Gurugram: ಮೂಕ ಪ್ರಾಣಿಗಳ ಮೇಲೇಕೆ ನಿಮ್ಮ ಕ್ರೂರತೆ ಪ್ರದರ್ಶನ, ಬೀದಿ ನಾಯಿಗೆ ಥಳಿಸಿ ಮಹಡಿಯಿಂದ ನೆಲಕ್ಕೆ ಎಸೆದ ವ್ಯಕ್ತಿಯ ಬಂಧನ
ಇತ್ತೀಚಿನ ದಿನಗಳಲ್ಲಿ ಜನರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಯಾವುದೋ ಕೋಪವನ್ನು ಮುಗ್ಧ ಪ್ರಾಣಿಗಳ ಮೇಲೆ ತೀರಿಸಿಕೊಳ್ಳುತ್ತಾರೆ. ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಥಳಿಸಿ, ಮನೆಯ ಮಹಡಿಯಿಂದ ನೆಲಕ್ಕೆ ಎಸೆದಿದ್ದು, ಸ್ಥಳದಲ್ಲೇ ವ್ಯಕ್ತಿಯನ್ನು ಬಂಧಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಜನರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ. ಯಾವುದೋ ಕೋಪವನ್ನು ಮುಗ್ಧ ಪ್ರಾಣಿಗಳ ಮೇಲೆ ತೀರಿಸಿಕೊಳ್ಳುತ್ತಾರೆ. ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಥಳಿಸಿ, ಮನೆಯ ಮಹಡಿಯಿಂದ ನೆಲಕ್ಕೆ ಎಸೆದಿದ್ದು, ಸ್ಥಳದಲ್ಲೇ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ವ್ಯಕ್ತಿ ನಾಯಿಯನ್ನು ನಿರ್ದಯವಾಗಿ ಥಳಿಸಿ ತನ್ನ ಮನೆಯ ಟೆರೇಸ್ನಿಂದ ಎಸೆದಿದ್ದಾನೆ.
ಅನುಭವ್ ಶರ್ಮಾ ಎಂಬುವವರು ಈ ದೂರು ನೀಡಿದ್ದಾರೆ, ಜೂನ್ 1 ರಂದು ಬೀದಿ ನಾಯಿಯನ್ನು ಎತ್ತಿಕೊಂಡು ಹೋಗಿ ಮನೆಗೆ ಕರೆದೊಯ್ದು ಅಮಾನುಷವಾಗಿ ಹೊಡೆದು ಬಳಿಕ ಟೆರೇಸ್ನಿಂದ ರಸ್ತೆಗೆ ಎಸೆದಿದ್ದ.
ನ್ಯೂ ಪಾಲಮ್ ವಿಹಾರ್ 1 ನೇ ಹಂತದ ನಿವಾಸಿ ಸಿಂಗ್ ಅವರು ಮೇ ತಿಂಗಳಲ್ಲಿ ಎರಡು ನಾಯಿಗಳನ್ನು ಕೊಂದಿದ್ದ. ಇದಾದ ಬಳಿಕ ನಾಯಿಯೊಂದರ ದವಡೆ ಮುರಿದು ಎಸೆದಿದ್ದ.
बेजुबानों के साथ ऐसी ‘क्रूरता’! इतनी नफरत कोई कैसे कर सकता है… दो कुत्तों की पीट-पीट कर हत्या की, एक का जबड़ा तोड़कर फेंका… वीडियो देख दहल जाएगा दिल…? pic.twitter.com/AdsPaVrLI0
— Pooja TRIPATHI (@PoojaT189) June 13, 2023
ಪಿಟಿಐ ವರದಿಯ ಪ್ರಕಾರ, ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅನುಭವ್ ಶರ್ಮಾ ಆರೋಪಿ ಹೋಶಿಯಾರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಬೀದಿ ನಾಯಿಗಳಿಗೆ ಹೊಡೆದು ತಮ್ಮ ಮನೆಯ ಛಾವಣಿಯಿಂದ ಕೆಳಗೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: Bihar News: ಬಿಹಾರದಲ್ಲಿ 30 ಬೀದಿ ನಾಯಿಗಳಿಗೆ ಶೂಟ್ ಮಾಡಿ ಹತ್ಯೆ; ಕಾರಣ ಇಲ್ಲಿದೆ
ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ವ್ಯಕ್ತಿಯ ಈ ಅಮಾನುಷ ಕೃತ್ಯ ಸೆರೆಯಾಗಿದೆ. ಈ ಅಸಹಾಯಕ ನಾಯಿಗಳ ಹೇಯ ದೌರ್ಜನ್ಯಕ್ಕಾಗಿ ಸಿಂಗ್ ವಿರುದ್ಧದ ದೂರನ್ನು ಬೆಂಬಲಿಸುವ ಸಾಕ್ಷ್ಯವಾಗಿ ಭದ್ರತಾ ಕ್ಯಾಮೆರಾದ ದೃಶ್ಯಗಳನ್ನು ಪೊಲೀಸರಿಗೆ ಸಲ್ಲಿಸಿದ್ದೇನೆ ಎಂದು ಶರ್ಮಾ ಹೇಳಿದರು. ಅವರು ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ