Video: ಬಾಯಿಯಿಂದ ಗಾಳಿ ಹೊರಹಾಕುವುದರಲ್ಲೂ ಗಿನ್ನಿಸ್​ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾದ ವ್ಯಕ್ತಿ; ಇವರು ತೇಗುವ ಶಬ್ದಕ್ಕೆ ಭಯವಾಗದೆ ಇರದು !

| Updated By: Lakshmi Hegde

Updated on: Dec 02, 2021 | 10:58 AM

ನೆವಿಲ್ಲೆ ಈ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದು ಅವರ ಪತ್ನಿಯಂತೆ. ಗಟ್ಟಿಯಾಗಿ, ಹೆಚ್ಚಿನ ಶಬ್ದವನ್ನು ಹೊಂದಿ ತೇಗುವುದನ್ನು ಕಲಿಯಲು 5ವರ್ಷ ಅವರು ನಿರಂತರ ಅಭ್ಯಾಸ ಮಾಡಿದ್ದಾರಂತೆ.

Video: ಬಾಯಿಯಿಂದ ಗಾಳಿ ಹೊರಹಾಕುವುದರಲ್ಲೂ ಗಿನ್ನಿಸ್​ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾದ ವ್ಯಕ್ತಿ; ಇವರು ತೇಗುವ ಶಬ್ದಕ್ಕೆ ಭಯವಾಗದೆ ಇರದು !
ತೇಗುವುದರಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ ವ್ಯಕ್ತಿ
Follow us on

ಈ ಜನ ಯಾವ್ಯಾವ ವಿಚಾರದಲ್ಲೆಲ್ಲ ಗಿನ್ನಿಸ್​ ವಿಶ್ವದಾಖಲೆ ನಿರ್ಮಿಸಲು ಮುಂದಾಗುತ್ತಾರೆ ನೋಡಿ..! ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಭಯಂಕರ ಶಬ್ದದೊಂದಿಗೆ ತೇಗುವ (Burped) ಮೂಲಕ 10 ವರ್ಷಗಳ ಗಿನ್ನಿಸ್​ ದಾಖಲೆ ಮುರಿದು, ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ಅಂದಹಾಗೆ ಇವರ ಹೆಸರು ನೆವಿಲ್ಲೆ ​ಶಾರ್ಪ್​ ಎಂದಾಗಿದ್ದು, ಡಾರ್ವಿನ್ ನಿವಾಸಿಯಾಗಿದ್ದಾರೆ. ಇವರು ತೇಗುವಾಗ ಅಂದರೆ ಬಾಯಿಯ ಮೂಲಕ ಗಾಳಿಯನ್ನು ಹೊರಹಾಕುವಾಗ ಬಂದ ಶಬ್ದದ ತೀವ್ರತೆ 112.4 ಡೆಸಿಬಲ್​ಗಳಷ್ಟಿತ್ತು. ಇದು ವಿದ್ಯುತ್​ ಡ್ರಿಲ್ಲರ್ ಉಂಟು ಮಾಡುವ ಗದ್ದಲಕ್ಕಿಂತಲೂ ಜಾಸ್ತಿ ಎಂದು ಹೇಳಲಾಗಿದೆ.  

ಅತ್ಯಂತ ಜೋರಾದ ಶಬ್ದದೊಂದಿಗೆ ತೇಗಿದ ಗಿನ್ನಿಸ್​ ದಾಖಲೆ ಕಳೆದ 11 ವರ್ಷಗಳಿಂದ ಎಲಿಸಾ ಕಾಗ್ನೋನಿ ಎಂಬುವರ ಹೆಸರಲ್ಲಿತ್ತು. 2009ರ ಜೂನ್​ 16ರಂದು ಇಟಲಿಯ ರೆಗ್ಗಿಯೋಲೋದಲ್ಲಿ ನಡೆದ ಹಾರ್ಡ್​ರಾಕ್​ ಬಿಯರ್​ ಉತ್ಸವದ ನಿಮಿತ್ತ ನಡೆದ  ರುಟ್ಟೋಸೌಂಡ್​​ ಸ್ಪರ್ಧೆಯಲ್ಲಿ ಎಲಿಸಾ 107.0 ಡೆಸಿಬಲ್​​ಗಳಷ್ಟು ಶಬ್ದದ ತೀವ್ರತೆ ಹೊಂದಿರುವಂತೆ ತೇಗಿದ್ದರು. ಆದರೆ ಈ ದಾಖಲೆಯನ್ನೀಗ  ನೆವಿಲ್ಲೆ ಶಾರ್ಪ್ ಮುರಿದಿದ್ದಾರೆ. ಈ ಬಗ್ಗೆ ವಿಶ್ವ ಗಿನ್ನಿಸ್​ ದಾಖಲೆ ಟ್ವಿಟರ್​ ಪೇಜ್​ ಕೂಡ ಪೋಸ್ಟ್ ಮಾಡಿದೆ.

ಇನ್ನು ನೆವಿಲ್ಲೆ ಈ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದು ಅವರ ಪತ್ನಿಯಂತೆ. ಗಟ್ಟಿಯಾಗಿ, ಹೆಚ್ಚಿನ ಶಬ್ದವನ್ನು ಹೊಂದಿ ತೇಗುವುದನ್ನು ಕಲಿಯಲು ಸುಮಾರು 5ವರ್ಷಗಳ ಕಾಲ ಅವರು ನಿರಂತರ ಅಭ್ಯಾಸ ಮಾಡಿದ್ದಾರೆ ಎಂದೂ ಹೇಳಲಾಗಿದೆ. ನಾನು ಆರು ವರ್ಷದವನಿದ್ದಾಗ ತೇಗುವುದು ಹೇಗೆಂದು ನನ್ನ ಅಕ್ಕ ಸ್ಯಾಂಡಿ ಹಂಟ್​​ರಿಂದ ಕಲಿತೆ. ನಂತರದ ದಿನಗಳಲ್ಲಿ ಹೀಗೆ ತೇಗುವುದನ್ನೂ ಕೌಶಲಯುಕ್ತವಾಗಿ ಮಾಡುತ್ತಿದ್ದೆ. ಅದೇ ಈಗ ಈ ಸಾಧನೆಗೆ ಕಾರಣವಾಯಿತು ಎಂದು ನೆವಿಲ್ಲೆ ಹೇಳಿಕೊಂಡಿದ್ದಾರೆ.

ಇದನ್ನು ಓದಿ: ತಾಯಿ ಆಗುತ್ತಿದ್ದಾರೆ ನಟಿ ಅಮೂಲ್ಯ; ವಿಶೇಷ ಫೋಟೋ ಮೂಲಕವೇ ಗುಡ್​ ನ್ಯೂಸ್​ ನೀಡಿದ ದಂಪತಿ