ಯಹೂದಿ ಸಂಪ್ರದಾಯಗಳ ಸಾರವನ್ನು ಸೆರೆಹಿಡಿಯುವ ಮೂಲಕ 15 ವರ್ಷಗಳ ಬಳಿಕ ಕೇರಳದಲ್ಲಿನ ಯಹೂದಿ ಕುಟುಂಬವೊಂದು, ಭಾನುವಾರ ತಮ್ಮ ಸಾಂಪ್ರದಾಯಿಕ ವಿವಾಹವನ್ನು ಆಚರಿಸಿತು. ಖಾಸಗಿ ರೆಸಾರ್ಟ್ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ, ಸ್ನೇಹಿತರು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದರು. ಮತ್ತು ಇಸ್ರೇಲ್ನ ರಬ್ಬಿಯೊಬ್ಬರು ವಿವಾಹವನ್ನು ನೆರವೇರಿಸಿದರು. ಅಪರಾಧ ವಿಭಾಗದ ಮಾಜಿ ಎಸ್.ಪಿ ಬೆನೊಯ್ ಮಲಾಖೈ ಅವರ ಮಗಳು ಅಮೇರಿಕಾದಲ್ಲಿ ಡೇಟಾ ಸೈಂಟಿಸ್ಟ್ ಆಗಿರುವ ರಾಚೆಲ್ ಮಲಾಖೈ, ಅಮೇರಿಕಾದ ಪ್ರಜೆ ಮತ್ತು ನಾಸಾ ಎಂಜಿನಿಯರಿಂಗ್ ರಿಚರ್ಡ್ ಜಕಾರಿ ರೋವ್ ಅವರ ವಿವಾಹ ಕಾರ್ಯಕ್ರಮ ಇದಾಗಿತ್ತು.
ಇಸ್ರೇಲ್ನ ರಬ್ಬಿ (ಯಹೂದಿಯರ ಗುರು) ಏರಿಯಲ್ ಟೈಸನ್ ವಿವಾಹವನ್ನು ನೆರವೇರಿಸಿದರು. ಮದುವೆಯ ಸಮಾರಂಭವು ಹುಪ್ಪಾ ಎಂಬ ಮೇಲಾವರಣದ ಅಡಿಯಲ್ಲಿ ನಡೆಯಿತು, ಕೇರಳದ ಸಿನಗಾಗ್ (ಯಹೂದಿಯರ ದೇವಾಲಯ) ನ ಹೊರಗೆ ನಡೆದ ಮೊದಲ ಮದುವೆ ಇದಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೇರಳದಲ್ಲಿ ಇಂತಹ ವಿವಾಹಗಳು ಅಪರೂಪವಾಗಿ ನಡೆಯುವುದರಿಂದ ಈ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ. ಕೇರಳದಲ್ಲಿ ಕೊನೆಯ ಯಹೂದಿ ವಿವಾಹವು 2008ರಲ್ಲಿ ನಡೆದಿತ್ತು. ಇದಾಗಿ ಬರೋಬ್ಬರಿ 15 ವರ್ಷಗಳ ನಂತರ ಯಹೂದಿ ವಿವಾಹವು ನಡೆದಿದೆ.
#WATCH | Kerala: Kochi witnessed its first Jewish wedding in 15 years on 21st May, when Rachel and Richard tied the knot at a resort. The marriage was officiated by a Rabbi from Israel.
Rachel is the daughter of former Crime Branch Superintendent Binoy Malakhai while Richard is… pic.twitter.com/UNEroILNOb
— ANI (@ANI) May 22, 2023
ಸಿನಗಾಗ್ನಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆ, ಕುಟುಂಬದ ಇತರ ಸದಸ್ಯರು ಹಾಗೂ ಸ್ನೇಹಿತರು ಆಚರಣೆಗಳಲ್ಲಿ ಭಾಗಿಯಾಗಲು ಅವಕಾಶ ನೀಡುವ ಸಲುವಾಗಿ ಖಾಸಗಿ ರೆಸಾರ್ಟ್ನಲ್ಲಿ ವಿವಾಹ ಸಮಾರಂಭವನ್ನು ನೆರವೇರಿಸಲಾಯಿತು ಹಾಗೂ ಸುಮಾರು 300 ಅಥಿತಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:Viral Video : ಲತಾ ಮಂಗೇಶ್ಕರ್ ‘ಕ್ರಾಂತಿ’ ಹಾಡಿಗೆ ವೃದ್ಧದಂಪತಿ ಲಿಪ್ ಸಿಂಕ್; 2 ಮಿಲಿಯನ್ ವೀಕ್ಷಣೆ
ಕೆಲವು ಇತಿಹಾಸಗಳ ಪ್ರಕಾರ, ಸುಮಾರು 2,000 ವರ್ಷಗಳ ಹಿಂದೆ ಅಂದರೆ ರಾಜ ಸೊಲೊಮೋನನ ಕಾಲದಲ್ಲಿ ಯಹೂದಿಗಳು ವ್ಯಾಪಾರಕ್ಕೆಂದು ಕೇರಳಕ್ಕೆ ಬಂದರು. ಇದೀಗ ಕೇವಲ ಕೆಲವು ಯಹೂದಿ ಕುಟುಂಬಗಳು ಕೇರಳದಲ್ಲಿವೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:21 pm, Mon, 22 May 23