರಲ್
ಪುಟ್ಟ ಬೀದಿ, ರಸ್ತೆಯ ಎರಡು ಬದಿಗಳಲ್ಲಿ ಗಾಡಿಗಳನ್ನು ಪಾರ್ಕ್ ಮಾಡಲಾಗಿದೆ. ಜೊತೆಗೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಯೊಂದರ ಮುಂದೆ ನಿಂತಿರುವುದನ್ನು ಕಾಣಬಹುದು.ಸ್ವಲ್ಪ ಸಮಯದಲ್ಲಿಯೇ ಜನರು ಗಾಬರಿಯಿಂದ ಓಡಲು ಪ್ರಾರಂಭಿಸುತ್ತಾರೆ. ಆ ಸಮಯದಲ್ಲಿಯೇ ಆನೆಯೊಂದು ಅಡ್ಡದಿಡ್ಡಿಯಾಗಿ ರಭಸದಲ್ಲಿ ಬಂದು ಬೀದಿಗೆ ನುಗ್ಗಿದೆ. ಜೊತೆಗೆ ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಹಾನಿಗೊಳಿಸಿದೆ. ಈ ಘಟನೆ ಬೀದಿ ಬದಿಯ ಕಟ್ಟಡದ ಹೊರಗೆ ಇರಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲವು ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ವಿಡಿಯೋವನ್ನು ಎರಡು ದಿನಗಳ ಹಿಂದೆ (ಮಾರ್ಚ್ 9) ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಪೋಸ್ಟ್ ಮಾಡಿದ ಎರಡೇ ದಿನಗಳಲ್ಲಿ 2.6 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. 18 ಸಾವಿರ ಲೈಕುಗಳು, 3060 ರೀಟ್ವಿಟ್ಗಳನ್ನು ಕಾಣಬಹುದು. ಜೊತೆಗೆ ಸಾಕಷ್ಟು ಕಾಮೆಂಟ್ಗಳನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:35 pm, Sat, 11 March 23