AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ರಾಜೀನಾಮೆ ನೀಡಿದ್ರೂ ಕಂಪನಿ ಕೆಲಸದ ಕೊನೆಯ ದಿನವನ್ನು ದೃಢಪಡಿಸಿಲ್ಲ; ನೆಟ್ಟಿಗರಲ್ಲಿ ಸಲಹೆ ಕೇಳಿದ ಉದ್ಯೋಗಿ

ಕಂಪನಿಯಿಂದ ಉದ್ಯೋಗ ತೊರೆಯುವಾಗ ಔಪಚಾರಿಕವಾಗಿ ರಾಜೀನಾಮೆ ನೀಡಲಾಗುತ್ತದೆ. ಇದೇ ವೇಳೆ ಕಂಪನಿಗಳು ತೊಂಭತ್ತು ದಿನಗಳ ಕಾಲ ನೋಟೀಸ್ ಅವಧಿಯನ್ನು ನೀಡುತ್ತವೆ. ಆದರೆ ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿದ್ರೂ ಕಂಪನಿ ಕೆಲಸದ ಕೊನೆಯ ದಿನವನ್ನು ದೃಢೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಹೊಸ ಕಂಪನಿಗೆ ಸೇರಬೇಕಾಗಿದೆ, ತಾನೇನು ಮಾಡಬೇಕು ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ರಾಜೀನಾಮೆ ನೀಡಿದ್ರೂ ಕಂಪನಿ ಕೆಲಸದ ಕೊನೆಯ ದಿನವನ್ನು ದೃಢಪಡಿಸಿಲ್ಲ; ನೆಟ್ಟಿಗರಲ್ಲಿ ಸಲಹೆ ಕೇಳಿದ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Jun 22, 2026 | 6:56 PM

Share

ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳು (employee) ಅನುಭವಿಸುವ ಒತ್ತಡ ಹೇಳಲಾಗದು. ಕೆಲ ಕಂಪನಿಗಳು ರಾಜೀನಾಮೆ ನೀಡುವ ಸಂದರ್ಭದಲ್ಲೂ ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತವೆ. ರಾಜೀನಾಮೆ ನೀಡಿ ಒಂದೂವರೆ ತಿಂಗಳಾದರೂ ಕಂಪನಿಯು ತನ್ನ ಕೆಲಸದ ಕೊನೆಯ ದಿನವನ್ನು ಔಪಚಾರಿಕವಾಗಿ ದೃಢಪಡಿಸಿಲ್ಲ. ಹೊಸ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವ ದಿನಾಂಕ ಹತ್ತಿರ ಬರುತ್ತಿದೆ. ಆದರೆ ಈ ಕಂಪನಿಯ ವಿಳಂಬವು ತಮ್ಮನ್ನು ಆತಂಕಕ್ಕೆ ದೂಡಿದೆ ಎಂದು ಉದ್ಯೋಗಿ ಎಂದು ಹೇಳಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಡೆವಲಪರ್ಸ್ ಇಂಡಿಯಾ (r/developersIndia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಕಂಪನಿ ನನಗೆ ಕೆಲಸದ ಕೊನೆಯ ದಿನವನ್ನು ಖಚಿತ ಪಡಿಸಿಲ್ಲ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಏಳು ತಿಂಗಳ ಹಿಂದೆ ಭಾರತೀಯ ಉತ್ಪನ್ನ ಕಂಪನಿಯನ್ನು ಸೇರಿದ್ದೆವು. ಆದರೆ ಕೆಲಸದ ವಾತಾವರಣ ವೃತ್ತಿಪರವಾಗಿ ಉತ್ತಮವಾಗಿಲ್ಲದ ಕಾರಣ ತ್ಯಜಿಸಲು ನಿರ್ಧರಿಸಿದೆ. ನಾನು ನನ್ನ ಹೊಸ ಉದ್ಯೋಗದಾತರಿಗೆ 90 ದಿನಗಳ ನಂತರ ಕೆಲಸಕ್ಕೆ ಸೇರುವ ದಿನಾಂಕವನ್ನು ಹೇಳಿದೆ. ಅದಕ್ಕೆ ಅವರು ಒಪ್ಪಿಕೊಂಡರು ಎಂದಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

Reddit Post

ಹಲವಾರು ಫಾಲೋ-ಅಪ್ ಮೇಲ್‌ಗಳು, ಹೆಚ್ ಆರ್ ಕರೆಗಳು, ಹೆಚ್ ಆರ್ ಬಿಪಿ ಸುತ್ತು ಮತ್ತು ನಿರ್ಗಮನ ಸಂದರ್ಶನಗಳ ಹೊರತಾಗಿಯೂ, ಯಾರೂ ತನ್ನ ರಾಜೀನಾಮೆ ಮೇಲ್‌ಗೆ ಔಪಚಾರಿಕವಾಗಿ ಪ್ರತಿಕ್ರಿಯಿಸಿಲ್ಲ. ನನ್ನ ಕೊನೆಯ ಕೆಲಸದ ದಿನವನ್ನು ದೃಢೀಕರಿಸಿಲ್ಲ ಎಂದು ಬರೆದುಕೊಂಡಿದ್ದಾರೆ.

ನನ್ನ ಮ್ಯಾನೇಜರ್ ವಾಟ್ಸಾಪ್ ಕರೆಯಲ್ಲಿ ನನ್ನ ಬದಲಿಗೆ ಉದ್ಯೋಗಿಯನ್ನು ಹುಡುಕುತ್ತಿದ್ದಾರೆ. ಉದ್ಯೋಗಿ ಸಿಕ್ಕ ಮೂರು ವಾರಗಳ ನಂತರ ಕೆಲಸ ಬಿಡಲು ಹೇಳುತ್ತಾರೆ. ಆದರೆ, ಮುಂದೆ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಹೆಚ್ಚಿನ ಹಾನಿಯಾಗದಂತೆ ಈ ಸಂದರ್ಭವಂನ್ನಿ ಹೇಗೆ ಎದುರಿಸುವುದು ಎಂಬುದರ ಕುರಿತು ಯಾವುದೇ ಸಲಹೆಗಳಿವೆಯೇ? ನಾನು ಹೊಸ ಸಂಸ್ಥೆ ಸೇರುವ ದಿನಾಂಕ ಹತ್ತಿರವಾಗುತ್ತಿದ್ದಂತೆ ನನಗೆ ತುಂಬಾ ಆತಂಕವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಿಂಗಳ ಸಂಬಳ 3.5 ಲಕ್ಷ ರೂಯಿದ್ರೂ ಉಳಿತಾಯ ಮಾತ್ರ ಶೂನ್ಯ; ಬೆಂಗಳೂರಿನ ವ್ಯಕ್ತಿ ಹೀಗೆಂದಿದ್ದೇಕೆ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ರಾಜೀನಾಮೆ ಏಕಪಕ್ಷೀಯ ಪ್ರಕ್ರಿಯೆ. ನೀವು ರಾಜೀನಾಮೆ ನೀಡಿ, ನೋಟಿಸ್ ಅವಧಿಯನ್ನು ಪೂರೈಸಿ ಹಾಗೂ ನೋಟಿಸ್ ಅವಧಿ ಮುಗಿದ ನಂತರ ಹೊರಡಿ. ನಿರ್ಗಮನ ಔಪಚಾರಿಕತೆಗಳನ್ನು ಪೂರ್ಣಗೊಳಿಸದಿದ್ದರೆ, ಸರ್ಕಾರಿ ಪೋರ್ಟಲ್‌ನಲ್ಲಿ ದೂರು ದಾಖಲಿಸಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಅವರ ಗುಲಾಮರಲ್ಲ. ನಿಮ್ಮ ರಾಜೀನಾಮೆ ಇಮೇಲ್ ಕಳುಹಿಸಿದ ದಿನಾಂಕದಿಂದ 90 ದಿನಗಳು ನಿಮ್ಮ ಕೊನೆಯ ಕೆಲಸದ ದಿನವಾಗಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ