Viral: ತಂದೆಯೇ ತನ್ನ ಮಗಳನ್ನು ಮದುವೆಯಾಗುವ ಅನಿಷ್ಠ ಸಂಪ್ರದಾಯ, ಎಂಥಾ ವಿಚಿತ್ರ ಪದ್ಧತಿ ನೋಡಿ…
ಈ ಜಗತ್ತಿನಲ್ಲಿ ಇಂದಿಗೂ ಹಲವಾರು ಚಿತ್ರ ವಿಚಿತ್ರ ಸಂಪ್ರದಾಯ, ಅಚರಣೆಗಳು ರೂಢಿಯಲ್ಲಿವೆ. ಅದರಲ್ಲಿ ಕೆಲವೊಂದು ಸಂಪ್ರದಾಯಗಳನ್ನು ನೋಡಿದಾಗ ನಿಜಕ್ಕೂ ನಮಗೆ ಆಶ್ಚರ್ಯವಾಗುತ್ತದೆ. ಅವುಗಳಲ್ಲಿ ಒಂದು ತಂದೆಯೇ ಮಗಳನ್ನು ಮದುವೆಯಾಗುವ ವಿಚಿತ್ರ ಸಂಪ್ರದಾಯ. ಇಲ್ಲೊಂದು ಕಡೆ ಮಗಳನ್ನೇ ತಂದೆಯಾದವನು ಮದುವೆಯಾಗುವಂತಹ ಅನಿಷ್ಠ ಪದ್ಧತಿ ರೂಢಿಯಲ್ಲಿದೆ. ಇದು ಇರುವುದಾದರೂ ಎಲ್ಲಿ, ಇದು ಏಕೆ ಚಾಲ್ತಿಯಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಜಗತ್ತಿನಲ್ಲಿ ಹಲವಾರು ಚಿತ್ರ ವಿಚಿತ್ರ ಸಂಪ್ರದಾಯ, ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿದೆ. ಹೌದು ಜಗತ್ತು ಎಷ್ಟೇ ಮುಂದುವರಿದಿದ್ದರೂ ಕೂಡಾ ಇಂದಿಗೂ ಕೆಲವೊಂದು ಕಡೆ ಈ ವಿಚಿತ್ರ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ. ಅದರಲ್ಲೂ ಕೆಲವೊಂದು ಬುಡಕಟ್ಟು ಜನಾಂಗದ ವಿಚಿತ್ರ ಆಚರಣೆಗಳು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತದೆ. ಈ ಪೈಕಿ ತಂದೆಯೇ ಮಗಳನ್ನು ಮದುವೆಯಾಗುವ ವಿಚಿತ್ರ ಸಂಪ್ರದಾಯ ಕೂಡಾ ಒಂದು. ಹೌದು ಇಲ್ಲೊಂದು ಕಡೆ ಬುಡಕಟ್ಟು ಜನಾಂಗದಲ್ಲಿ ಮಗಳನ್ನೇ ತಂದೆಯಾದವನು ಮದುವೆಯಾಗುವಂತಹ ಅನಿಷ್ಠ ಪದ್ಧತಿ ರೂಢಿಯಲ್ಲಿದೆ. ಇದು ಇರುವುದಾದರೂ ಎಲ್ಲಿ, ಇದು ಏಕೆ ಚಾಲ್ತಿಯಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ತಂದೆ-ಮಗಳ ಸಂಬಂಧವು ತುಂಬಾನೇ ಪವಿತ್ರವಾದದ್ದು, ಆದ್ರೆ ಈ ಬುಡಕಟ್ಟು ಸಮುದಾಯದಲ್ಲಿ ತಂದೆಯೇ ಮಗಳನ್ನು ಮದುವೆಯಾಗಬೇಕಂತೆ. ವರದಿಗಳ ಪ್ರಕಾರ, ಈ ವಿಚಿತ್ರ ಸಂಪ್ರದಾಯ ಬಾಂಗ್ಲಾದೇಶದ ʼಮಂಡಿ ಬುಡಕಟ್ಟುʼ ಸಮುದಾಯದಲ್ಲಿ ರೂಢಿಯಲ್ಲಿದೆ. ಇಲ್ಲಿ ತಂದೆಯೇ ಮಗಳನ್ನು ಮದುವೆಯಾಗುತ್ತಾನಂತೆ. ಹೌದು ಈ ಬುಡಕಟ್ಟು ಜನಾಂಗದಲ್ಲಿ ಹುಟ್ಟುವ ಹೆಣ್ಣು ತನ್ನ ಮಲತಂದೆಯನ್ನೇ ಮದುವೆಯಾಗಬೇಕು ಎಂಬ ಅನಿಷ್ಟ ಪದ್ಧತಿ ಆಚರಣೆಯಲ್ಲಿದೆ. ಅಂದರೆ ಒಂದು ವೇಳೆ ಈ ಬುಡಕಟ್ಟು ಜನಾಂಗದ ಮಹಿಳೆಯ ಗಂಡ ತೀರಿ ಹೋದರೆ ಆಕೆಗೆ ಇನ್ನೊಂದು ಮದುವೆಯಾಗುವ ಅವಕಾಶವಿದೆ. ಜೊತೆಗೆ ಆಕೆಯನ್ನು ಯಾರು ಎರಡನೇ ಮದುವೆಯಾಗುತ್ತಾನೋ ಆತ, ಆಕೆಗೆ ಮೊದಲ ಪತಿಯಿಂದ ಹುಟ್ಟಿರುವ ಹೆಣ್ಣು ಮಗಳನ್ನು ಕೂಡಾ ಮದುವೆಯಾಗಬೇಕು.
ಇದನ್ನೂ ಓದಿ: ಈ ವಯಸ್ಸಲ್ಲಿ ಇದೆಲ್ಲಾ ಬೇಕಾ, ಚಲಿಸುತ್ತಿರುವ ರೈಲಿನಲ್ಲಿ ತಾತಪ್ಪನ ಕಸರತ್ತು ಕಂಡು ಸುಸ್ತಾದ ನೆಟ್ಟಿಗರು
ಇವರ ಆಚರಣೆಯ ಪ್ರಕಾರ, ಚಿಕ್ಕ ವಯಸ್ಸಿನಲ್ಲಿಯೇ ಮಹಿಳೆ ವಿಧವೆಯಾದರೆ, ಆಕೆಯ ಮಗಳು ಕೂಡಾ ವಿಧವೆಯಾಗುತ್ತಾಳೆ. ಆಗ ತಾಯಿ ಎರಡನೇ ಮದುವೆಯಾದರೆ, ಮಗಳು ಸಹ ತನ್ನ ಮಲತಂದೆಯನ್ನು ಗಂಡನೆಂದು ಸ್ವೀಕರಿಸಬೇಕಂತೆ. ಮತ್ತು ಆಕೆ ಆತನಿಂದಲೇ ಮಕ್ಕಳನ್ನು ಪಡೆಯಬೇಕಂತೆ. ತಾಯಿ ಮತ್ತು ಮಗಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಈ ಸಂಪ್ರದಾಯವನ್ನು ಪಾಲಿಸುತ್ತಾರಂತೆ ಇಲ್ಲಿನ ಜನ. ಈ ಅನಿಷ್ಟ ಆಚರಣೆ ಅದೆಷ್ಟೋ ಹೆಣ್ಣು ಮಕ್ಕಳ ಬದುಕನ್ನೇ ಹಾಳು ಮಾಡಿದೆ. ವಿಪರ್ಯಾಸ ಏನಪ್ಪಾ ಅಂದ್ರೆ ಈ ಆಧುನಿಕ ಯುಗದಲ್ಲೂ ಈ ಅನಿಷ್ಟ ಪದ್ಧತಿ ಆಚರಣೆಯಲ್ಲಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ