
Matrimonial : ತನ್ನ ನಿರೀಕ್ಷೆಗೆ ತಕ್ಕಂಥ ಸಂಗಾತಿ ಬೇಕೆಂದು ಹುಡುಗನೂ ಬಯಸುತ್ತಾನೆ, ಹುಡುಗಿಯೂ. ಇದಕ್ಕೆ ಆನ್ಲೈನ್ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳು ಸಾಥ್ ಕೊಡುತ್ತ ಮೂರು ದಶಕಗಳೇ ಕಳೆದವು. ಸಾಕಷ್ಟು ಜನರ ಮದುವೆಗೂ (Marriage) ಇವು ಸಾಕ್ಷಿಯಾದವು ಮತ್ತು ಆಗುತ್ತಲೇ ಇವೆ. ಆದರೆ ಇಲ್ಲೊಬ್ಬಳು ಹುಡುಗಿ ಆಯ್ಕೆಯ ಗೊಂದಲದಲ್ಲಿದ್ದಾಳೆ. 14 ಹುಡುಗರನ್ನು ಶಾರ್ಟ್ಲಿಸ್ಟ್ ಮಾಡಿದ ಆಕೆ ಯಾವ ಹುಡುಗನನ್ನು ಮದುವೆಯಾದರೆ ಒಳ್ಳೆಯದು ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾಳೆ. ಈಕೆ ಲಿಸ್ಟ್ ಮಾಡಿದ ಹುಡುಗರು ಬೈಜೂಸ್, ಡೆಲಾಯ್ಡ್, ಟಿಸಿಎಸ್ ಮುಂತಾದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ವಾರ್ಷಿಕ ಆದಾಯ ರೂ. 14 ಲಕ್ಷದಿಂದ ರೂ 45 ಲಕ್ಷ.
‘ನನಗೆ 29 ವರ್ಷ. ಬಿಕಾಂ ಓದಿದ್ದೇನೆ ಆದರೆ ಸದ್ಯ ಉದ್ಯೋಗದಲ್ಲಿಲ್ಲ. ಈ 14 ಹುಡುಗರೊಂದಿಗೆ ಸಂವಹನ ನಡೆಸುತ್ತಿದ್ದೇನೆ. ಆದರೆ ಮದುವೆಯಾಗಲು ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿದ್ದೇನೆ, ದಯವಿಟ್ಟು ಸಹಾಯ ಮಾಡಿ’ ತಪ್ಪೊಪ್ಪಿಗೆ ಎಂಬ ಶೀರ್ಷಿಕೆಯಡಿ ಈಕೆ ಆ ವಿವಾಹಾಕಾಂಕ್ಷಿಗಳ ವಯಸ್ಸು, ಊರು, ಕಂಪೆನಿ, ವಾರ್ಷಿಕ ಆದಾಯವನ್ನು ಪಟ್ಟಿ ಮಾಡಿದ್ದಾಳೆ. ಈ ಪಟ್ಟಿ ಅಂತರ್ಜಾಲದಲ್ಲಿ ಭಾರೀ ಚರ್ಚೆಗೀಡು ಮಾಡುತ್ತಿದೆ.
ಇದನ್ನೂ ಓದಿ : Viral Video: ಸಂಚಾರಿ ನಿಯಮ ಮುರಿದ ಜೋಡಿ; ವಿಡಿಯೋಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು
ಆದರೆ ರೂ. 45 ಲಕ್ಷ ವಾರ್ಷಿಕ ಆದಾಯವಿರುವ ವ್ಯಕ್ತಿಗಳು, ವೈದ್ಯರುಗಳು ನಿರುದ್ಯೋಗಿಯಾಗಿರುವ ಈ ಹುಡುಗಿಯೆಡೆ ಆಸಕ್ತಿ ತೋರಿಸುತ್ತಿದ್ದಾರೆಂದರೆ, ಅವರಿಗೆ ತುಂಬಾ ಮುಖ್ಯವಾದಂಥ ಯಾವುದೇ ನ್ಯೂನತೆಗಳು ಇಲ್ಲ ತಾನೇ? ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈಕೆ ಯಾಕೆ ಉದ್ಯೋಗದಲ್ಲಿಲ್ಲ? ಈಕೆ ತಾನು ಮದುವೆಯಾಗಬಯಸುವ ಹುಡುಗರಿಂದ ಏನನ್ನು ನಿರೀಕ್ಷಿಸುತ್ತಿದ್ದಾಳೆ? ಎಂದೂ ಕೇಳುತ್ತಿದ್ಧಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:49 am, Wed, 19 July 23