Viral: ಫೀಸ್‌ ಕಟ್ಟಿಲ್ಲ, ಮಕ್ಕಳನ್ನು ಶಾಲೆಯಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ ಪ್ರೈವೆಟ್‌ ಸ್ಕೂಲ್‌ ಮ್ಯಾನೇಜರ್

ಇಲ್ಲೊಂದು ಕಡೆ ಅಮಾನವೀಯ ಘಟನೆಯೊಂದು ನಡೆದಿದ್ದು, ಪೋಷಕರು ಸಮಯಕ್ಕೆ ಸರಿಯಾಗಿ ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಪ್ರೈವೆಟ್‌ ಸ್ಕೂಲ್‌ ಮ್ಯಾನೇಜರ್‌ ಒಬ್ಬ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ನಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಮ್ಯಾನೇಜರ್‌ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Viral: ಫೀಸ್‌ ಕಟ್ಟಿಲ್ಲ, ಮಕ್ಕಳನ್ನು ಶಾಲೆಯಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ ಪ್ರೈವೆಟ್‌ ಸ್ಕೂಲ್‌ ಮ್ಯಾನೇಜರ್
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 02, 2024 | 3:17 PM

ಕೆಲವೊಂದು ಬಾರಿ ನಾನಾ ಕಾರಣಗಳಿಂದ ಪೋಷಕರಿಗೆ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣವನ್ನು ಇಟ್ಟುಕೊಂಡು ಶಿಕ್ಷಕರು ಅಥವಾ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅವಮಾನ ಮಾಡುವಂತಿಲ್ಲ. ಆದ್ರೆ ಇಲ್ಲೊಂದು ಖಾಸಗಿ ಶಾಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಪೋಷಕರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್‌ ಮ್ಯಾನೇಜರ್‌ ಒಬ್ಬ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ನಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್‌ ಮ್ಯಾನೇಜರ್‌ ಸುಮಾರು 100 ಮುಗ್ಧ ವಿದ್ಯಾರ್ಥಿಗಳನ್ನು ಗೇಟ್‌ ಒಳಗೆ ಬರಲು ಬಿಡದೆ ಬಿಸಿಲಲ್ಲಿ ಕೂರಿಸಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಮಾಡುವ ಮೂಲಕ ಶುಲ್ಕ ಕಟ್ಟುವಂತೆ ಒತ್ತಡ ಹೇರಿ ಮಕ್ಕಳಿಗೆ ಅವಮಾನವನ್ನೂ ಮಾಡಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದ್ದು, ಮ್ಯಾನೇಜರ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಶಾಲಾ ನಿರೀಕ್ಷಕರು ತನಿಖೆಗೆ ಆದೇಶಿಸಿದ್ದಾರೆ.

Info_4Education ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಕ್ಕಳು ಶಾಲೆಗೆ ಗೇಟ್‌ ಹೊರಗಡೆ ಬಿಸಿಲಿನಲ್ಲಿ ತಲೆ ತಗ್ಗಿಸಿ ಕುಳಿತಿರುವಂತಹ ದೃಶ್ಯವನ್ನು ಕಾಣಬಹುದು. ಶುಲ್ಕವನ್ನು ಕಟ್ಟುವವರೆಗೆ ನಿಮ್ಮ ಮಕ್ಕಳನ್ನು ಶಾಲೆಯ ಗೇಟ್‌ ಒಳಗೆ ಬಿಡುವುದಿಲ್ಲ ಎಂದು ಪೋಷಕರಿಗೆ ಈಗಾಗಲೇ ತಿಳಿಸಲಾಗಿದೆ, ಆದ್ರೆ ಅವರು ಇನ್ನೂ ಫೀಸ್‌ ಕಟ್ಟಿಲ್ಲ ಅದಕ್ಕಾಗಿ ಇವರನ್ನೆಲ್ಲಾ ಹೊರ ಹಾಕಿದ್ದೇನೆ ಎಂದು ಮ್ಯಾನೇಜರ್‌ ವಿಡಿಯೋ ಮಾಡುತ್ತಾ ದರ್ಪದ ಮಾತುಗಳನ್ನಾಡಿದ್ದಾನೆ.

ಇದನ್ನೂ ಓದಿ: ತಂದೆಯೇ ತನ್ನ ಮಗಳನ್ನು ಮದುವೆಯಾಗುವ ಅನಿಷ್ಠ ಸಂಪ್ರದಾಯ, ಎಂಥಾ ವಿಚಿತ್ರ ಪದ್ಧತಿ ನೋಡಿ…

ಅಕ್ಟೋಬರ್‌ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಶುಲ್ಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬಹುದಿತ್ತಲ್ವಾʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಗಾಂಧಿ ಜಯಂತಿ: ಪೊರಕೆ ಹಿಡಿದ ಸಚಿವ ಪ್ರಲ್ಹಾದ್ ಜೋಶಿ, ವಿಜಯೇಂದ್ರ!
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ