Viral: ಮನೆಗೆ ನುಗ್ಗಲು ಯತ್ನಿಸಿದ ದರೋಡೆಕೋರರನ್ನು ಏಕಾಂಗಿಯಾಗಿ ತಡೆದು ನಿಲ್ಲಿಸಿದ ದಿಟ್ಟ ಮಹಿಳೆ
ಸೋಷಿಯಲ್ ಮೀಡಿಯಾದಲ್ಲಿ ಕೆಚ್ಚೆದೆಯ ಮಹಿಳೆಯೊಬ್ಬರ ಧೈರ್ಯ ಮತ್ತು ಶೌರ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಮನೆಯೊಂದರ ಬಾಗಿಲು ತೆರೆದು ದರೋಡೆಕೋರರು ಒಳ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಆ ಮಹಿಳೆ ಏಕಾಂಗಿಯಾಗಿ ಹೋರಾಡಿ ಕಳ್ಳರು ಮನೆಯೊಳಗೆ ನುಗ್ಗದಂತೆ ತಡೆದು ನಿಲ್ಲಿಸಿ ತಮ್ಮ ಸೂರನ್ನು ರಕ್ಷಿಸಿದ್ದಾರೆ. ಇವರ ಈ ಧೈರ್ಯಕ್ಕೆ ಇದೀಗ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹೆಣ್ಣು ತಾನು-ತನ್ನವರು, ತನ್ನ ಕಟುಂಬ, ಸೂರನ್ನು ರಕ್ಷಿಸಲು ರಣ ಚಂಡಿಯೂ ಆಗುತ್ತಾಳೆ, ಕಾಳಿಯ ರೂಪವನ್ನೂ ತಾಳುತ್ತಾಳೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದ್ದು, ಮಹಿಳೆಯೊಬ್ಬರು ಮನೆಗೆ ನುಗ್ಗಲು ಯತ್ನಿಸಿದ ದರೋಡೆಕೋರರ ವಿರುದ್ಧ ಏಕಾಂಗಿಯಾಗಿ ಹೋರಾಡಿ, ಆ ಕಳ್ಳರು ಮನೆಗೆ ನುಗ್ಗದಂತೆ ಬಾಗಿಲಿನಲ್ಲಿಯೇ ತಡೆದು ನಿಲ್ಲಿಸಿ ತಮ್ಮ ಸೂರನ್ನು ರಕ್ಷಿಸಿದ್ದಾರೆ. ಈ ದಿಟ್ಟ ಮಹಿಳೆಯ ಧೈರ್ಯಕ್ಕೆ ಇದೀಗ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಘಟನೆ ಅಮೃತಸರದ ವರ್ಕಾ ಪ್ರದೇಶದಲ್ಲಿ ನಡೆದಿದ್ದು, ಮೂವರು ದರೋಡೆಕೋರರು ಆಭರಣ ವ್ಯಾಪಾರಿಯೊಬ್ಬರ ಮನೆಯಲ್ಲಿ ಹಗಲು ದರೋಡೆಗೆ ಯತ್ನಿಸಿದ್ದಾರೆ. ಆದರೆ ತನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ಮನೆಯ ಯಜಮಾನಿ ಕಳ್ಳರು ಮನೆಯ ಒಳಗೆ ನುಗ್ಗದಂತೆ ತಡೆದು ನಿಲ್ಲಿಸಿ ಖದೀಮರ ಯೋಜನೆಯನ್ನು ವಿಫಲಗೊಳಿಸಿದ್ದಾರೆ. ವರದಿಗಳ ಪ್ರಕಾರ ಈ ಮಹಿಳೆ ಮನೆಯ ಮೇಲ್ಛಾವಣಿಯ ಮೇಲೆ ಬಟ್ಟೆ ಒಣಗಿಸುತ್ತಿದ್ದ ಸಂದರ್ಭದಲ್ಲಿ ಮಾಸ್ಕ್ ಹಾಕಿದಂತಹ ಮೂವರು ವ್ಯಕ್ತಿಗಳು ಮನೆಯ ಸುತ್ತ ಅನುಮಾನಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ಅವರು ಮನೆಯ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಓಡಿ ಬಂದ ಮಹಿಳೆ ಆ ದರೋಡೆಕೋರರು ಮನೆಗೆ ನುಗ್ಗದಂತೆ ಏಕಾಂಗಿಯಾಗಿ ಹೋರಾಡಿ ಬಾಗಿಲನ್ನು ಭದ್ರವಾಗಿ ಮುಚ್ಚಿದ್ದಾರೆ. ನಂತರ ಅವರು ಜೋರಾಗಿ ಕಿರುಚಾಡಿದ್ದು, ಭಯದಿಂದ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
Robbers tried to loot a house, But the robbers could not do anything in front of the Brave Woman present in the house. The brave woman single-handedly overpowered three robbers🫡, Amritsar pic.twitter.com/NQuAwauAYf
— Ghar Ke Kalesh (@gharkekalesh) October 1, 2024
Gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ದರೋಡೆಕೋರರ ವಿರುದ್ಧ ಏಕಾಂಗಿಗಾಗಿ ಹೋರಾಡುತ್ತಿರುವ ದೃಶ್ಯವನ್ನು ಕಾಣಬಹುದು. ದರೋಡೆಕೋರರು ಬಾಗಿಲನ್ನು ತಳ್ಳಿ ಒಳ ಬರಲು ಯತ್ನಿಸಿದಾಗ ದಿಟ್ಟ ಮಹಿಳೆ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿಕೊಂಡು ಬಾಗಿಲು ಲಾಕ್ ಮಾಡಿ ಕಳ್ಳರು ಮನೆಯೊಳಗೆ ಪ್ರವೇಶಿಸದಂತೆ ತಡೆದಿದ್ದಾರೆ.
ಇದನ್ನೂ ಓದಿ: ಫೀಸ್ ಕಟ್ಟಿಲ್ಲ, ಮಕ್ಕಳನ್ನು ಶಾಲೆಯಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ ಪ್ರೈವೆಟ್ ಸ್ಕೂಲ್ ಮ್ಯಾನೇಜರ್
ಅಕ್ಟೋಬರ್ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 3.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಕೆಚ್ಚೆದೆಯ ಮಹಿಳೆಯ ಧೈರ್ಯಕ್ಕೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼತನ್ನ ಕುಟುಂಬವನ್ನು ರಕ್ಷಿಸಲು ಹೆಣ್ಣು ಯಾವ ಮಟ್ಟಕ್ಕೂ ಹೋಗುತ್ತಾಳೆ ಎಂಬುದಕ್ಕೆ ಇದೇ ಸಾಕ್ಷಿʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Wed, 2 October 24