Bihar News: ಬಿಹಾರದಲ್ಲಿ 30 ಬೀದಿ ನಾಯಿಗಳಿಗೆ ಶೂಟ್ ಮಾಡಿ ಹತ್ಯೆ; ಕಾರಣ ಇಲ್ಲಿದೆ
2022ರಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ನರಭಕ್ಷಕ ನಾಯಿಗಳು ದಾಳಿ ನಡೆಸಿದ್ದವು. ಈ ನಾಯಿಗಳ ಹಾವಳಿಯನ್ನು ತಡೆಯುವ ಪ್ರಯತ್ನದಲ್ಲಿ ಜಿಲ್ಲಾಡಳಿತವು ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ಕೊಲ್ಲಲು ಆದೇಶಿಸಿತ್ತು.
ಬೇಗುಸರಾಯ್: ಬಿಹಾರದಲ್ಲಿ 30 ಬೀದಿ ನಾಯಿಗಳಿಗೆ (Stray Dogs) ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬಿಹಾರದ (Bihar) ಬೇಗುಸರಾಯ್ ಜಿಲ್ಲೆಯಲ್ಲಿ ಶೂಟರ್‌ಗಳ ತಂಡವು ಸುಮಾರು 30 ಬೀದಿ ನಾಯಿಗಳನ್ನು ಹೊಡೆದುರುಳಿಸಿದೆ. ಈ ಜಿಲ್ಲೆಯಲ್ಲಿ ನಾಯಿಗಳ ಹಾವಳಿಯನ್ನು ಕೊನೆಗೊಳಿಸಲು ಪಾಟ್ನಾದಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಮತ್ತು ಪರಿಸರ ಇಲಾಖೆಯಿಂದ ತಂಡವನ್ನು ರಚಿಸಲಾಗಿದೆ.
ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದ್ದು, ಬೇಗುಸರಾಯ್ ಜಿಲ್ಲೆಯಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಪಾಟ್ನಾದಿಂದ ಆಗಮಿಸಿದ ವಿಶೇಷ ತಂಡ ಮಂಗಳವಾರ 16 ಬೀದಿನಾಯಿಗಳು ಮತ್ತು ಬುಧವಾರ 14 ಬೀದಿ ನಾಯಿಗಳನ್ನು ಶೂಟ್ ಮಾಡಿ ಕೊಂದಿದೆ. ಮನುಷ್ಯರ ಮೇಲೆ ಪದೇಪದೆ ದಾಳಿ ನಡೆಸುತ್ತಿದ್ದ ಬೀದಿ ನಾಯಿಗಳ ಕಾಟವನ್ನು ನಿಲ್ಲಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Street Dog Attack: 8 ವರ್ಷದ ಬಾಲಕಿ ಹಾಗೂ ತಂದೆ ಮೇಲೆ ಬೀದಿ ನಾಯಿ ದಾಳಿ, ಬಾಲಕಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹೊಲಿಗೆ
ಈ ಪ್ರದೇಶದಲ್ಲಿ ಬೀದಿ ನಾಯಿಗಳನ್ನು ಪತ್ತೆಹಚ್ಚಲು ಮತ್ತು ಕೊಲ್ಲಲು ಹಲವಾರು ಸ್ಥಳೀಯರು ಶೂಟರ್ಗಳಿಗೆ ಸಹಾಯ ಮಾಡಿದರು. ಈ ನಾಯಿಗಳು ಗ್ರಾಮದಲ್ಲಿ ಸಾಕಷ್ಟು ಜನರನ್ನು ಕಚ್ಚಿ ಸಾಯಿಸಿದ್ದವು. 2022ರಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ನರಭಕ್ಷಕ ನಾಯಿಗಳು ದಾಳಿ ನಡೆಸಿದ್ದವು. ಈ ನಾಯಿಗಳ ಹಾವಳಿಯನ್ನು ತಡೆಯುವ ಪ್ರಯತ್ನದಲ್ಲಿ ಜಿಲ್ಲಾಡಳಿತವು ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ಕೊಲ್ಲಲು ಆದೇಶಿಸಿತ್ತು.