
ವೇಗದ ಜೀವನದಲ್ಲಿ ಸ್ಪರ್ಧೆಗಳೇ ಹೆಚ್ಚು. ಹೀಗಾಗಿ ಕೆಲಸ (job) ಯಾವುದಾದರೂ ಅದರಲ್ಲಿ ಒತ್ತಡ ಇದ್ದೇ ಇರುತ್ತೆ. ಒತ್ತಡವನ್ನು ನಿಭಾಯಿಸಿಕೊಂಡು ಜೀವನ ನಡೆಸುವುದು, ಮಾನಸಿಕ ನೆಮ್ಮದಿ ಕಾಯುವುದು ಒಂದು ಕಲೆ. ಹೈದರಾಬಾದ್‌ನ ಅಮೆಜಾನ್‌ನಲ್ಲಿ ( Amazon) ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಬಹುತೇಕ ಉದ್ಯೋಗಿಗಳು ಎಲ್ಲಾ ಸಮಯದಲ್ಲೂ ಲಭ್ಯವಿದ್ದು ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಅನುಭವಿಸುವ ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಕೆಲಸದ ಸ್ಥಳದಲ್ಲಿ ತನ್ನ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಕೆಲವು ಅಭ್ಯಾಸಗಳನ್ನು ನಿಲ್ಲಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ಉದ್ಯೋಗಿ ಕಂಡುಕೊಂಡ ಮಾರ್ಗವನ್ನು ಮೆಚ್ಚಿಕೊಂಡಿದ್ದಾರೆ.
ದೀಪಿಕಾ (deepika.not.padukone) ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ
ಕೆಲಸದಲ್ಲಿ ನನ್ನ ಮಾನಸಿಕ ಶಾಂತಿಯನ್ನು ಕಾಪಾಡಲು ನಾನು ಮಾಡುವುದನ್ನು ನಿಲ್ಲಿಸಿದ ಕೆಲಸಗಳು ಎಂದು ಬರೆದುಕೊಂಡಿದ್ದಾರೆ. ನನ್ನ ಶಾಂತಿಯನ್ನು ರಕ್ಷಿಸುವುದು, ನನ್ನ ಮೌಲ್ಯವನ್ನು ಸಾಬೀತುಪಡಿಸುವುದು ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಈವಿಡಿಯೋದಲ್ಲಿ ಕೆಲಸದಲ್ಲಿ ಪರಿಪೂರ್ಣವಾಗಿರುವುದು ಎಂದರೆ ಎಲ್ಲದಕ್ಕೂ ಹೌದು ಎಂದು ಹೇಳುವುದು. 24/7 ಲಭ್ಯವಿರುವುದು ಎಂದು ನಾನು ಭಾವಿಸುತ್ತಿದ್ದೆ. ಈಗ, ನನ್ನ ವೃತ್ತಿಜೀವನಕ್ಕೆ ನಾನು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ವಾಸ್ತವವಾಗಿ ಅಂಟಿಕೊಳ್ಳುವ ಗಡಿಗಳನ್ನು ಹೊಂದಿಸುವುದು ಎಂದು ನಾನು ಅರಿತುಕೊಂಡಿದ್ದೇನೆ. ಇನ್ನು ಮುಂದೆ ಯಾವುದೇ ಸಂದೇಶಕ್ಕೆ ತ್ವರಿತ ಉತ್ತರಗಳಿಲ್ಲ. ಪ್ರತಿ ಸಂದೇಶ ಬಂದ ತಕ್ಷಣ ಪ್ರತಿಕ್ರಿಯಿಸುವ ಒತ್ತಡವನ್ನು ನಾನು ಅನುಭವಿಸುವುದಿಲ್ಲ ಎಂದಿದ್ದಾರೆ.
ಇನ್ನಷ್ಟು ಕೆಲಸ ಸ್ವೀಕರಿಸುವ ಮೊದಲು ತನ್ನದೇ ಆದ ಬ್ಯಾಂಡ್‌ವಿಡ್ತ್ ಅನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇನೆ. ಕೈ ತುಂಬಾ ಕೆಲಸವಿರುವಾಗ ನಾನು ಕೆಲಸಗಳಿಗೆ “ಹೌದು” ಎಂದು ಹೇಳುವುದನ್ನು ನಿಲ್ಲಿಸಿದ್ದೇನೆ. ಸಣ್ಣ ವಿಷಯಗಳಿಗೆ ತನ್ನನ್ನು ತಾನು ವಿವರಿಸಿಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಮೌನ ಕೆಲವೊಮ್ಮೆ ಸ್ವೀಕಾರಾರ್ಹ ಎಂದು ಕಲಿತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕೆಲಸದ ದಿನ ಮುಗಿದ ನಂತರ, ದೈಹಿಕವಾಗಿ ಮತ್ತು ಮಾನಸಿಕವಾಗಿ ಲಾಗ್ ಔಟ್ ಆಗಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತೇನೆ. ತಮ್ಮ ವೃತ್ತಿಜೀವನದ ಪ್ರಯಾಣವನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿದ್ದೇನೆ. ಸೂಚನೆಗಳನ್ನು ಊಹಿಸಿ ಅವುಗಳ ಮೇಲೆ ಒತ್ತಡ ಹೇರುವ ಬದಲು ಸ್ಪಷ್ಟತೆ ಕೇಳಲು ತಾನು ಇಷ್ಟಪಡುತ್ತೇನೆ. ನನ್ನ ವಿವೇಕವನ್ನು ಹಾಗೆಯೇ ಇಟ್ಟುಕೊಳ್ಳುವುದರ ಜೊತೆಗೆ ಉತ್ತಮವಾಗಿ ಇರಲು ಈ ಪ್ರಯತ್ನಗಳು ಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ನೀಡಿದ್ರೂ ಕಂಪನಿ ಕೆಲಸದ ಕೊನೆಯ ದಿನವನ್ನು ದೃಢಪಡಿಸಿಲ್ಲ; ನೆಟ್ಟಿಗರಲ್ಲಿ ಸಲಹೆ ಕೇಳಿದ ಉದ್ಯೋಗಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ತುಂಬಾ ಯೋಚನೆ ಮಾಡುವ ವಿಷಯವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಾನಸಿಕ ಶಾಂತಿ ಒಪ್ಪಲು ಈ ಬದಲಾವಣೆಗಳು ಅಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Tue, 23 June 26