Viral Video: ರಸ್ತೆಯಲ್ಲಿ ಹಾಕಿರುವ ಸೈನ್ಬೋರ್ಡ್ ಮೇಲೆ ಪುಷ್ಅಪ್ಸ್, ಮದ್ಯದ ಅಮಲಿರಬೇಕು ಎಂದ ಜನ
ಇಂದು ವಿಶ್ವದಾದ್ಯಂತ ಯೋಗ ದಿನ(Yoga Day)ವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ, ಈ ಸಂದರ್ಭದಲ್ಲಿ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು ವಿಶ್ವದಾದ್ಯಂತ ಯೋಗ ದಿನ(Yoga Day)ವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ, ಈ ಸಂದರ್ಭದಲ್ಲಿ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ತಕ್ಷಣ ನೀವು ತಲೆ ಮೇಲೆ ಕೈಹೊತ್ತುಕೊಳ್ಳುವುದು ಗ್ಯಾರಂಟಿ. ಎಲ್ಲರೂ ಮನೆಯಲ್ಲಿ, ಜಿಮ್, ಪಾರ್ಕ್ನಲ್ಲಿ ಯೋಗ ಮಾಡಿದರೆ ಈಗ ರಸ್ತೆಯಲ್ಲಿ ನಿಲ್ಲಿಸಿರುವ ಸೈನ್ ಬೋರ್ಡ್ ಮೇಲೆ ಪುಷ್ಅಪ್ಸ್ ಮಾಡುತ್ತಿರುವುದನ್ನು ಕಾಣಬಹುದು ಕಾಣಬಹುದು.
ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ಇಲ್ಲಿ ವ್ಯಕ್ತಿಯೊಬ್ಬ ತನ್ನದೇ ಶೈಲಿಯಲ್ಲಿ ಪುಷ್ಅಪ್ ಮಾಡುವುದನ್ನು ಕಾಣಬಹುದು. ವಾಸ್ತವವಾಗಿ ಈ ವ್ಯಕ್ತಿಯು ರಸ್ತೆಯಲ್ಲಿ ಮಾಡಿದ ಸೈನ್ ಬೋರ್ಡ್ ಮೇಲೆ ಹತ್ತಿ ಪುಷ್ಅಪ್ ಮಾಡಲು ಪ್ರಾರಂಭಿಸುತ್ತಾನೆ.
ಇದಾದ ನಂತರ ದಾರಿಯಲ್ಲಿ ಹೋಗುತ್ತಿದ್ದ ಜನರು ಬೈಕ್ ನಿಲ್ಲಿಸಿ ಆತನನ್ನು ನೋಡಲಾರಂಭಿಸಿದರು. ಆದರೆ ಆತ ಪುಶ್-ಅಪ್ ಮಾಡುತ್ತಲೇ ಇದ್ದ, ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು. ಏಕೆಂದರೆ ಒಮ್ಮೆ ಕಾಲು ಜಾರಿದರೆ ಸಾಕು ದೊಡ್ಡ ಅಪಾಯವೇ ಆಗಬಹುದು.
ಮತ್ತಷ್ಟು ಓದಿ: Viral: ‘ಹೃದಯ, ಹಂಸ ಸರಿ, ಆದರೆ ಈ ಬಟ್ಟೆಮಂಗ ನನ್ನ ಎದೆಬಡಿತವನ್ನೇ ನಿಲ್ಲಿಸಿತ್ತಲ್ಲ!’
ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ವೀಕ್ಷಿಸಿದ ನಂತರ, ಬಳಕೆದಾರರು ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು ದೇಸಿ ಹೀರೋ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಇದನ್ನು ‘ಸ್ಟೇಜ್ ಶೋ’ ಎಂದು ಕರೆದರು. ಇನ್ನೊಬ್ಬ ಬಳಕೆದಾರರು ಮದ್ಯದ ನಶೆ ಇರಬೇಕು ಎಂದು ಬರೆದಿದ್ದಾರೆ.
View this post on Instagram
ಈ ವಿಡಿಯೋ ಹಳೆಯದಾದರೂ ಇಂದು ಯೋಗ ದಿನದಂದು ವೈರಲ್ ಆಗುತ್ತಿದೆ. ಈ ವ್ಯಕ್ತಿಯನ್ನು ನೋಡಲು ಸಾಕಷ್ಟು ಮಂದಿ ಅಲ್ಲಿ ನೆರೆದಿರುವುದನ್ನು ಈ ವಿಡಿಯೋದಲ್ಲಿ ನೀವು ಕಾಣಬಹುದು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ