ತನ್ನನ್ನು ಮಗುವಿನಂತೆ ನೋಡಿಕೊಳ್ಳಲು, ಡೈಪರ್​ ಬದಲಿಸಲು ಜನರನ್ನು ನೇಮಿಸಿಕೊಂಡ 31 ವರ್ಷದ ವ್ಯಕ್ತಿ

ತನ್ನನ್ನು ಮಗುವಿನಂತೆ ನೋಡಿಕೊಳ್ಳಲು, ಡೈಪರ್​ ಬದಲಿಸಲು ಜನರನ್ನು ನೇಮಿಸಿಕೊಂಡ 31 ವರ್ಷದ ವ್ಯಕ್ತಿ
ರುಟ್ಲೆಡ್ಜ್​ ಡೀಶ್

ತನ್ನನ್ನು ಮಗುವಿನಂತೆ ನೋಡಿಕೊಳ್ಳಲು ಹಾಗೂ ಡೈಪರ್​ ಬದಲಿಸಲು ಶಿಶುಪಾಲಕರು ಬೇಕೆಂದು ನೇಮಿಸಿಕೊಂಡ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಮಾನವ ಕಳ್ಳಸಾಗಾಣಿಕೆ ಆರೋಪವನ್ನು ಹೊರಿಸಿದ್ದಾರೆ.

TV9kannada Web Team

| Edited By: Pavitra Bhat Jigalemane

Dec 30, 2021 | 4:30 PM

ತನ್ನನ್ನು ಮಗುವಿನಂತೆ ನೋಡಿಕೊಳ್ಳಲು ಹಾಗೂ ಡೈಪರ್​ ಬದಲಿಸಲು ಶಿಶುಪಾಲಕರು ಬೇಕೆಂದು ನೇಮಿಸಿಕೊಂಡ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಮಾನವ ಕಳ್ಳಸಾಗಾಣಿಕೆ ಆರೋಪವನ್ನು ಹೊರಿಸಿದ್ದಾರೆ. ಲುಸಿಯಾನದ ರುಟ್ಲೆಡ್ಜ್​ ಡೀಶ್​ 4  ಎನ್ನುವ ವ್ಯಕ್ತಿ ತನ್ನನ್ನು ವಿಶೇಷ ಚೇತನ ವ್ಯಕ್ತಿ ಎಂದು ಗುರುತಿಸಿಕೊಂಡು ತನ್ನ ಆರೈಕೆಗಾಗಿ ಹಾಗೂ ಡೈಪರ್​ ಬದಲಿಸಲು ಜನರನ್ನು ನೇಮಿಸಿಕೊಂಡಿದ್ದನು.  ತಾನು ವಿಶೇಷ ಚೇತನ ವ್ಯಕ್ತಿಯಾಗದ್ದು ತನಗೆ ಪರ್ಯಾಯ ಥೆರಪಿ ಬೇಕು ಹೀಗಾಗಿ ತನ್ನನ್ನು ನೋಡಿಕೊಳ್ಳಲು ಜನರ ಅವಶ್ಯಕತೆ ಇದೆ ಎಂದು ಸಂದೇಶ ಕಳುಹಿಸಿದ್ದನು. ಆದರೆ ಮನೆಗೆ ಬಂದ ಮೇಲೆ ಅವರ ಬಳಿ ತನ್ನ ಡೈಪರ್​ ಬದಲಿಸುವಂತೆ ಹೇಳಿದ್ದಾನೆ. 

ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿದ ಆರೋಪದ ಮೇಲೆ  ಆತನನ್ನು ಜೆಫೊರ್​ಸನ್​ ಪ್ಯಾರಿಷ್​ ಸೆಂಟರ್​ನಲ್ಲಿ ಇರಿಸಲಾಗಿದೆ. ಆತ ಇದೇ ರೀತಿ ಹಲವರನ್ನು ಕರೆಸಿಕೊಂಡು ಲೈಂಗಿಕ ದೌರ್ಜನ್ಯವನ್ನೂ ನೀಡಿದ್ದಾನೆ. ಈ ಹಿಂದೆಯೂ ಈತನ ಮೇಲೆ ಮಾನವ ಕಳ್ಳಸಾಗಾಣಿಕೆ ಆರೋಪವಿತ್ತು. ಕಳೆದ ಬಾರಿ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು. ಆದರೂ ಮತ್ತೆ ಅದೇ ಕೆಲಸವನ್ನು ಮುಂದುವರೆಸಿದ್ದು ಪೊಲೀಸರು ಅತನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಪೊಲೀಸರು  ಈ ಹಿಂದೆ ಈತನ ಸಹೋದರ ಕೋರಿ ಎನ್ನುವಾತನ ಹೆಸರು ಹೇಳಿಕೊಂಡು ಈ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಆಗ ತಪ್ಪು ಒಪ್ಪಕೊಂಡಿದ್ದನು. ಆದರೆ ಈಗ ಮತ್ತೆ ಅದೇ ದಂದೆ ಆರಂಭಿಸಿದ್ದು, ಆತನನ್ನು ಬಂಧಿಸಲಾಗಿದೆ.  ಸದ್ಯ ಈ ಜಾಲದಲ್ಲಿ ಸಿಲುಕಿಕೊಂಡವರನ್ನು ರಕ್ಷಿಲಾಗುತ್ತಿದೆ. ಈಗಾಗಲೇ ತನಿಖೆ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಪೊಲೀಸರ ಹೇಳಿಕೆ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:

Viral Video: ವಿಮಾನದಲ್ಲಿ ಮಾಸ್ಕ್​ ತೆಗೆದು ಆಹಾರ ಸೇವಿಸಿದ ವೃದ್ಧನಿಗೆ ಕಪಾಳಮೋಕ್ಷ ಮಾಡಿದ ಮಹಿಳೆಯ ಬಂಧನ

Follow us on

Most Read Stories

Click on your DTH Provider to Add TV9 Kannada