Viral: ‘ಹೃದಯ, ಹಂಸ ಸರಿ, ಆದರೆ ಈ ಬಟ್ಟೆಮಂಗ ನನ್ನ ಎದೆಬಡಿತವನ್ನೇ ನಿಲ್ಲಿಸಿತ್ತಲ್ಲ!’

Creativity: ರಾತ್ರಿ ಹೊತ್ತು ಹೋಟೆಲ್​ಕೋಣೆಯೊಳಗೆ ಇನ್ನೇನು ಲೈಟ್​ ಆನ್​ ಮಾಡಬೇಕು ಎನ್ನುವಷ್ಟರಲ್ಲಿ ಅಥವಾ ಬೆಳಗ್ಗೆ ನಿದ್ರೆಯಿಂದ ಎಚ್ಚೆತ್ತುಕೊಳ್ಳುವಲ್ಲಿ ಇಂಥದೊಂದು ಆಕೃತಿ ಮೇಲಿನಿಂದ ತೂಗಾಡುತ್ತಿದ್ದರೆ ಯಾರಿಗೂ ಭಯವಾಗುವುದಿಲ್ಲವೆ?

Viral: 'ಹೃದಯ, ಹಂಸ ಸರಿ, ಆದರೆ ಈ ಬಟ್ಟೆಮಂಗ ನನ್ನ ಎದೆಬಡಿತವನ್ನೇ ನಿಲ್ಲಿಸಿತ್ತಲ್ಲ!'
ಹೋಟೆಲಿನ ಕೋಣೆಯೊಂದರಲ್ಲಿ ನೇತಾಡುತ್ತಿರುವ ಬಟ್ಟೆಮಂಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 20, 2023 | 4:58 PM

Hotel : ನಿಮ್ಮ ಜೇಬು ಎಷ್ಟು ದೊಡ್ಡದಿರುತ್ತದೆಯೋ ಅಷ್ಟು  ಐಶಾರಾಮಿ ಹೋಟೆಲ್​ಗಳು ನಿಮ್ಮನ್ನು ಹತ್ತಿರ ಸೆಳೆಯುತ್ತವೆ. ಹೆಜ್ಜೆಹೆಜ್ಜೆಗೂ ಬಗೆಬಗೆಯ ಅಚ್ಚರಿಗಳಿಂದ ಬರಮಾಡಿಕೊಳ್ಳುತ್ತವೆ. ಲಾಂಜ್, ರೂಮ್​, ಒಳಾಂಗಣ ವಿನ್ಯಾಸ, ಆಹಾರ ಇತ್ಯಾದಿಗಳಿಂದ ನಿಮ್ಮನ್ನು ಮುದಗೊಳಿಸಲು ಪ್ರಯತ್ನಿಸುತ್ತವೆ. ಆಯಾ ಗ್ರಾಹಕರ ಇಚ್ಛೆ, ಆಸಕ್ತಿಗಳಿಗೆ ತಕ್ಕಂತೆ ರೂಮನ್ನು ಶೃಂಗರಿಸುತ್ತಿರುತ್ತವೆ. ಅದರಲ್ಲೂ ಜೋಡಿಯೊಂದು ಆ ಕೋಣೆಯಲ್ಲಿ ತಂಗುತ್ತದೆ ಎಂದರೆ ಮತ್ತಷ್ಟು ವಿಶೇಷ ವಿನ್ಯಾಸಗಳಿಂದ ಅದು ಶೃಂಗರಿಸಲ್ಪಟ್ಟಿರುತ್ತದೆ. ನೀವು ಸೌಂದರ್ಯ ಪ್ರಜ್ಞೆ ಉಳ್ಳವರಾಗಿದ್ದರೆ ಹೋಟೆಲ್​ ಸಿಬ್ಬಂದಿಯ ಸೃಜನಶೀಲತೆಯನ್ನು ಗಮನಿಸುತ್ತೀರಿ. ಇದೀಗ ವೈರಲ್ ಆಗುತ್ತಿರುವ ಈ ಸೃಜನಶೀಲತೆಯ ಪರಮಾವಧಿಯನ್ನು ಆನಂದಿಸಿ!

Hey Hotel guys …duck, Swan, heart etc is ok …this is a little too much creativity ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನು ಪೋಸ್ಟ್​ ಮಾಡಿದ ಟ್ವಿಟರ್​ ಖಾತೆದಾರರು, ‘ಒಂದು ಕ್ಷಣ ನನ್ನ ಎದೆಬಡಿತವೇ ನಿಂತುಹೋಗಿತ್ತು’ ಎಂದಿದ್ದಾರೆ. ಅದಕ್ಕೆ ನೆಟ್ಟಿಗರು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಬಾತು, ಹಂಸ, ಹೃದಯ ಇವೆಲ್ಲವೂ ಜೋಡಿಗಳಿಗೆ. ಒಂಟಿ ಪ್ರಯಾಣಿಕರಿಗೆ ಇಂಥವೇ ಸರಿ! ಎಂದಿದ್ದಾರೆ ಒಬ್ಬರು. ನೀವು ಸಿಂಗಲ್​ ಎಂದು ಪರಿಗಣಿಸಿ ಅವರು ನಿಮಗಾಗಿ ಕಾಳಜಿ ವಹಿಸುತ್ತಿದ್ದಾರೆ ಎಂದಿದ್ದಾರೆ ಮತ್ತೊಬ್ಬರು. ಇಂಥ ಕೋತಿಗಳು ಸಾಮಾನ್ಯವಾಗಿ ಹೋಟೆಲ್​ಗಳಲ್ಲಿ ನೇತಾಡುತ್ತಿರುತ್ತವೆ ಎಂದು ಇನ್ನೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral: ಯಾರಲ್ಲಿ ಸ್ವಲ್ಪ ಇದನ್ನು ತೆರೆಯಿರಿ; ಶವಪೆಟ್ಟಿಗೆಯೊಳಗಿದ್ದ ಮಹಿಳೆ ತಟ್ಟಿದಾಗ

ಏನೇ ಆಗಲಿ, ರಾತ್ರಿ ಹೊತ್ತು ದಣಿದು ಬಂದು ಇನ್ನೇನು ಲೈಟ್​ ಆನ್​ ಮಾಡಬೇಕು ಎನ್ನುವ ಹೊತ್ತಿನಲ್ಲಿಯೋ ಅಥವಾ ನಿರಾಳ ನಿದ್ರೆಯಿಂದ ಎಚ್ಚೆತ್ತು ಕಣ್ಣುಬಿಡುವ ಹೊತ್ತಿಗೋ ಇಂಥದೊಂದು ಆಕೃತಿ ಮೇಲಿನಿಂದ ತೂಗಾಡುತ್ತಿದ್ದರೆ ಯಾರಿಗೂ ಭಯವಾಗುವುದಿಲ್ಲವೆ?

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:56 pm, Tue, 20 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ