Old Couple : ಈ ವಿಡಿಯೋ ನೋಡಿದವರು ತಮ್ಮ ತಮ್ಮ ಸಂಗಾತಿಗಳನ್ನು ಟ್ಯಾಗ್ ಮಾಡಿ ಹುರುಪು ತುಂಬುತ್ತಿದ್ದಾರೆ. ನಾನು 100 ವರ್ಷದ ತನಕವಾದರೂ ನನ್ನ ಹೆಂಡತಿಯೊಂದಿಗೆ ಹೀಗಿರಬೇಕು ಎಂದು ಭಾವಿಸುತ್ತಿದ್ದೇನೆ ನೋಡೋಣ ಎನ್ನುತ್ತಿದ್ದಾರೆ. ಹೌದು ಸಂಗಾತಿಯನ್ನು ಪ್ರೀತಿಸಬೇಕು, ಅದಕ್ಕಿಂತ ಮುಖ್ಯ ಗೌರವಿಸಬೇಕು. ಆಗ ಹೀಗೆ ಒಟ್ಟಾಗಿ ಆನಂದಿಸಬಹುದು ಎನ್ನುತ್ತಿದ್ದಾರೆ. ಇದು ಒಬ್ಬರಿಂದ ಸಂಭವಿಸುವಂಥದ್ದಲ್ಲ, ಪರಸ್ಪರರ ಪ್ರಯತ್ನ, ಕೊಡುಗೆ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ಒಬ್ಬರು ಮಾತ್ರ ಇವರು ಎಷ್ಟು ವಯಾಗ್ರಾ (Viagra) ತೆಗೆದುಕೊಂಡಿದ್ದರು? ಎಂದು ಕೇಳಿದ್ದಾರೆ.
The most important thing is to find your mate in life that you can live with. pic.twitter.com/EnSnXnDEir
— The Best (@ThebestFigen) July 17, 2023
ಈ ವಿಡಿಯೋ ಅನ್ನು 7 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 8,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 1.5 ಸಾವಿರ ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ಇಡೀ ಸಂಪೂರ್ಣ ಬದುಕಬೇಕು, ಹಾಗೆಂದು ಆ ವ್ಯಕ್ತಿಯನ್ನು ಹುಡುಕುವುದು ನನ್ನ ಕಡೆಯಿಂದಷ್ಟೇ ಆಗಬಾರದು. ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳುವಲ್ಲಿ ಪ್ರತೀ ಹಂತದಲ್ಲಿಯೂ ಇಬ್ಬರ ಒಳಗೊಳ್ಳುವಿಕೆಯ ಇರಬೇಕು ಎಂದಿದ್ಧಾರೆ ಒಬ್ಬರು.
ಇದನ್ನೂ ಓದಿ : Viral Video: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾಬಾಲಕಿ
ನನಗೆ ಇವರ ನೃತ್ಯ ನೋಡಿ ಖಿನ್ನತೆ ಆವರಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ನಾನಂತೂ ಇದನ್ನು ನೋಡಿ ಸ್ಫೂರ್ತಿ ಪಡೆದಿದ್ದೇನೆ. ವಯಸ್ಸಾದ ಮೇಲೆ ನನ್ನ ಗಂಡನೊಂದಿಗೆ ನಾನು ಹೀಗೇ ಖುಷಿಯಿಂದ ಇರುತ್ತೇನೆ ಎಂದುಕೊಂಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಇಬ್ಬರೂ ಸೇರಿ ನರ್ತಿಸುವುದಕ್ಕಿಂತ ಮಿಗಿಲಾದ ಸಂತೋಷ ಈ ಜಗತ್ತಿನಲ್ಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿದ ಮೇಲೆ ಖುಷಿಯಿಂದ ನಗದೇ ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:21 pm, Thu, 20 July 23