Viral Video: ರೊಚ್ಚಿಗೆದ್ದ ಯುವತಿ – ಬರೋಬ್ಬರಿ 20 ಮಂದಿಗೆ ಬಾರಿಸಿಬಿಸಾಕಿದಳು!

ಗುಲಾಬಿ ಬಣ್ಣದ ಹೂಡಿ (ಪುಲ್ ಓವರ್​​) ಧರಿಸಿರುವ ಹುಡುಗಿಯೊಬ್ಬಳು ಅಷ್ಟೊಂದು ಯುವತಿಯರನ್ನು ಏಕಾಂಗಿಯಾಗಿ ಎದುರಿಸುತ್ತಿರುವ ಬಗೆಯನ್ನು ನೋಡಿ, ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Viral Video: ರೊಚ್ಚಿಗೆದ್ದ ಯುವತಿ - ಬರೋಬ್ಬರಿ 20 ಮಂದಿಗೆ ಬಾರಿಸಿಬಿಸಾಕಿದಳು!
ವೈರಲ್ ವಿಡಿಯೋ: ರೊಚ್ಚಿಗೆದ್ದ ಯುವತಿ

Updated on: Jun 21, 2023 | 12:58 PM

ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಡಿಯೋಗಳು ಸದಾ ವೈರಲ್ (Viral Video) ಆಗುತ್ತಲೇ ಇರುತ್ತವೆ. ಜಗತ್ತಿನಲ್ಲಿ ಎಲ್ಲಿ ಏನೇ ನಡೆದರೂ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳಿಗೆ ಉತ್ತಮ ಬೇಡಿಕೆಯೂ ಇದೆ. ಇತ್ತೀಚಿಗೆ ಇಂತಹದೊಂದು ವಿಡಿಯೋ ಹೊರಬಿದ್ದಿದ್ದು, ಇದೀಗ ವೈರಲ್ ಆಗಿದೆ. ಹೊಡೆದಾಟಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೋಡುತ್ತೇವೆ. ಆದರೆ ಈ ವಿಡಿಯೋ ನಿಜಕ್ಕೂ ಶಾಕಿಂಗ್ ಆಗಿದೆ. ಈ ವಿಡಿಯೋದಲ್ಲಿ ಹುಡುಗಿಯರು ಹುಚ್ಚಾಪಟ್ಟೆ ಬಡಿದಾಡಿಕೊಂಡಿದ್ದಾರೆ (Attack). ರೊಚ್ಚಿಗೆದ್ದ ಒಬ್ಬೇಒಬ್ಬ ಯುವತಿಯಂತೂ (Girl) – ಬರೋಬ್ಬರಿ 20 ಮಂದಿಗೆ ಬಾರಿಸಿಬಿಸಾಕಿದ್ದಾಳೆ (Brawl)! ಈ ವಿಡಿಯೋದಲ್ಲಿರುವ ಘಟನೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ, ಆದರೆ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಈ ವಿಡಿಯೋದಲ್ಲಿ ತೋರಿಸಿರುವಂತೆ ಮೊದಮೊದಲು ಹುಡುಗಿಯರ ಗುಂಪೊಂದು ಒಬ್ಬೇ ಒಬ್ಬ ಹುಡುಗಿಯ ಜೊತೆ ಜಗಳವಾಡುತ್ತದೆ. ಆದರೆ ಆ ಹುಡುಗಿ ಮಾತ್ರ ರೊಚ್ಚಿಗೆದ್ದು ತನ್ನ ಮೇಲೆ ದಾಳಿ ಮಾಡಿದವರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದಾಳೆ.

ಗುಲಾಬಿ ಬಣ್ಣದ ಹೂಡಿ (ಪುಲ್ ಓವರ್​​) ಧರಿಸಿರುವ ಹುಡುಗಿಯೊಬ್ಬಳು ಅಷ್ಟೊಂದು ಯುವತಿಯರನ್ನು ಏಕಾಂಗಿಯಾಗಿ ಎದುರಿಸುತ್ತಿರುವ ಬಗೆಯನ್ನು ನೋಡಿ, ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Also read:  Viral: ಈ ಬಂಧನ… ವರದಕ್ಷಿಣೆ ಕೇಳಿದ ವರನಿಗೆ ಹಗ್ಗದ ಅನುಬಂಧನ

ಈ ವಿಡಿಯೋದಲ್ಲಿ ಜಗಳವಾಡಿದ ಯುವತಿಯನ್ನು ನೆಟಿಜನ್‌ಗಳು ಆಕೆಯನ್ನು ವಂಡರ್ ವುಮನ್‌ಗೆ ಹೋಲಿಸುತ್ತಿದ್ದಾರೆ. ಅಂತಹ ಧೈರ್ಯ ಪ್ರತಿಯೊಬ್ಬ ಮಹಿಳೆಗೂ ಇರಬೇಕು ಎಂದು ಹೇಳಿದ್ದಾರೆ. ಈ ವೀಡಿಯೊವನ್ನು ಜೂನ್ 12 ರಂದು ಅಪ್‌ಲೋಡ್ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ 4,00,000 ಕ್ಕೂ ಹೆಚ್ಚು ವೀಕ್ಷಣೆಗಳು, ಲಕ್ಷಾಂತರ ಕಾಮೆಂಟ್‌ಗಳೂ ಬರುತ್ತಿವೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ