ಪ್ರತೀ ಬಾರಿ ನಿಮ್ಮ ಸಂತೋಷಕ್ಕಾಗಿ ನೀವು ಇತರರನ್ನು ಅವಲಂಬಿಸಬೇಕಿಲ್ಲ. ನಿಮ್ಮನ್ನು ನೀವು ಸಂತೋಷವಾಗಿಟ್ಟು ಕೊಳ್ಳುವುದು ನಿಮ್ಮದೇ ಜವಾಬ್ದಾರಿಯಾಗಿದೆ. ಇತರರಿಂದ ಸಂತೋಷವನ್ನು ಬಯಸುವುದು ದೊಡ್ಡ ಮೂರ್ಖತನ. ಯಾಕೆಂದರೆ ಅತಿಯಾದ ನಿರೀಕ್ಷೆ ನೋವುಂಟು ಮಾಡಬಹುದು. ಇತ್ತೀಚೆಗಷ್ಟೆ ಮುದ್ದಾದ ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತನ್ನೊಂದಿಗೆ ಆಡಲು ಯಾರಿಲ್ಲ ಎಂಬ ಬೇಜಾರು ಇದಕ್ಕಿಲ್ಲ. ಬದಲಾಗಿ ತನ್ನ ಪಾಡಿಗೆ ಚೆಂಡಿನೊಂದಿಗೆ ಮುದ್ದಾಗಿ ಆಡುತ್ತಿದೆ. ಈ ಮುದ್ದಾದ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇಲ್ಲಿದೆ ನೋಡಿ ವೈರಲ್ ವಿಡಿಯೋ.
?? video made my day ?? pic.twitter.com/zK0ex0EXal
— Ms.पॉजिटिविटी ?? (@No__negativtyxd) April 17, 2023
ವಿಡಿಯೋದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮುದ್ದಾದ ಶ್ವಾನವೊಂದು ಆಡುತ್ತಿರುವುದು ಕಂಡುಬರುತ್ತಿದೆ. ಮೆಟ್ಟಿಲುಗಳ ಮೇಲಿನಿಂದ ಚೆಂಡೊಂದನ್ನು ಕೆಳಕ್ಕೆ ಬಿಸಾಕಿ, ಮತ್ತೇ ಅದೇ ಅದೇ ಚೆಂಡನ್ನು ಮೇಲಕ್ಕೆ ತಂದು, ಮತ್ತೆ ಅದೇ ರೀತಿ ಮೆಟ್ಟಿಲಿನಿಂದ ಕೆಳಗೆ ಹಾಕಿ ಒಂಟಿಯಾಗಿ ತನ್ನ ಪಾಡಿಗೆ ಆಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಬಳಕೆದಾರರು ಎಷ್ಟು ಮುದ್ದಾಗಿದೆ, ಒಂದು ಉತ್ತಮ ಸಂದೇಶ ನೀಡುತ್ತಿದೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ದುಷ್ಟ ಶಕ್ತಿಯಿಂದ ರಕ್ಷಿಸಲು ಶ್ವಾನಗಳೊಂದಿಗೆ ವಿವಾಹ
ಎರಡು ದಿನಗಳ ಹಿಂದೆಯಷ್ಟೇ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಪೋಸ್ಟ್ ಮಾಡಿದ ನಂತರ, ಇದನ್ನು 21,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ ಸಾಕಷ್ಟು ಲೈಕು, ಕಾಮೆಂಟ್ಗಳನ್ನು ಕಾಣಬಹುದು. ಇದು ನಮ್ಮ ಸಂತೋಷಕ್ಕೆ ನಾವೇ ಜವಾಬ್ದಾರರು ಎಂದು ಸಾಬೀತುಪಡಿಸುತ್ತದೆ, ನಮ್ಮನ್ನು ಸಂತೋಷಪಡಿಸಲು ಯಾರೂ ಅಗತ್ಯವಿಲ್ಲ ಎಂದು ಬಳಕೆದಾರರೊಬ್ಬರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ. ನಾವು ನಮ್ಮ ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನು ಈ ವಿಡಿಯೋ ತಿಳಿಸಿಕೊಡುತ್ತಿದೆ ಎಂದು ಕಾಮೆಂಟ್ನಲ್ಲಿ ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: