ಆಂಧ್ರಪ್ರದೇಶ: ಯುವಕನೊಬ್ಬ ಮಂಗಳಮುಖಿಯನ್ನು ಮೂರು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿರುವ ಘಟನೆ ಆಂಧ್ರಪ್ರದೇಶದ ಎನ್ ಟಿಆರ್ ಜಿಲ್ಲೆಯಲ್ಲಿ ನಡೆದಿದೆ. ವಿಸ್ಸನ್ನಪೇಟೆ ನಿವಾಸಿ ನಂದು ಮತ್ತು ಎಂಕೂರಿನ ತೃತೀಯಲಿಂಗಿ ನಕ್ಷತ್ರಾ ಮದುವೆಯಾದ ನವ ಜೋಡಿ. ಸದ್ಯ ಇವರಿಬ್ಬರ ಮದುವೆಯ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ತೃತೀಯಲಿಂಗಿ ಸಮುದಾಯದ ಪ್ರತಿನಿಧಿಗಳ ಸಮ್ಮುಖದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚಿಗಷ್ಟೇ ಮದುವೆ ನಡೆದಿದೆ. ” ನಾನು ಮಂಗಳಮುಖಿಯನ್ನು ಮದುವೆಯಾಗುವುದು ನನ್ನ ಕುಟುಂಬದವರಿಗೆ ಇಷ್ಟವಿಲ್ಲ. ಆದರೆ ನಾವಿಬ್ಬರು ಸುದೀರ್ಘ ಚರ್ಚೆ ನಡೆಸಿ ಮದುವೆಯಾಗಲು ನಿರ್ಧರಿಸಿದೆವು. ನಾನು ತೃತೀಯಲಿಂಗಿ ಸಂಘದ ಸದಸ್ಯರನ್ನು ಭೇಟಿ ಮಾಡಿ ಅವರ ಬೆಂಬಲದೊಂದಿಗೆ ಮದುವೆ ಯಾವುದೇ ಅಡೆತಡೆಗಳಿಲ್ಲದೆ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ತೃತೀಯಲಿಂಗಿ ಸಮುದಾಯದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದಾರೆ ” ಎಂದು ಮದುಮಗ ನಂದು ಹೇಳಿದ್ದಾನೆ. ಮನಃಪೂರ್ವಕವಾಗಿ ಆಶೀರ್ವದಿಸಿದರು.
ಇದನ್ನೂ ಓದಿ: ಸಂಭೋಗದ ವೇಳೆ ತೀವ್ರ ರಕ್ತಸ್ರಾವ, ಪ್ರಿಯಕರನ ನಿರ್ಲಕ್ಷ್ಯದಿಂದ ಯುವತಿಯ ಪ್ರಾಣವೇ ಹೋಯ್ತು
shethepeopletv ಎಂಬ ಟ್ವಟಿರ್ ಖಾತೆಯಲ್ಲಿ ಇವರಿಬ್ಬರ ಮದುವೆಯ ಕುರಿತ ಫೋಟೋ ಹಂಚಿಕೊಳ್ಳಲಾಗಿದ್ದು, ಸದ್ಯ ಫೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಮದುವೆಗೆ ಶುಭ ಹಾರೈಸಿದ್ದಾರೆ. ಇರೋದೊಂದು ಜೀವನ ನಿಮ್ಮ ಇಷ್ಟದಂತೆ ನೀವು ಬದುಕಿ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನ್ಲಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ