Video: ಹಸಿವು ನೀಗಿಸಿ, ಬಟ್ಟೆ ಕೊಡಿಸಿ ವೃದ್ಧೆಯ ಪಾಲಿಗೆ ದೇವರಾದ ಯುವಕ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಗುರುತು ಪರಿಚಿಯವಿಲ್ಲದ ವ್ಯಕ್ತಿಗಳಿಗೆ ಸಹಾಯ ಮಾಡುವ ವ್ಯಕ್ತಿಗಳನ್ನು ಕಂಡಾಗ ಒಳ್ಳೆಯ ಜನರು ಇದ್ದಾರೆ ಎನಿಸುತ್ತದೆ. ಇದೀಗ ಯುವಕನೊಬ್ಬ ಭಿಕ್ಷೆ ಬೇಡುತ್ತಿರುವ ಅಜ್ಜಿಯ ಹೊಟ್ಟೆಯ ಹಸಿವು ನೀಗಿಸಿ ಪುಣ್ಯಾತ್ಮ ಎನಿಸಿಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

Video: ಹಸಿವು ನೀಗಿಸಿ, ಬಟ್ಟೆ ಕೊಡಿಸಿ ವೃದ್ಧೆಯ ಪಾಲಿಗೆ ದೇವರಾದ ಯುವಕ
ವೈರಲ್‌ ವಿಡಿಯೋ
Image Credit source: Instagram

Updated on: Dec 01, 2025 | 5:03 PM

ಒಳ್ಳೆಯ ಕೆಲಸಗಳು ನಮ್ಮನ್ನು ಸದಾ ಕಾಯುತ್ತದೆ ಎನ್ನುವ ಮಾತಿದೆ. ಹೀಗಾಗಿ ಕೆಲವರು ಕಷ್ಟದಲ್ಲಿರುವವರಿಗೆ, ವೃದ್ಧರಿಗೆ, ಕೈಲಾದವರಿಗೆ ತಮ್ಮ ಕೈಲಾದಷ್ಟು ಸಹಾಯ (help) ಮಾಡಿ ದೊಡ್ಡವರೆನಿಸಿಕೊಳ್ಳುತ್ತಾರೆ. ಇದೀಗ ಇಂತಹದ್ದೇ ಹೃದಯಸ್ಪರ್ಶಿ ದೃಶ್ಯ ಇಲ್ಲಿದೆ. ಯುವಕನೊಬ್ಬ ಅಜ್ಜಿಯ (old woman) ಹಸಿವು ನೀಗಿಸಿ, ಬಟ್ಟೆ ಕೊಡಿಸಿ ಆಕೆಯ ಪಾಲಿಗೆ ದೇವರಾಗಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

whomakeshappy ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವಕನೊಬ್ಬ ಅಜ್ಜಿಗೆ ಸಹಾಯ ಮಾಡುವುದನ್ನು ನೋಡಬಹುದು. ಹೌದು, ಸಿಗ್ನಲ್‌ನಲ್ಲಿ ನಿಂತ ವಾಹನ ಸವಾರರ ಬಳಿ ಅಜ್ಜಿಯೊಬ್ಬರು ಭಿಕ್ಷೆ ಬೇಡುತ್ತಿರುವುದನ್ನು ಕಾಣಬಹುದು. ಈ ವೇಳೆ ಯುವಕನೊಬ್ಬ ಅಜ್ಜಿಯನ್ನು ಕರೆದು ಏನು ಬೇಕು ಎಂದು ಕೇಳಿ ಕೊನೆಗೆ ತನ್ನ ಕೈಯಲ್ಲಿದ್ದ ಹಣ್ಣನ್ನು ನೀಡಿದ್ದಾನೆ. ಆ ಬಳಿಕ ಇಲ್ಲೇ ಇರಿ ನಾನು ಏನಾದ್ರು ತರ್ತೇವೆ ಎಂದು ಹೇಳಿ ಚಳಿಗೆ ಸ್ವೆಟರ್ ತಂದು ಅಜ್ಜಿಯ ಕೈಯಲ್ಲಿ ಇಟ್ಟಿದ್ದಾನೆ. ಈ ಹಿರಿಜೀವ ಕೈ ಮುಗಿದು ಕೃತಜ್ಞತೆಯನ್ನು ಸಲ್ಲಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಜೀವನಕ್ಕಾಗಿ ಮೆಕ್ಯಾನಿಕ್ ಕೆಲಸ, ಪ್ರಾಣಿಗಳೇ ಈತನ ಪ್ರಪಂಚ; ಇದು ಕುದುರೆಮುಖದ ರೂಬನ್ ಜೀವನದ ಕಥೆ

ಈ ವಿಡಿಯೋ ಇದುವರೆಗೆ ನಲವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಒಳ್ಳೆಯ ಕೆಲಸ ಎಂದಿದ್ದಾರೆ. ಇನ್ನೊಬ್ಬರು, ಆ ದೇವ್ರು ಒಳ್ಳೆಯ ಕೆಲಸ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ