Stray Dog Attack: 8 ವರ್ಷದ ಬಾಲಕಿಯ ಮೇಲೆ 3 ಬೀದಿ ನಾಯಿಗಳ ದಾಳಿ
ಮನೆಯ ಅಂಗಳದಲ್ಲಿ ಆಟವಾಡುತ್ತಿರುವಾಗ 8ವರ್ಷದ ಬಾಲಕಿಯ ಮೇಲೆ 3 ಬೀದಿ ನಾಯಿಗಳು ದಾಳಿ ನಡೆಸಿದ್ದು, ಹೃದಯ ವಿದ್ರಾವಕ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನಷ್ಟು ವಿವರ ಇಲ್ಲಿದೆ.
ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇತ್ತೀಚೆಗಷ್ಟೇ ಜೂನ್ 11 ರಂದು ಬೀದಿನಾಯಿಗಳ ಹಿಂಡು ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದು, ಇದೀಗಾ ಈ ಘಟನೆಗೆ ಪೂರಕ ಎಂಬಂತೆ ಮತ್ತೆ ಅಂತದ್ದೇ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಮುಜ್ಜಪಿಲಂಗಾಡಿನಲ್ಲಿ ನಡೆದಿದೆ. 3 ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗಾ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
8 ವರ್ಷದ ಜಾನ್ವಿ ತನ್ನ ಮನೆಯ ಅಂಗಳದಲ್ಲಿ ಇದ್ದಾಗ ಮೂರು ನಾಯಿಗಳು ಆಕೆಯ ಮೇಲೆ ದಾಳಿ ಮಾಡಿದೆ. ನೋವು ತಾಳಲಾರದೇ ಬಾಲಕಿ ಕಿರುಚಲು ಪ್ರಾರಂಭಿಸಿದ್ದಾಳೆ. ಕೆಲ ಹೊತ್ತಿನಲ್ಲೇ ಸ್ಥಳೀಯರು ಬಾಲಕಿಯ ಸಹಾಯಕ್ಕೆ ಬಂದಿದ್ದಾರೆ. ಬಾಲಕಿಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
Is there any animal lover here? This happened yesterday in Kerala. Any celebs from North India to tweet? #streetdogs #dog_attack_in_kerala @imVkohli pic.twitter.com/ZtAozeNlr0
— Subash Kumaran (@csubashk) June 20, 2023
ಇದನ್ನು ಓದಿ: ರೊಚ್ಚಿಗೆದ್ದ ಯುವತಿ ಬರೋಬ್ಬರಿ 20 ಮಂದಿಗೆ ಬಾರಿಸಿ ಬಿಸಾಕಿದಳು!
ಇಂತಹ ಘಟನೆಗಳು ಮರುಕಳಿಸುತ್ತಿದ್ದಂತೆ ಅಲ್ಲಿಬ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕೆಲವು ನಿಬಂಧನೆಗಳನ್ನು ಸಡಿಲಿಸಬೇಕಾಗಿದೆ ಎಂದು ಕೇರಳದ ಸ್ಥಳೀಯ ಸ್ವ-ಸರ್ಕಾರಗಳ ಸಚಿವ ಎಂ.ಬಿ.ರಾಜೇಶ್ ಕಳೆದ ವಾರ ಹೇಳಿದ್ದಾರೆ. ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಬೀದಿ ನಾಯಿಗಳನ್ನು ಕೊಲ್ಲಲು ಅನುಮತಿ ಕೋರಿ ರಾಜ್ಯವು ಮತ್ತೊಮ್ಮೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:24 pm, Wed, 21 June 23