AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಡೆಲಿವರಿ ಬಾಯ್ ಆಗಿರುವ ತನ್ನ ತಂದೆಯನ್ನು ಗರ್ಲ್ ಫ್ರೆಂಡ್‌ಗೆ ಪರಿಚಯಿಸಿದ ಯುವಕ

ತಂದೆ ಮಗನ ಬಾಂಧವ್ಯ ಸಾರುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಗರ್ಲ್ ಫ್ರೆಂಡ್ ಜತೆಗೆ ಇದ್ದಾಗ ತನ್ನ ತಂದೆಯ ಕೈಯಲ್ಲಿ ಮಗನು ಸಿಕ್ಕಿ ಬಿದ್ದಿದ್ದಾನೆ. ಇದೇ ವೇಳೆ ಹಿಂದೆ ಮುಂದೆ ನೋಡದೇ ಯುವಕನು ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ತನ್ನ ತಂದೆಯನ್ನು ಪ್ರೇಯಸಿಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಈ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಡೆಲಿವರಿ ಬಾಯ್ ಆಗಿರುವ ತನ್ನ ತಂದೆಯನ್ನು ಗರ್ಲ್ ಫ್ರೆಂಡ್‌ಗೆ ಪರಿಚಯಿಸಿದ ಯುವಕ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Nov 06, 2026 | 1:42 PM

Share

ಕೆಲವು ಮಕ್ಕಳು ತಮ್ಮ ತಂದೆ ತಾಯಿ ಮಾಡುವ ಕೆಲಸದ ಬಗ್ಗೆ ಬೇರೆಯವರ ಮುಂದೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೆತ್ತವರು (parents) ಮಾಡುವ ಕೆಲಸದಿಂದ ತಮ್ಮ ಘನತೆಯಿಂದ ಅಳೆಯಲಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಇಲ್ಲೊಬ್ಬ ಮಗ ತನ್ನ ಪ್ರೇಯಸಿಗೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ತಂದೆಯನ್ನು ಪರಿಚಯಿಸಿದ್ದಾನೆ. ತಂದೆ ಬೇಡ ಎಂದರೂ ಹಿಂದೆ ಸರಿಯದ ಮಗನು ಇವರೇ ನನ್ನ ತಂದೆ ಎನ್ನುವುದನ್ನು ಬಹಳ ಹೆಮ್ಮೆಯಿಂದ ಹೇಳಿದ್ದಾನೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದ್ದು, ಇಂತಹ ಮಗನನ್ನು ಪಡೆದ ನೀವೇ ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲಸ ನೋಡಿ ಯಾರನ್ನು ಅಳೆಯಬೇಡಿ

ವೆಲ್ತ್ (Wealth) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರ ಶೀರ್ಷಿಕೆಯಲ್ಲಿ ಈ ಪ್ರಪಂಚದಲ್ಲಿ ಜನರನ್ನು ಕೆಲಸ ಅಥವಾ ಹುದ್ದೆಯನ್ನು ನೋಡಿ ಅಳೆಯಲಾಗುತ್ತದೆ. ಡ್ರೈವರ್, ಸ್ವಚ್ಛತಾ ಕಾರ್ಮಿಕರು, ಅಡುಗೆಯವರು, ಡೆಲಿವರಿ ಬಾಯ್ ಗಳನ್ನು ಕೆಲವರು ಕಣ್ಣೆತ್ತಿ ಕೂಡ ನೋಡಲ್ಲ. ಆದರೆ ಪ್ರತಿಯೊಬ್ಬರು ಧರಿಸುವ ಯೂನಿಫಾರ್ಮ್ ಹಿಂದೆ ಒಬ್ಬ ಮನುಷ್ಯನಿದ್ದಾನೆ ಎಂಬುದನ್ನು ಮರೆಯುವಂತಿಲ್ಲ. ಯಾರದ್ದೋ ತಂದೆ, ಯಾರದ್ದೋ ತಾಯಿ, ಇನ್ಯಾರದ್ದೋ ಅಣ್ಣ ಅಥವಾ ತಂಗಿಯಾಗಿದ್ದಾನೆ. ತಾನು ಪ್ರೀತಿಸುವ ಕುಟುಂಬಕ್ಕೆ, ತನ್ನನ್ನೇ ನಂಬಿಕೊಂಡ ಕುಟುಂಬಕ್ಕೆ ಕೊರತೆ ಬಾರದೆನ್ನುವ ಎನ್ನುವ ಕಾರಣಕ್ಕೆ ತನ್ನ ಜೀವನವನ್ನು ಸವೆಸುತ್ತಾನೆ. ಸೂರ್ಯ ಹುಟ್ಟುವ ಮೊದಲೇ ಎದ್ದು ಕಷ್ಟವಾದರೂ ಸರಿಯೇ ದುಡಿಯುವ ಮನುಷ್ಯನೊಬ್ಬನಿದ್ದಾನೆ. ಕೆಲಸ ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಗುರುತಿಸಲ್ಲ. ಆತನ ಪ್ರಾಮಾಣಿಕತೆಯನ್ನು ನಿರ್ಧರಿಸುತ್ತದೆ. ನಿಮ್ಮನ್ನೇ ನಂಬಿಕೊಂಡ ವ್ಯಕ್ತಿಗಳ ಹೊಟ್ಟೆ ತುಂಬಿಸುವ ಯಾವುದೇ ಕೆಲಸಕ್ಕೂ ನೀವು ನಾಚಿಕೆ ಪಡಬೇಡಿ, ನಿಮಗಾಗಿ ಆ ಕೆಲಸ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Wealth (@wealth)

ಪ್ರೇಯಸಿಗೆ ತಂದೆಯನ್ನು ಪರಿಚಯಿಸಿಕೊಟ್ಟ ಯುವಕ

ಈ ಕ್ಲಿಪಿಂಗ್ ನಲ್ಲಿ ಪ್ರೇಮಿಗಳಿಬ್ಬರು ಹೋಟೆಲ್ ನಲ್ಲಿ ಎದುರು ಬದುರು ಕುಳಿತುಕೊಂಡಿದ್ದಾರೆ. ಇದೇ ವೇಳೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ತಂದೆಯೂ ತನ್ನ ಮಗನು ಹೋಟೆಲ್‌ನಲ್ಲಿರುವುದನ್ನು ತಿಳಿಯದೇ ಬಂದಿದ್ದಾರೆ. ಮಗ ಹಾಗೂ ತಂದೆ ಇಬ್ಬರೂ ಒಬ್ಬರನ್ನೊಬ್ಬರು ನೋಡಿದ್ದಾರೆ. ಅಪ್ಪನನ್ನು ನೋಡುತ್ತಿದ್ದಂತೆ ಯುವಕನು ತಂದೆಯ ಹತ್ತಿರ ಬರಲು ಮುಂದಾಗುತ್ತಾನೆ. ಆದ್ರೆ ಆ ವ್ಯಕ್ತಿ ಬೇಡ ಅಲ್ಲೇ ಕುಳಿತುಕೋ ಎಂದು ಸನ್ನೆಯಲ್ಲಿ ಹೇಳುವುದನ್ನು ನೀವಿಲ್ಲಿ ನೋಡಬಹುದು. ಆದರೆ ಯುವಕ ಮಾತ್ರ ತನ್ನ ತಂದೆಯ ಭಲಿ ಹೋಗಿ ಮಾತನಾಡಿಸಿ, ಕೊನೆಗೆ ಕೈಯನ್ನು ಹಿಡಿದು ಗರ್ಲ್ ಫ್ರೆಂಡ್ ಬಳಿಗೆ  ಕರೆದುಕೊಂಡು ಹೋಗಿದ್ದಾನೆ.  ಆಕೆಗೆ ತನ್ನ ತಂದೆಯನ್ನು ಪರಿಚಯ ಮಾಡಿಕೊಡುವುದು ಈ ವಿಡಿಯೋದಲ್ಲಿದೆ.

ಇದನ್ನೂ ಓದಿ: ವಿದೇಶದಲ್ಲಿದ್ದ ಮಗಳಿಗೆ ಹೆತ್ತವರಿಂದ ಬಂತು ದೀಪಾವಳಿ ಗಿಫ್ಟ್, ಯುವತಿ ಫುಲ್ ಖುಷ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮಗನಿಗೆ ತಂದೆಯೇ ಪ್ರಪಂಚ ಎಂದಿದ್ದಾರೆ. ಇನ್ನೊಬ್ಬರು, ಕೆಲಸಕ್ಕಿಂತ ವ್ಯಕ್ತಿ ಮುಖ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲಸ ಆಧಾರವಾಗಿ ಯಾರನ್ನು ಅಳೆಯಬಾರದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Fri, 6 November 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More