Video: ಓವರ್‌ಟೈಮ್ ಇಲ್ಲ, ಕ್ವಿಕ್ ಕಾಲ್ ಇಲ್ವೇ ಇಲ್ಲ; ಜರ್ಮನಿಯ ಕೆಲಸದ ಸಂಸ್ಕೃತಿಗೆ ಇಂಡಿಯನ್ ಲೇಡಿ ಫುಲ್‌ ಫಿದಾ

ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸ್ವಲ್ವ ಕೂಡ ಬಿಡುವು ಇರಲ್ಲ. ಕೆಲವೊಮ್ಮೆ ಮನೆಗೆ ಹೋಗುವಾಗ ತಡರಾತ್ರಿ ಆಗುವುದಿದೆ. ಆದರೆ ಭಾರತೀಯ ಮಹಿಳೆಯೊಬ್ಬರು ಜರ್ಮನಿಯ ಕಾರ್ಪೊರೇಟ್‌ ಕೆಲಸದ ಸಂಸ್ಕೃತಿ ಕಂಡು ಬೆರಗಾಗಿದ್ದಾರೆ. ಸರಿಸುಮಾರು ಸಂಜೆ 5-30ಕ್ಕೆ ಆಫೀಸ್ ಖಾಲಿಯಾಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಓವರ್‌ಟೈಮ್ ಇಲ್ಲ, ಕ್ವಿಕ್ ಕಾಲ್ ಇಲ್ವೇ ಇಲ್ಲ; ಜರ್ಮನಿಯ ಕೆಲಸದ ಸಂಸ್ಕೃತಿಗೆ ಇಂಡಿಯನ್ ಲೇಡಿ ಫುಲ್‌ ಫಿದಾ
ವೈರಲ್‌ ವಿಡಿಯೋ
Image Credit source: Instagram

Updated on: Oct 01, 2026 | 4:22 PM

ಕಾರ್ಪೊರೇಟ್‌ ಉದ್ಯೋಗಿಗಳ ಕಷ್ಟಗಳ ಹೇಳಲಾಗದು. ಮುರೊತ್ತು ಕೆಲಸ, ರೆಸ್ಟ್ ಅನ್ನೋದೇ ಇರಲ್ಲ ಅಂದುಕೊಳ್ಳುತ್ತೇವೆ. ಆದರೆ ನೀವು ಜರ್ಮನಿಯ (Germany) ಕಾರ್ಪೊರೇಟ್ ಕೆಲಸದ ಸಂಸ್ಕೃತಿ ನೋಡಿದ್ರೆ ನೀವು ಶಾಕ್ ಆಗ್ತೀರಾ. ಇಲ್ಲಿನ ಕೆಲಸದ ಸಂಸ್ಕೃತಿ ಕಂಡು ಭಾರತೀಯ ಮಹಿಳೆ, ಓವರ್ ಟೈಮ್ ಕೆಲಸ ಇಲ್ಲ, ಸಂಜೆ 5 ಗಂಟೆಗೆ ಎಲ್ಲರೂ ಮನೆಗೆ ಹೋಗ್ತಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 ಓವರ್‌ಟೈಮ್ ಇಲ್ಲ, ಕ್ವಿಕ್ ಕಾಲ್ ಇಲ್ವೇ ಇಲ್ಲ

ಜರ್ಮನಿಯಲ್ಲಿ ನೆಲೆಸಿರುವ ಭಾಗ್ಯಶ್ರೀ (Bhagyashree) ಎಂಬ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ನಲ್ಲಿ ಉದ್ಯೋಗಿಗಳಿಲ್ಲದ ಖಾಲಿ ಕಚೇರಿಯನ್ನು ಕಾಣಬಹುದು. ಸುತ್ತಲೂ ಖಾಲಿ ಟೇಬಲ್ ಕುರ್ಚಿಗಳು ಗೋಚರಿಸುತ್ತಿವೆ. ಈ ವಿಡಿಯೋಗೆ, ಸಂಜೆ 5 ಗಂಟೆಗೆ ನನ್ನ ಕಚೇರಿ ಹೀಗಿದೆ. ಇಲ್ಲಿ ಓವರ್‌ಟೈಮ್ ಇಲ್ಲ. ಕ್ವಿಕ್ ಕಾಲ್ ಇಲ್ಲ. ಎಲ್ಲರೂ ಸಂಜೆ 5 ಗಂಟೆಗೆ ಸರಿಯಾಗಿ ಮನೆಗೆ ಹೋಗುತ್ತಾರೆ. ಅವರಿಗೆ ಕೆಲಸದ ಬಳಿಕ ವೈಯುಕ್ತಿಕ ಜೀವನವಿದೆ. ನನ್ನ ಮೊದಲ ಕಾರ್ಪೊರೇಟ್ ಕೆಲಸದಿಂದ ನಾನು ನಿರೀಕ್ಷಿಸದ ಸಾಂಸ್ಕೃತಿಕ ಆಘಾತ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಆಫೀಸ್‌ ಟೈಮಿಂಗ್ಸ್ ತಪ್ಪದೇ ಪಾಲಿಸುವ ಉದ್ಯೋಗಿಗಳು

ಈ ವಿಡಿಯೋದಲ್ಲಿ, ತಾನು ಕೆಲಸ ಮಾಡುವ ಆಫೀಸ್‌ನ್ನು ತೋರಿಸಿದ್ದಾರೆ. ಬೆಳಿಗ್ಗೆ ಬೇಗನೆ ಬಂದು ಆಫೀಸಿಗೆ ಬಂದು ಸಂಜೆ 5 ಗಂಟೆಗೆ ತಮ್ಮ ಕೆಲಸವನ್ನು ಮುಗಿಸಿ ಹೊರಡುತ್ತಾರೆ.  ಪ್ರತಿಯೊಬ್ಬ ಉದ್ಯೋಗಿಗೂ ವೈಯುಕ್ತಿಕ ಬದುಕಿದೆ ಎಂಬುದು ತಿಳಿದಿದೆ. ಹೀಗಾಗಿ ಕೆಲಸ ಮಾಡುವುದು ಮಾತ್ರವಲ್ಲ, ವೈಯುಕ್ತಿಕ ಬದುಕನ್ನು ಎಂಜಾಯ್ ಮಾಡುತ್ತಾರೆ. ಹಾಗಾಗಿ ನಾನು ಜರ್ಮನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ನನಗೆ ಉಂಟಾದ ಅಚ್ಚರಿಯ ಆಘಾತ ಇದು. ಹೀಗಾಗಿ ಇದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಯೋಚಿಸಿದೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎಲ್ಲರೂ ಸಂಪಾದನೆ ಕೇಳ್ತಾರೆ, ನಮ್ಮ ತ್ಯಾಗಗಳು ಕಾಣಲ್ಲ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಕೆನಾಡದಲ್ಲಿ ನೆಲೆಸಿರುವ ಭಾರತೀಯ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವರ್ಕ್ ಲೈಫ್ ಬ್ಯಾಲೆನ್ಸ್ ಅಂದ್ರೆ ಇದೇ ಇರ್ಬೇಕು ಎಂದಿದ್ದಾರೆ. ಇನ್ನೊಬ್ಬರು, ಈ ರೀತಿ ಟೈಮಿಂಗ್ಸ್ ಉದ್ಯೋಗಿಗಳಿಗೆ ಖುಷಿ ಕೊಡುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ರೀತಿ ಕೆಲಸದ ಸಂಸ್ಕೃತಿ ಆರೋಗ್ಯಕರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us