Video: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯನ್ನು ಜೋಪಾನವಾಗಿ ರೈಲು ಹತ್ತಿಸಿದ ವೃದ್ಧ ವ್ಯಕ್ತಿ

ನಮ್ಮ ಹಿರಿಜೀವಗಳು ವಯಸ್ಸು ಏರಿದಾಗಲು ಕಷ್ಟ ಸುಖದಲ್ಲಿ ಜತೆಯಾಗಿರುವುದು ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತದೆ. ಈಗ ಕಾಲ ಬದಲಾಗಿದೆ. ಸಣ್ಣ ಪುಟ್ಟ ವಿಷಯಕ್ಕೂ ಮನಸ್ತಾಪ, ಕೊನೆಗೆ ಡಿವೋರ್ಸ್ ಹಂತಕ್ಕೆ ತಲುಪುತ್ತದೆ. ಆದರೆ ವೃದ್ಧ ದಂಪತಿಯ ಶುದ್ಧ ಪ್ರೀತಿಯ ವಿಡಿಯೋ ವೈರಲ್ ಆಗಿದೆ. ವೃದ್ಧ ವ್ಯಕ್ತಿ ತನ್ನ ಮಡದಿಯನ್ನು ಜೋಪಾನವಾಗಿ ರೈಲು ಹತ್ತಿಸಿದ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯನ್ನು ಜೋಪಾನವಾಗಿ ರೈಲು ಹತ್ತಿಸಿದ ವೃದ್ಧ ವ್ಯಕ್ತಿ
ವೈರಲ್‌ ವಿಡಿಯೋ
Image Credit source: Instagram

Updated on: Apr 15, 2026 | 11:35 AM

ಹೆಣ್ಣಿಗೆ ಗಂಡನೇ (wife-husband) ಸರ್ವಸ್ವವಾಗಿರುತ್ತಾನೆ. ಹೀಗಾಗಿ ಪ್ರತಿಯೊಬ್ಬ ಹೆಣ್ಣು ತನ್ನ ಉಸಿರು ಇರುವ ತನಕ ತನ್ನ ಗಂಡ ತನ್ನ ಮೇಲೆ ಕಾಳಜಿ ವಹಿಸಲಿ ಎಂದು ಬಯಸುತ್ತಾಳೆ. ಆದರೆ ವೃದ್ಧ ದಂಪತಿಗಳು (elderly couple) ಕೊನೆಯವರೆಗೆ ಒಬ್ಬರಿಗೊಬ್ಬರು ಆಸರೆಯಾಗಿರುವುದನ್ನು ನೀವು ನೋಡಿರುತ್ತೀರಿ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ರೈಲು ಹತ್ತಲು ಕಷ್ಟ ಪಡುತ್ತಿದ್ದ ತನ್ನ ಮಡದಿಯನ್ನು, ಬೀಳದಂತೆ ಹಿಡಿದು ಜೋಪಾನವಾಗಿ ವೃದ್ಧ ವ್ಯಕ್ತಿ ರೈಲು ಹತ್ತಿಸಿದ್ದಾನೆ. ಈ ಸುಮಧುರ ಬಾಂಧವ್ಯದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

me_bhanu_pilla ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವೃದ್ಧ ದಂಪತಿಯ ಸುಮಧುರ ಬಾಂಧವ್ಯವನ್ನು ಕಾಣಬಹುದು. ಈ ಕ್ಲಿಪಿಂಗ್ ನಲ್ಲಿ ವೃದ್ಧ ಮಹಿಳೆ ರೈಲು ಹತ್ತಲು ಕಷ್ಟ ಪಡುತ್ತಿರುವುದನ್ನು ಕಾಣಬಹುದು. ಇದೇ ವೇಳೆ ವೃದ್ಧ ವ್ಯಕ್ತಿ ತನ್ನ ಮಡದಿಯನ್ನು ಬೀಳದಂತೆ ಹಿಡಿದು ಜೋಪಾನವಾಗಿ ರೈಲು ಹತ್ತಿಸಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನೋ ಕಿಡ್ಸ್, ಡಬಲ್ ಇನ್ಕಮ್; ಬೆಂಗಳೂರಿನಲ್ಲಿ ನೆಲೆಸಿರುವ ಈ ದಂಪತಿಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೂರು ವರ್ಷಗಳ ಪ್ರೀತಿ ಎಂದು ಹೇಳಿದರೆ, ಮತ್ತೊಬ್ಬರು, ಇದು ಶುದ್ಧ ಪ್ರೀತಿ, ಏಳು ಬೀಳಿನಲ್ಲೂ ಜತೆಯಾಗಿ ನಿಂತ ಜೋಡಿಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡುವಾಗ ನನ್ನ ಕಣ್ಣ ತುಂಬಿ ಬಂದಿತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us