
ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಈ ಶ್ವಾನಗಳು (Dogs). ಅವುಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಇಲ್ಲ. ಮನೆಯಲ್ಲಿ ಯಾರಾದ್ರೂ ತಿಂಡಿ ತಿನ್ನುತ್ತಿದ್ದರೆ ತನಗೆ ಬೇಕು ಮುದ್ದಿನ ಶ್ವಾನ ತನಗೆ ಕೊಡು ಎನ್ನುವಂತೆ ಹಠ ಹಿಡಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಶ್ವಾನಕ್ಕೆ ಬಾಳೆ ಹಣ್ಣು ಬೇಕಂತೆ. ಹೌದು, ಮನೆ ಮಾಲೀಕನ ಮುಂದೆ ಕುಳಿತು ಹಣ್ಣು ಕೊಡು ಎನ್ನುವಂತೆ ಬೊಗಳುತ್ತಾ ಕುಳಿತ ಶ್ವಾನದ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
ಟೈಸಾನ್ ಮೈ ಬಾಯ್ (tyson my boy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆಮಾಲೀಕನ ಸೋಫಾದ ಮೇಲೆ ಕುಳಿತುಕೊಂಡಿದ್ದಾನೆ. ಬಾಳೆ ಹಣ್ಣು ನಾಳೆ ತಂದು ಕೊಡ್ತೇನೆ, ಖಾಲಿಯಾಯ್ತು ಅಂದ್ರು ಶ್ವಾನ ಮಾತ್ರ ಬೊಗಳುವುದನ್ನು ಮಾತ್ರ ನಿಲ್ಲಿಸಿಲ್ಲ. ನಂಗೆ ಈಗ್ಲೇ ತಂದು ಕೊಡು ಎನ್ನುವಂತೆ ಮನೆ ಮಾಲೀಕನ ಬಳಿ ಹಠ ಹಿಡಿದು ಕುಳಿತಿದೆ. ಕೊನೆಗೆ ಮನೆ ಒಡತಿ ನಾಳೆ ತಂದು ಕೊಡ್ತೇನೆ ಎಂದು ಸಮಾಧಾನ ಪಡಿಸಿ, ತನ್ನ ಹತ್ತಿರಕ್ಕೆ ಕರೆದಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ಶ್ವಾನಕ್ಕೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಾಲು ಕಾಲು ಹಾಕೊಂಡು ಆರ್ಡರ್ ಮಾಡ್ತವ್ನೆ, ದಯವಿಟ್ಟು ತಂದು ಕೊಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಬಾಳೆ ಹಣ್ಣು ಕೊಡಿ, ಜೀರ್ಣಕ್ರಿಯೆಗೆ ಒಳ್ಳೆಯದು ಎಂದಿದ್ದಾರೆ. ಮತ್ತೊಬ್ಬರು, ದೊಡ್ಡವರ ಮಾತು ಕೇಳ್ಬೇಕು, ಇಷ್ಟು ಹಠ ಒಳ್ಳೆಯದಲ್ಲ ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ