Video: ವಿದೇಶಿ ಸೊಸೆ-ಮಗನನ್ನು ಆರತಿ ಬೆಳಗಿ ಮನೆಗೆ ಸ್ವಾಗತಿಸಿದ ಭಾರತೀಯ ಕುಟುಂಬ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಗನು ವಿದೇಶಿ ಯುವತಿಯನ್ನು ಮದುವೆಯಾಗಿ ಮನೆಗೆ ಬರುತ್ತಿದ್ದಂತೆ ಆರತಿ ಬೆಳಗಿ ಬಹಳ ಸಡಗರದಿಂದ ಭಾರತೀಯ ಕುಟುಂಬ ಸ್ವಾಗತಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

Video: ವಿದೇಶಿ ಸೊಸೆ-ಮಗನನ್ನು ಆರತಿ ಬೆಳಗಿ ಮನೆಗೆ ಸ್ವಾಗತಿಸಿದ ಭಾರತೀಯ ಕುಟುಂಬ
ವೈರಲ್‌ ವಿಡಿಯೋ
Image Credit source: Instagram

Updated on: Aug 28, 2026 | 12:35 PM

ಪ್ರೀತಿಗೆ ಕಣ್ಣಿಲ್ಲ, ಎರಡು ಮನಸ್ಸುಗಳು ಬೆರೆತರೆ ಸಾಕು. ಭಾರತೀಯರು ವಿದೇಶಿಗರನ್ನು (foreigner) ಪ್ರೀತಿಸಿ ಮದುವೆಯಾಗುವುದು ಸರ್ವೇ ಸಾಮಾನ್ಯವಾಗಿದೆ. ಇದೀಗ ವಿದೇಶಿ ಸೊಸೆ ಹಾಗೂ ಮಗನನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಆರತಿ ಎತ್ತಿ, ಕುಂಕುಮ ಇಟ್ಟು ಭಾರತೀಯ ಕುಟುಂಬವು ಆತ್ಮೀಯವಾಗಿ ಸ್ವಾಗತಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿದೇಶಿ ಸೊಸೆಗೆ ಭಾರತೀಯ ಕುಟುಂಬದಿಂದ ಅದ್ಧೂರಿ ಸ್ವಾಗತ

ಡೇರಿಯನ್ ಎಲಿಜಬೆತ್ ಪಟ್ವಾಲ್ (Darian Elizabeth Patwal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಭಾರತೀಯ ಕುಟುಂಬ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಭಾರತೀಯ ಕುಟುಂಬವು ವಿದೇಶಿ ಸೊಸೆ ಹಾಗೂ ಮಗನನ್ನು ಆತ್ಮೀಯವಾಗಿ ಸ್ವಾಗತಿಸಿರುವುದನ್ನು ಕಾಣಬಹುದು. ಮನೆಗೆ ಬಂದ ಸೊಸೆ ಹಾಗೂ ಮಗನಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ ಹಾಗೂ ಹಣೆಗೆ ಕುಂಕುಮವಿಟ್ಟು ಸ್ವಾಗತಿಸಿದೆ. ಆ ಬಳಿಕ ವಿದೇಶಿ ಸೊಸೆಯನ್ನು ಆತ್ಮೀಯತೆಯಿಂದ ಮನೆ ಮಂದಿ ತಬ್ಬಿಕೊಳ್ಳುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವಿದೇಶಿ ಮಹಿಳೆಗೆ ಸೀರೆ ಉಡಲು ಸಹಾಯ ಮಾಡಿದ ಭಾರತೀಯ ನಾರಿಯರು

ಈ ವಿಡಿಯೋ ಒಂದೂವರೆ ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸುಂದರವಾದ ಫ್ಯಾಮಿಲಿ ಫೋಟೋ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೀಗೆ ಖುಷಿಯಾಗಿರಿ, ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us