Viral News: ಪ್ಲಾಸ್ಟಿಕ್ ಸರ್ಜರಿಯ ಬಳಿಕ ಡ್ರೈವಿಂಗ್‌ ಲೈಸೆನ್ಸ್‌ ರಿನಿವಲ್​​​ ಮಾಡಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿದ ಮಹಿಳೆ

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ಲಾಸ್ಟಿಕ್ ಸರ್ಜರಿಯಿಂದ ತನ್ನ ಮುಖದ ಆಕಾರವನ್ನೇ ಬದಲಾಯಿಸಿಕೊಂಡಿದ್ದ ಬ್ರೆಜಿಲ್​​ನ ಡೆನಿಸ್ ರೋಚಾ ಎಂಬ ಮಹಿಳೆ ಡ್ರೈವಿಂಗ್ ಲೈಸೆನ್ಸ್ ನವೀಕರಣವಾಗದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಲೈಸೆನ್ಸ್‌ನಲ್ಲಿರುವ ಮುಖವು ಡೆನ್ನಿಸ್ ಅವರ ಈಗಿರುವ ಮುಖಕ್ಕೆ ಹೊಂದಿಕೆಯಾಗುತ್ತಿಲ್ಲ.

Viral News: ಪ್ಲಾಸ್ಟಿಕ್ ಸರ್ಜರಿಯ ಬಳಿಕ ಡ್ರೈವಿಂಗ್‌ ಲೈಸೆನ್ಸ್‌  ರಿನಿವಲ್​​​ ಮಾಡಲು ಸಾಧ್ಯವಾಗದೇ ಸಮಸ್ಯೆಗೆ ಸಿಲುಕಿದ ಮಹಿಳೆ
ಡೆನಿಸ್ ರೋಚಾ
Image Credit source: instagram

Updated on: Nov 22, 2023 | 12:05 PM

ಫ್ಯಾಷನ್​​ ಲೋಕದಲ್ಲಿ ತಾನೂ ಕೂಡ ಗೊಂಬೆಯಂತೆ ಕಾಣಬೇಕು ಎಂದು ನೈಸರ್ಗಿಕ ಸೌಂದರ್ಯ(Natural Beauty) ವನ್ನು ಇಷ್ಟ ಪಡದೇ ಪ್ಲಾಸ್ಟಿಕ್ ಸರ್ಜರಿ(Plastic surgery)  ಮಾಡಿಸುವುದು ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್​ ಆಗಿಬಿಟ್ಟಿದೆ. ಕೆಲವರು ಮುಖಕ್ಕೆ ಮಾತ್ರ ಸರ್ಜರಿ ಮಾಡಿಸಿಕೊಂಡರೆ ಇನ್ನು ಕೆಲವರು ಕೋಟಿ ಕೋಟಿ ಹಣ ಸುರಿದು ಇಡೀ ದೇಹವನ್ನೇ ಸರ್ಜರಿಯಿಂದ ಬದಲಾಯಿಸುತ್ತಾರೆ. ಈ ಪ್ಲಾಸ್ಟಿಕ್ ಸರ್ಜರಿಯಿಂದ ಕೆಲವರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇತ್ತೀಚೆಗೆ ಮಹಿಳೆಯೊಬ್ಬರು ಇದೇ ರೀತಿ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಹೌದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ಲಾಸ್ಟಿಕ್ ಸರ್ಜರಿಯಿಂದ ತನ್ನ ಮುಖದ ಆಕಾರವನ್ನೇ ಬದಲಾಯಿಸಿಕೊಂಡಿದ್ದ ಬ್ರೆಜಿಲ್​​ನ ಡೆನಿಸ್ ರೋಚಾ ಎಂಬ ಮಹಿಳೆ ಡ್ರೈವಿಂಗ್ ಲೈಸೆನ್ಸ್ ನವೀಕರಣ ವಾಗದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಡೆನ್ನಿಸ್ ಮೊದಲು ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಪ್ಲಾಸ್ಟಿಕ್ ಸರ್ಜರಿ ಮೂಲಕ ತನ್ನ ನೋಟವನ್ನು ಬದಲಾಯಿಸಲು ಮೂರು ಲಕ್ಷ ಡಾಲರ್ ಅಂದರೆ ಸುಮಾರು 2.5 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಆಕೆಯ ಗ್ಲಾಮರ್ ಕಂಡು ಜನರು ಆಕೆಯನ್ನು ‘ವಿಶ್ವದ ಹಾಟೆಸ್ಟ್ ಲಾಯರ್’ ಎಂದು ಕರೆಯುತ್ತಾರೆ. ಆದರೆ ಆಕೆಯ ಕೃತಕ ಗ್ಲಾಮರ್​​​ನಿಂದಾಗಿ ಡ್ರೈವಿಂಗ್‌ ಲೈಸೆನ್ಸ್‌ ರಿನಿವಲ್​​​ ಆಗುತ್ತಿಲ್ಲ. ಏಕೆಂದರೆ ಲೈಸೆನ್ಸ್‌ನಲ್ಲಿರುವ ಮುಖವು ಡೆನ್ನಿಸ್ ಅವರ ಈಗಿರುವ ಮುಖಕ್ಕೆ ಹೊಂದಿಕೆಯಾಗುತ್ತಿಲ್ಲ.

ಇದನ್ನೂ ಓದಿ: ಕದಿಯಲು ಬಂದಿದ್ದ ಕಳ್ಳ ನಿದ್ರೆಗೆ ಜಾರಿದ, ಗೊರಕೆಯ ಸದ್ದಿಗೆ ಪೊಲೀಸರಿಗೆ ಮಾಹಿತಿ ನೀಡಿದ ಮನೆಯವರು

ಇತ್ತೀಚೆಗಷ್ಟೇ ತಾನು ಸಂಗಾತಿಯನ್ನು ಹುಡುಕುತ್ತಿರುವೆ ಎಂದು ಸೋಶಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡು ಭಾರೀ ಸುದ್ದಿಯಲ್ಲಿದ್ದ ಡೆನಿಸ್. ಆದರೆ ಇದೀಗಾ ಮತ್ತೆ ಆಕೆಯ ಡ್ರೈವಿಂಗ್ ಲೈಸೆನ್ಸ್ ನವೀಕರಣವಾಗುತ್ತಿಲ್ಲ ಎಂಬ ಕಾರಣಕ್ಕೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: