
ಈಗಿನ ಕಾಲದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೊತೆಯಾಗಿ ನಡೆಯುವ ಸತಿಪತಿಗಳು (Husband and wife) ಕಾಣಸಿಗುವುದೇ ವಿರಳ. ಕಷ್ಟ ಸುಖದಲ್ಲಿ ಜತೆಯಾಗುವ ಸಂಗಾತಿ ಸಿಕ್ಕರೆ ಅದುವೇ ಅದೃಷ್ಟ. ಈ ವಿಡಿಯೋ ನೋಡಿದ್ರೆ ನಿಮಗೂ ಹೀಗೆ ಅನಿಸುತ್ತೆ. ವೃದ್ಧೆ ತಮ್ಮ ಪತಿಯ ತಲೆ ಕೂದಲು ಕತ್ತರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಪತಿಯ ಪಾಲಿಗೆ ಕ್ಷೌರಿಕಳಾದ ವೃದ್ಧೆಯ ವಿಡಿಯೋ ವೈರಲ್ ಆಗಿದ್ದು, ಈ ವೃದ್ಧ ದಂಪತಿಗಳಿಗೆ ಇಬ್ಬರ ನಡುವಿನ ಬಾಂಧವ್ಯ ಎದ್ದು ಕಾಣುತ್ತಿದೆ.
ಕಲ್ಪನಾ ಜಳಗಾಂ (Kalpana Jalagam) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ನನ್ನ ಅತ್ತೆ-ಮಾವಂದಿರ 59 ವರ್ಷಗಳ ಪ್ರೀತಿ ಮತ್ತು ವೈವಾಹಿಕ ಜೀವನ. ಅವರ ಬಾಂಧವ್ಯವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಇದು ಇತರರಿಗೂ ಸ್ಫೂರ್ತಿಯಾಗಬಹುದು ಎಂಬ ಆಶಯದೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ಕ್ಲಿಪಿಂಗ್ ನಲ್ಲಿ ವೃದ್ಧ ವ್ಯಕ್ತಿ ಕುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ವೃದ್ಧೆ ತನ್ನ ಪತಿಯ ತಲೆ ಕೂದಲನ್ನು ಕತ್ತರಿಸುವುದನ್ನು ಕಾಣಬಹುದು. ವೃದ್ಧೆಯು ನಗು ಮೊಗದಿಂದ ಪತ್ನಿಯ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ.
ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಚೋಟುದ್ದ ಜಡೆ ಹೆಣೆದು ಕಟ್ಟಿದ ವೃದ್ಧ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಮುದ್ದಾದ ಜೋಡಿ ಎಂದಿದ್ದಾರೆ. ಇನ್ನೊಬ್ಬರು, ನೂರು ಕಾಲ ಹೀಗೆ ಬಾಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಶುದ್ಧ ಪ್ರೀತಿ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Tue, 17 November 26