Video: ಇದು ಕೇವಲ ಆರಂಭವಷ್ಟೇ; ಮೊದಲ ಬಾರಿಗೆ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದೊಯ್ದ ಮಗ
ಆಕಾಶದಲ್ಲಿ ಹಾರಾಡುವ ವಿಮಾನವನ್ನು ನೋಡಿದಾಗ ಒಮ್ಮೆಯಾದ್ರು ವಿಮಾನದಲ್ಲಿ ಹೋಗ್ಬೇಕು ಎಂದೆನಿಸುವುದು ಸಹಜ. ಆದರೆ ಇದೀಗ ಮಗನು ತನ್ನ ತಂದೆ ತಾಯಿ ಆಸೆಯನ್ನು ಈಡೇರಿಸಿದ್ದಾನೆ. ಮೊದಲ ಬಾರಿಗೆ ತನ್ನ ಹೆತ್ತವರನ್ನು ವಿಮಾನ ಹತ್ತಿಸಿದ್ದಾನೆ. ಹೌದು, ಹೆತ್ತ ತಂದೆ ತಾಯಿ ಜತೆಗೆ ಆಕಾಶದೆತ್ತರ ಹಾರಾಡಿದ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೆನ್ನಾಗಿ ಓದಿ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಂಡು ತಂದೆ ತಾಯಿಯನ್ನು (parents) ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಪ್ರತಿಯೊಬ್ಬ ಮಕ್ಕಳದ್ದು. ಅವರ ಸಣ್ಣ ಪುಟ್ಟ ಕನಸುಗಳನ್ನು ಈಡೇರಿಸುವ ಸಮಯ ಬಂದ್ರೆ ಅದಕ್ಕಿಂತ ಖುಷಿ ಏನಿದೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಯುವಕನೊಬ್ಬ ತನ್ನ ತಂದೆ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಹೆತ್ತವರ ಖುಷಿ ನೋಡಲು ಎರಡು ಕಣ್ಣು ಸಾಲದು
ಬಾಬಿ (Bobby) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಕನಸು ಹೆತ್ತವರ ಜತೆಗೆ ಕಳೆದ ಸುಂದರ ಕ್ಷಣ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ, ಕನಸು ನನಸಾಯಿತು. ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ, ವಿಮಾನದಲ್ಲಿ ಪ್ರಯಾಣಿಸುವುದು ಯಾವಾಗಲೂ ಒಂದು ಕನಸಿನಂತೆಯೇ ಭಾಸವಾಗುತ್ತಿತ್ತು. ಚಿಕ್ಕವನಿದ್ದಾಗ, ಆಕಾಶದತ್ತ ನೋಡುತ್ತಾ, ಒಂದು ದಿನ, ನನ್ನ ಕುಟುಂಬವನ್ನು ವಿಮಾನದಲ್ಲಿ ಕರೆದೊಯ್ಯುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಇಂದು, ಆ ಕನಸು ನನಸಾಗಿದೆ. ನನ್ನ ತಂದೆ ತಾಯಿ ಮೊದಲ ಬಾರಿಗೆ ಈ ಅನುಭವವನ್ನು ಪಡೆಯುವುದನ್ನು ನೋಡುವುದು, ಅವರಲ್ಲಿನ ಉತ್ಸಾಹ ಮತ್ತು ಸಂತೋಷವನ್ನು ಕಣ್ಣಾರೆ ಕಾಣುವುದು. ಇದನ್ನು ವಿವರಿಸಲು ಪದಗಳೇ ಸಾಲಲ್ಲ.
ಕನಸುಗಳು ಅನೇಕ ಇವೆ, ಇದು ಕೇವಲ ಆರಂಭವಷ್ಟೇ
ಇದು ಅವರ ಕನಸೂ ಆಗಿತ್ತು, ಅದನ್ನು ನನಸಾಗಿಸಲು ನನಗೆ ಸಾಧ್ಯವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ಕೇವಲ ಒಂದು ವಿಮಾನ ಪ್ರಯಾಣವಲ್ಲ; ಇದೊಂದು ಭಾವನೆ, ನೀಡಿದ ಮಾತನ್ನು ಉಳಿಸಿಕೊಂಡ ಕ್ಷಣ ಹಾಗೂ ಕನಸುಗಳು ನಿಜವಾಗುತ್ತವೆ ಎಂಬುದಕ್ಕೆ ಇದುವೇ ಸಾಕ್ಷಿ. ಒಂದು ಕನಸು ನನಸಾಗಿದೆ, ಇನ್ನೂ ಅನೇಕ ಕನಸುಗಳು ಈಡೇರಬೇಕಿವೆ. ಇದು ಕೇವಲ ಆರಂಭವಷ್ಟೇ ಎಂದು ಭಾವನಾತ್ಮಕವಾಗಿ ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ತಂದೆ ತಾಯಿ ಜತೆಗೆ ಯುವಕನ ವಿಮಾನ ಪ್ರಯಾಣ
ಈ ವಿಡಿಯೋದಲ್ಲಿ ಬಾಲ್ಯದಲ್ಲಿ ಕಂಡ ಕನಸನ್ನು ನನಸು ಮಾಡಿದ ಖುಷಿ ಯುವಕನಿಗಿದೆ. ಈ ಕ್ಲಿಪಿಂಗ್ ನಲ್ಲಿ ತಂದೆ ತಾಯಿ ವಿಮಾನದಲ್ಲಿ ಪ್ರಯಾಣಿಸಿರುವುದು, ಕುಟುಂಬದ ಜತೆಗೆ ಕಳೆದ ಸುಂದರ ಕ್ಷಣಗಳನ್ನು ನೀವಿಲ್ಲಿ ನೋಡಬಹುದು.ಹೆತ್ತವರ ಖುಷಿ ನೋಡಲು ಎರಡು ಕಣ್ಣು ಸಾಲದು
ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮನ್ನು ಮಗನಾಗಿ ಪಡೆದ ಹೆತ್ತವರೇ ಪುಣ್ಯವಂತರು ಎಂದಿದ್ದಾರೆ. ಇನ್ನೊಬ್ಬರು, ಹೆತ್ತವರ ಮೊಗದಲ್ಲಿ ಖುಷಿ ನೋಡಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ದಿನದ ಬೆಸ್ಟ್ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
