Video: ವಿದೇಶದಲ್ಲಿದ್ದ ಮಗಳಿಗೆ ಹೆತ್ತವರಿಂದ ಬಂತು ದೀಪಾವಳಿ ಗಿಫ್ಟ್, ಯುವತಿ ಫುಲ್ ಖುಷ್
ಮಕ್ಕಳು ಎಷ್ಟೇ ದೊಡ್ಡವರಾದ್ರೂ ತಂದೆ ತಾಯಿಗೆ ಪುಟ್ಟ ಮಕ್ಕಳೇ. ಇದಕ್ಕೆ ಸಾಕ್ಷಿ ಆಗುವ ದೃಶ್ಯಗಳೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವಿದೇಶದಲ್ಲಿ ನೆಲೆಸಿರುವ ಮಗಳಿಗೆ ತಂದೆ ತಾಯಿ ದೀಪಾವಳಿಯ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಓದು, ಉದ್ಯೋಗ ಎಂದು ದೂರದ ಊರಿಗೆ ಮಕ್ಕಳು ತೆರಳುವಾಗ ಹೆತ್ತವರು ಕಣ್ಣೀರು ಹಾಕುತ್ತಾರೆ. ಇದೆಲ್ಲದರ ನಡುವೆ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬಯಸುವುದು ಸಹಜ. ಹೀಗಾಗಿ ತಂದೆ ತಾಯಿಯ (parents) ಪ್ರೀತಿಗೆ ಸರಿಸಾಟಿಯಿಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ವಿದೇಶದಲ್ಲಿ ನೆಲೆಸಿರುವ ಮಗಳಿಗೆ ಹೆತ್ತವರು ದೀಪಾವಳಿಗೆ ಸರ್ಪ್ರೈಸ್ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ವಿಡಿಯೋ ಸಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿದೇಶದಲ್ಲಿದ್ದ ಮಗಳಿಗೆ ಹೆತ್ತವರಿಂದ ಬಂತು ದಿವಾಳಿ ಗಿಫ್ಟ್
ತಾನ್ಯಾ ಶ್ರೀವಾಸ್ತಾವ್ (Tanya Srivastava) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ನಾನೆಷ್ಟು ದೊಡ್ಡವಳಾದರೂ ಅಪ್ಪ ಅಮ್ಮ ಗಿಫ್ಟ್ ಕಳುಹಿಸಿಕೊಟ್ಟಾಗ ಪುಟ್ಟ ಮಗುವೇ ಆಗುತ್ತೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಕ್ಲಿಪಿಂಗ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಪ್ಪ-ಅಮ್ಮ ಕಳುಹಿಸಿದ ಪಾರ್ಸೆಲ್ ನ್ನು ಯುವತಿ ತೆರೆದು ನೋಡುತ್ತಿದ್ದಾರೆ. ತಂದೆ ತಾಯಿ ಭಾರತದಿಂದ ಕಳುಹಿಸಿಕೊಟ್ಟ ತಿಂಡಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳನ್ನು ಸವಿದು ಖುಷಿ ಪಟ್ಟಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಇದು ಕೇವಲ ಆರಂಭವಷ್ಟೇ; ಮೊದಲ ಬಾರಿಗೆ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದೊಯ್ದ ಮಗ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೆತ್ತವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಈ ಖುಷಿವು ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ನಿಜಕ್ಕೂ ಅದೃಷ್ಟವಂತರು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




