Video: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಚೋಟುದ್ದ ಜಡೆ ಹೆಣೆದು ಕಟ್ಟಿದ ವೃದ್ಧ
ದಾಂಪತ್ಯ ಜೀವನ ನಿಂತಿರುವುದೇ ಪ್ರೀತಿ ನಂಬಿಕೆಯೇ ಮೇಲೆ. ಸಣ್ಣ ಪುಟ್ಟ ವಿಷಯಕ್ಕೂ ದೂರಾಗುವ ಜೋಡಿಗಳ ನಡುವೆ ವೃದ್ಧ ದಂಪತಿ ಎಲ್ಲರಿಗೂ ಮಾದರಿ. ವೃದ್ಧ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಚೋಟುದ್ದ ಜಡೆ ಹೆಣೆಯುತ್ತಾ ಮಗುವಿನಂತೆ ನೋಡಿಕೊಂಡಿದ್ದಾರೆ. ಈ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಪ್ರೀತಿ ವ್ಯಕ್ತಪಡಿಸಲು ದುಬಾರಿ ಬೆಲೆಯ ಉಡುಗೊರೆ ಬೇಕಿಲ್ಲ. ಪ್ರೀತಿ ಪಾತ್ರರಿಗಾಗಿ ಮಾಡುವ ಸಣ್ಣ ಪುಟ್ಟ ಕೆಲ್ಸಗಳು ಮನಸ್ಸಿಗೆ ಖುಷಿ ನೀಡುತ್ತದೆ, ದಂಪತಿಗಳ (couple) ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ವೃದ್ಧರೊಬ್ಬರು ತನ್ನ ಪತ್ನಿಯ ಚೋಟುದ್ದ ಜಡೆ ಹೆಣೆದಿದ್ದಾರೆ. ಶುದ್ಧ ಪ್ರೀತಿ ಸಾರುವ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಡದಿಯ ಚೋಟುದ್ದ ಜಡೆ ಹೆಣೆದ ವೃದ್ಧ
ಮನೀಶ್ ಜೈನ್ (Manish Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೃದ್ಧ ದಂಪತಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವೃದ್ಧ ದಂಪತಿ ಸೋಫಾದ ಮೇಲೆ ಕುಳಿತುಕೊಂಡಿರುವುದನ್ನು ಕಾಣಬಹುದು. ವೃದ್ಧ ವ್ಯಕ್ತಿ ತನ್ನ ಮಡದಿ ಜಡೆ ಹೆಣೆದು ಕಟ್ಟುತ್ತಿದ್ದಾರೆ. ವಯಸ್ಸು ಏರಿದಾಗಲು ಪ್ರೀತಿ ನಂಬಿಕೆ ಕಡಿಮೆಯಾಗಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಪ್ರೀತಿ ಅಂದ್ರೆ ಹೀಗಿರಬೇಕು; ಮಡದಿಗಾಗಿ ಬಳೆ ಖರೀದಿಸಿದ ವೃದ್ಧ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಪ್ರೀತಿ ಕಾಣಸಿಗುವ ಕೊನೆಯ ಜನರೇಷನ್ ಇದು ಎಂದಿದ್ದಾರೆ. ಮತ್ತೊಬ್ಬರು, ಈ ಭೂಮಿ ಮೇಲೆ ಇರುವ ಪ್ರತಿಯೊಬ್ಬ ಹೆಣ್ಣಿನ ಕನಸು ಇದು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಶುದ್ಧ ಪ್ರೀತಿಯ ಸುಂದರ ವ್ಯಾಖ್ಯಾನ ಇದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




