ಮಾರ್ಚಿಂಗ್ ವೇಳೆ ಬಾಲಕನನ್ನು ತುಳಿದುಕೊಂಡ ಹೋದ ಗಾರ್ಡ್ಗಳು: ವೀಡಿಯೋ ವೈರಲ್
ಇಂಗ್ಲೆಂಡ್ ರಾಣಿಯ ಸೈನಿಕರು ಮಾರ್ಚಿಂಗ್ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಂಡನ್ ಟವರ್ ಬಳಿ ಮಾರ್ಚಿಂಗ್ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.
ಇಂಗ್ಲೆಂಡ್ ರಾಣಿಯ ಸೈನಿಕರು ಮಾರ್ಚಿಂಗ್ ಮಾಡುವ ವೇಳೆ ದಾರಿಯಲ್ಲಿದ್ದ ಬಾಲಕನನ್ನು ಲೆಕ್ಕಿಸದೆ ತುಳಿದುಕೊಂಡ ಹೋದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಂಡನ್ ಟವರ್ ಬಳಿ ಮಾರ್ಚಿಂಗ್ ನಡೆಸುತ್ತಿದ್ದ ವೇಳೆ ಇಬ್ಬರು ರಾಯಲ್ ಗಾರ್ಡ್ಗಳು ದಾರಿಯಲ್ಲಿ ಅಡ್ಡಸಿಕ್ಕ ಬಾಲಕನನ್ನು ತಳ್ಳಿದ್ದು ಆತ ಬಿದ್ದಿದ್ದಾನೆ. ಗಾರ್ಡ್ಗಳು ಪಕ್ಕಕ್ಕೆ ಸರಿಯದೆ ಬಾಲಕನ ಮೆಲೇಯೇ ಕಾಲಿರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ದಿ ಸನ್ ವರದಿ ಮಾಡಿದ್ದು ವೀಡಿಯೋವನ್ನು ಹಂಚಿಕೊಂಡಿದೆ.
ವಿಡಿಯೋದಲ್ಲಿ ಮೊದಲು ದಾರಿ ಬಿಡಿ ಎನ್ನುವ ಕೂಗೊಂದು ಕೇಳಿಬರುತ್ತದೆ. ದಾರಿಯ ಮಧ್ಯೆ ಇರುವವರು ಸರಿಯುವುದರೊಳಗೆ ನೀಲಿ ಬಣ್ಣದ ಇಬ್ಬರು ಗಾರ್ಡ್ಗಳು ದಾಪುಗಾಲು ಹಾಕಿಕೊಂಡು ಬರುತ್ತಿದ್ದರು. ಬಾಲಕ ಪಕ್ಕಕ್ಕೆ ಸರಿಯುವ ಮೊದಲು ಗಾರ್ಡ್ಗಳ ಕಾಲಿಗೆ ಸಿಕ್ಕಿ ಬೀಳುತ್ತಾನೆ. ನಂತರ ತಕ್ಷಣ ಎದ್ದು ನಿಲ್ಲುತ್ತಾನೆ. ಈ ವೀಡಿಯೋವನ್ನು ಮೊದಲು ಟಿಕ್ಟಾಕ್ನಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಟ್ವಿಟರ್ನಲ್ಲಿ ವೀಡಿಯೋ 2 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದಿದೆ.
? | WATCH: A kid gets trampled by the queen’s guards pic.twitter.com/xzv7W8I2F5
— News For All (@NewsForAIl) December 29, 2021
ಇಂಗ್ಲೆಂಡ್ ರಾಣಿಯ ಗಾರ್ಡ್ಗಳು ನಡೆದುಕೊಂಡ ರೀತಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವಾಲಯ ಎಂದಿನಂತೆ ಗಾರ್ಡ್ಗಳು ಗಸ್ತು ತಿರುಗುವ ವೇಳೆ ಈ ಘಟನೆ ನಡೆದಿದೆ. ಅದರ ಬಗ್ಗೆ ತಿಳಿದಿದೆ. ಮಗುವಿನ ಬಗ್ಗೆ ವಿಚಾರಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ:
ತನ್ನನ್ನು ಮಗುವಿನಂತೆ ನೋಡಿಕೊಳ್ಳಲು, ಡೈಪರ್ ಬದಲಿಸಲು ಜನರನ್ನು ನೇಮಿಸಿಕೊಂಡ 31 ವರ್ಷದ ವ್ಯಕ್ತಿ