‘ಹೊಸ ವರ್ಷಕ್ಕೆ ನಮ್ಮ ಅತಿಥಿಗಳಾಗಬೇಡಿ’: ಪಾರ್ಟಿ ಪ್ರಿಯರಿಗೆ ಎಚ್ಚರಿಕೆ ನೀಡಿದ ಅಸ್ಸಾಂ ಪೊಲೀಸರು

ಅಸ್ಸಾಂ ಪೊಲೀಸರು ಇಲಾಖೇಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಆಮಂತ್ರಣ ಪತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ರಾಶ್​ ಆಗಿ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಆಮಂತ್ರಣ ಪತ್ರ ಎಂದು ಕ್ಯಾಪ್ಷನ್​ ಬರೆಯಲಾಗಿದೆ.

ಹೊಸ ವರ್ಷಕ್ಕೆ ನಮ್ಮ ಅತಿಥಿಗಳಾಗಬೇಡಿ: ಪಾರ್ಟಿ ಪ್ರಿಯರಿಗೆ ಎಚ್ಚರಿಕೆ ನೀಡಿದ ಅಸ್ಸಾಂ ಪೊಲೀಸರು
ಅಸ್ಸಾಂ ಪೊಲೀಸರ ಟ್ವೀಟ್ ಪೋಸ್ಟರ್​
Updated By: Pavitra Bhat Jigalemane

Updated on: Dec 31, 2021 | 9:47 AM

ಇಂದು ಡಿಸೆಂಬರ್​ 31. ವರ್ಷದ ಕೊನೆಯ ದಿನ. ಹೀಗಾಗಿ ಇಯರ್​ ಎಂಡ್​ ಪಾರ್ಟಿಗಳು ಎಲ್ಲೆಡೆ ಜೋರಾಗಿಯೇ ನಡೆಯಲಿದೆ. ಪಾರ್ಟಿ ಮಾಡಿ, ಮದ್ಯ ಸೇವಿಸಿ ವಾಹನ ಚಲಾಯಿಸಿ ಅಪಘಾತಗಳು ನಡೆಯುತ್ತವೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಇದನ್ನು ತಡೆಯಲು ಅಸ್ಸಾಂ ಪೊಲೀಸರು ತಮಾಷೆಯಾಗಿ ಟ್ವೀಟ್ ಮಾಡುವ ಮೂಲಕ ಪಾರ್ಟಿ ಪ್ರಿಯರಿಗೆ ಎಚ್ಚರಿಕೆ ನೀಡಿದ್ದಾರೆ. ಹೊಸ ವರ್ಷಕ್ಕೆ ನಮ್ಮ ಅತಿಥಿಗಳಾಗಲು ಪ್ರಯತ್ನಿಸಬೇಡಿ ಎಂದು ಪೋಸ್ಟರ್​ ಮಾಡಿ ಟ್ವೀಟ್​  ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಮಾಡಿದ ಪೋಸ್ಟ್​ ವೈರಲ್​ ಆಗಿದೆ. 

ಅಸ್ಸಾಂ ಪೊಲೀಸರು ಇಲಾಖೇಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಆಮಂತ್ರಣ ಪತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ರಾಶ್​ ಆಗಿ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಆಮಂತ್ರಣ ಪತ್ರ ಎಂದು ಕ್ಯಾಪ್ಷನ್​ ಬರೆಯಲಾಗಿದೆ. ಜತೆಗೆ ವಿಶೇಷ ಸೂಚನೆ ಎಂದು ಬರೆದು ಮದ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಹಾಗೂ ಉಳಿದ ದಾಖಲೆಗಳು ಇಲ್ಲದಿರುವವರಿಗೆ ಫ್ರೀ ಎಂಟ್ರಿ ಎಂದು ಬರೆದಿದ್ದಾರೆ. ಅದರ ಜೊತೆಗೆ ಹೊಸ ವರ್ಷಕ್ಕೆ ನಮ್ಮ ಅತಿಥಿಗಳಾಗಲು ಪ್ರಯತ್ನಿಸಬೇಡಿ ಎಂದಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಪೋಸ್ಟ್​ ಎಲ್ಲರ ಗಮನ ಸೆಳೆದಿದೆ. ವಿನೂತನ ಪ್ರಯೋಗದ ಮೂಲಕ ಹೊಸ ವರ್ಷ ಆಚರಣೆಯೊಂದಿಗೆ ಜೀವದ ಬಗ್ಗೆ ಕಾಳಜಿಯಿರಲಿ, ಅಪಘಾತವನ್ನು ತಪ್ಪಿಸಿ ಎಂಬ ಸಂದೇಶ ನೀಡಿದ್ದಾರೆ. ಈ ಟ್ವೀಟ್​ ಗೆ ನೆಟ್ಟಿಗರು ಶ್ಲಾಘಿಸಿದ್ದು, ಉತ್ತಮ ರೀತಿಯ ಸಂದೇಶ ಎಂದಿದ್ದಾರೆ.

ಇದನ್ನೂ ಓದಿ:

Sachin Atulkar: ವೈರಲ್​ ಆಯ್ತು ಐಪಿಎಸ್​ ಅಧಿಕಾರಿಯ ಫೋಟೋ; ಪೊಲೀಸ್​ ಎಂದರೆ ಹೀಗೆ ಇರಬೇಕು ಎಂದ ನೆಟ್ಟಿಗರು