Video: ದೈಹಿಕ ನೂನ್ಯತೆಯಿದ್ರೂ ಮಾಸದ ನಗು; ಡೆಲಿವರಿ ಬಾಯ್ ಕೆಲ್ಸದಲ್ಲೇ ಖುಷಿ ಕಾಣುವ ವ್ಯಕ್ತಿ

ದುಡಿದು ತಿನ್ನುವ ಛಲವಿದ್ದರೆ ದೈಹಿಕ ನ್ಯೂನತೆ ಲೆಕ್ಕಕ್ಕೆ ಬರಲ್ಲ. ಅಂಗವೈಕಲ್ಯತೆ ಮೆಟ್ಟಿ ನಿಂತು ಕಷ್ಟಪಟ್ಟು ದುಡಿದು ತಿನ್ನುವ ಈ ಯುವಕ ಎಲ್ಲರಿಗೂ ಮಾದರಿ. ಎರಡೂ ಕಾಲುಗಳಿಲ್ಲದಿದ್ದರೂ ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಯುವಕನ ಛಲಕ್ಕೆ ನೆಟ್ಟಿಗರು ಫಿದಾ ಅಗಿದು ಈ ವಿಡಿಯೋ ಇಂಟರ್ನೆಟ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಕುರಿತಆದ ಸ್ಟೋರಿ ಇಲ್ಲಿದೆ.

Video: ದೈಹಿಕ ನೂನ್ಯತೆಯಿದ್ರೂ ಮಾಸದ ನಗು; ಡೆಲಿವರಿ ಬಾಯ್ ಕೆಲ್ಸದಲ್ಲೇ ಖುಷಿ ಕಾಣುವ ವ್ಯಕ್ತಿ
ಡೆಲಿವರಿ ಬಾಯ್‌
Image Credit source: Instagram

Updated on: Nov 11, 2026 | 4:42 PM

ಸ್ವಾಭಿಮಾನದ ಬದುಕೇ ಹಾಗೆ, ಬೇರೆ ಯಾರ ಬಳಿ ಕೈಯೊಡ್ಡದೇ ಮೂರು ಹೊತ್ತಿನ ಊಟಕ್ಕಾಗಿ ಹಾಗೂ ತನ್ನನ್ನೇ ನಂಬಿದ ಕುಟುಂಬಕ್ಕಾಗಿ ಕಷ್ಟಪಡುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಂತು ಡೆಲಿವರಿ ಬಾಯ್ (Delivery boy) ಆಗಿ ಕೆಲಸ ಮಾಡುವ ವ್ಯಕ್ತಿಯ ಕಥೆಯಿದು. ಎರಡು ಕಾಲುಗಳಿಲ್ಲದಿದ್ದರೂ ಝೊಮ್ಯಾಟೊ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ಮೋಟಾರು ವೀಲ್‌ಚೇರ್ ಈ ವ್ಯಕ್ತಿಯ ಸಾರಥಿಯಾಗಿದೆ. ರಸ್ತೆಯಲ್ಲಿ ಕಂಡು ಬಂದ ದೃಶ್ಯವನ್ನು ಮಹಿಳೆಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವ್ಯಕ್ತಿಯ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದಾರೆ.

ಜೀವನದಲ್ಲಿ ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸಿ

ಸಾಕ್ಷಿ (Sakshi) ಎಂಬ ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನ ಶೀರ್ಷಿಕೆಯಲ್ಲಿ, ಕೆಲವೊಮ್ಮೆ ಅಪರಿಚಿತರೊಬ್ಬರ ಸಣ್ಣ ನಗು ನೀವು ಜೀವನವನ್ನು ನೋಡುವ ರೀತಿಯನ್ನೇ ಬದಲಾಯಿಸಬಹುದು. ಹೀಗಾಗಿ ನೀವು ಜೀವನದಲ್ಲಿ ಮುಂದುವರಿಯಿರಿ, ನಗುತ್ತಿರಿ. ಜೀವನದಲ್ಲಿರುವ ಸಣ್ಣಪುಟ್ಟ ಸಂತೋಷಗಳನ್ನು ಎಂದಿಗೂ ಕಡೆಗಣಿಸಬೇಡಿ. ಈ ವಿಡಿಯೋ ನೋಡಿ ನಿಮಗೂ ನಗು ಬಂದಿದ್ದರೆ, ಸ್ವಲ್ಪ ಸಕಾರಾತ್ಮಕತೆ ಬೇಕಿರುವವರೊಂದಿಗೆ ಹಂಚಿಕೊಳ್ಳಿ ಎಂದು  ಬರೆದುಕೊಂಡಿದ್ದಾರೆ.

Loading...

ವೈರಲ್ ವಿಡಿಯೋ ಇಲ್ಲಿದೆ


ದೈಹಿಕ ನೂನ್ಯತೆ ನಡುವೆ ಸದಾ ನಗುವ ಡೆಲಿವರಿ ಬಾಯ್‌

ಈ ವಿಡಿಯೋದಲ್ಲಿ ಜೊಮ್ಯಾಟೊ ಡೆಲಿವರಿ ಬ್ಯಾಗ್‌ಗಳನ್ನು ತನ್ನ ಮೋಟಾರು ವೀಲ್‌ಚೇರ್‌ನಲ್ಲಿ ಇಟ್ಟುಕೊಂಡು ಡೆಲಿವರಿ ಬಾಯ್‌ ಹೋಗುತ್ತಿದ್ದಾರೆ. ಹೆಡ್‌ಫೋನ್ ಹಾಕಿಕೊಂಡು ತಮ್ಮ ಕೆಲಸದಲಲ್ಲಿ ತಲ್ಲೀನಾಗಿರುವುದನ್ನು ಕಾಣಬಹುದು. ದೈಹಿಕ ನೂನ್ಯತೆಯಿದ್ರೂ ಮುಖದಲ್ಲಿ ನಗು ಮಾಸಿಲ್ಲ. ತಮ್ಮ ಕಣ್ಣ ಮುಂದೆ ಸದಾ ಉತ್ಸಾಹದಲ್ಲಿದ್ದ ವ್ಯಕ್ತಿಯನ್ನು ಕಂಡ ಮಹಿಳೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಗು ಬೀರಿದ ಡೆಲಿವರಿ ಬಾಯ್ ನ ಜತೆಗೆ ಮಾತಿಗಿಳಿದಿದ್ದು ಕೊನೆಗೆ ಬಾಯ್ ಮಾಡಿ ಅಲ್ಲಿಂದ ಹೊರಟಿದ್ದಾರೆ.

ಇದನ್ನೂ ಓದಿ: ಡೆಲಿವರಿ ಬಾಯ್ ಆಗಿರುವ ತನ್ನ ತಂದೆಯನ್ನು ಗರ್ಲ್ ಫ್ರೆಂಡ್‌ಗೆ ಪರಿಚಯಿಸಿದ ಯುವಕ

ಈ ವಿಡಿಯೋ 12 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜೀವನದ ಪ್ರತಿ ಕ್ಷಣವನ್ನು ಎಷ್ಟು ಖುಷಿಯಿಂದ ಜೀವಿಸುತ್ತಿದ್ದಾನೆ ಎಂದಿದ್ದಾರೆ. ಇನ್ನೊಬ್ಬರು, ಈ ವ್ಯಕ್ತಿಯ ಪಾಸಿಟಿವಿ ನನ್ನ ಮೇಲೆ ಪ್ರಭಾವ ಬೀರಿತು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮೇಲಿನ ಗೌರವ ಹೆಚ್ಚಾಯ್ತು, ನೀವು ಎಲ್ಲರಿಗೂ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us