ಚಹಾಗೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೆಸರಿಟ್ಟ ಅಸ್ಸಾಂ ಮೂಲದ ಸ್ಟಾರ್ಟ್​ಅಪ್​

ಅಸ್ಸಾಂ ಮೂಲದ ಟೀ ಸ್ಟಾರ್ಟಪ್ ಝೆಲೆನ್ಸ್ಕಿ ಅವರ ಶೌರ್ಯ ಮತ್ತು ಧೈರ್ಯವನ್ನು ಗೌರವಿಸಲು ಅವರ ಹೆಸರಿನ ಟೀಯನ್ನು ಪ್ರಾರಂಭಿಸಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.

ಚಹಾಗೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೆಸರಿಟ್ಟ ಅಸ್ಸಾಂ ಮೂಲದ ಸ್ಟಾರ್ಟ್​ಅಪ್​
ಟೀಗೆ ವೊಲೊಡಿಮಿರ್ ಝೆಲೆನ್ಸ್ಕಿ ಹೆಸರು
Edited By:

Updated on: Mar 19, 2022 | 9:50 AM

ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ (Ukraine Russia War) 24ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ( Volodymyr Zelenskyy)  ಧೈರ್ಯದಿಂದ ಹೋರಾಡುತ್ತಿದ್ದಾರೆ. ಜನತೆಯನ್ನು ದೇಶವನ್ನು ಉಳಿಸಿಕೊಳ್ಳಲು ಹೋರಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಜಗತ್ತಿನಾದ್ಯಂತ ಝಲೆನ್ಸ್ಕಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಝಲೆನ್ಸ್ಕಿ ಧೈರ್ಯಕ್ಕೆ ಅಸ್ಸಾಂ ಮೂಲದ ಟೀ ಕಂಪನಿಯೊಂದು ಟೀ ಪ್ಯಾಕ್​ಗೆ ಅವರ ಹೆಸರು ಇಡುವ ಮೂಲಕ ಗೌರವ ಸಲ್ಲಿಸಿದೆ.

ಅಸ್ಸಾಂ ಮೂಲದ ಟೀ ಸ್ಟಾರ್ಟಪ್ ಅರೋಮಿಕಾ ಟೀ ಕಂಪನಿ ಝೆಲೆನ್ಸ್ಕಿ ಅವರ ಶೌರ್ಯ ಮತ್ತು ಧೈರ್ಯವನ್ನು ಗೌರವಿಸಲು ಅವರ ಹೆಸರಿನ ಟೀಯನ್ನು ಪ್ರಾರಂಭಿಸಿದೆ. ಅಸ್ಸಾಂ ಚಹಾವು ಪ್ರಪಂಚದಾದ್ಯಂತ ಅದರ ದೃಢವಾದ ಸುವಾಸನೆ ಮತ್ತು ಬಲವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಐಷಾರಾಮಿ ಚಹಾಗಳಲ್ಲಿ ಪರಿಣತಿ ಹೊಂದಿರುವ ಗುವಾಹಟಿಯ ಅರೋಮಿಕಾ ಟೀ ಮಾಲೀಕರಾದ ರಂಜಿತ್ ಬರುವಾ ಅವರ ಪ್ರಕಾರ, ಈಗಿನ ಸಂದರ್ಭದಲ್ಲಿ ಜಗತ್ತಿನಲ್ಲಿ ಝೆಲೆನ್ಸ್ಕಿ ಅವರಿಗಿಂತ ಧೈರ್ಯಶಾಲಿಗಳು ಯಾರೂ ಸಿಗುತ್ತಿಲ್ಲ. ಈ ಚಹಾ ಕೂಡ ಝಲೆನ್ಸ್ಕಿ ಅವರಂತೆ ಸ್ಟ್ರಾಂಗ್​ ಆಗಿದೆ ಎಂದಿದ್ದಾರೆ.

ಯುದ್ಧ-ಹಾನಿಗೊಳಗಾದ ದೇಶದಿಂದ ತಪ್ಪಿಸಿಕೊಳ್ಳಲು ಯುಎಸ್​ ಸಹಾಯದ ಪ್ರಸ್ತಾಪವನ್ನು ತಿರಸ್ಕರಿಸಿದ ಅಧ್ಯಕ್ಷರ ಶೌರ್ಯ ಮತ್ತು ಧೈರ್ಯವನ್ನು ಗೌರವಿಸುವುದು ಮೂಲಭೂತ ಆಲೋಚನೆಯಾಗಿದೆ. ಇದು ಅವರ ಚಾರಿತ್ರ್ಯವನ್ನು ತೋರಿಸುತ್ತದೆ. ಎಂದು ಬರುವಾ ಹೇಳಿಕೊಂಡಿದ್ದಾರೆ.  ಉಕ್ರೇನ್ ಅಧ್ಯಕ್ಷರಿಗೆ, ವಿಜಯವು ಎಲ್ಲಿಯೂ ಹತ್ತಿರದಲ್ಲಿಲ್ಲ ಎಂದು ಸಂಪೂರ್ಣವಾಗಿ ತಿಳಿದಿರುತ್ತದೆ ಅದರೆ ಇನ್ನೂ ಹೋರಾಡುತ್ತಿದ್ದಾರೆ. ಎಂದು ಅವರು ಹೇಳಿದ್ದಾರೆ.

ಟೀ ಬೋರ್ಡ್ ಅಂಕಿಅಂಶಗಳ ಪ್ರಕಾರ, ಭಾರತದ ಚಹಾದ ಅತಿ ದೊಡ್ಡ ಆಮದುದಾರರಾದ ರಷ್ಯಾವು 2021 ರಲ್ಲಿ 34.09 ಮಿಲಿಯನ್ ಕೆಜಿ ಬ್ರೂ ಅನ್ನು ಪಡೆದುಕೊಂಡಿದೆ. ಉಕ್ರೇನ್ ಮತ್ತೊಂದೆಡೆ, ವರ್ಷದಲ್ಲಿ ಭಾರತದಿಂದ 1.73 ಮಿಲಿಯನ್ ಕೆಜಿ ಚಹಾವನ್ನು ಆಮದು ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:

ಆಸ್ಪತ್ರೆಗೆ ತೆರಳಿ ಶೆಲ್​ ದಾಳಿಯಲ್ಲಿ ಗಾಯಗೊಂಡ ಯುವತಿಯನ್ನು ಭೇಟಿಯಾಗಿ ಧೈರ್ಯ ತುಂಬಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ

Published On - 9:47 am, Sat, 19 March 22