ಆಂಧ್ರ ಹುಡುಗನನ್ನು ವರಿಸಿದ ಟರ್ಕಿ ದೇಶದ ಯುವತಿ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ಜೋಡಿ

ಆಂಧ್ರ ಹುಡುಗನನ್ನು ವರಿಸಿದ ಟರ್ಕಿ ದೇಶದ ಯುವತಿ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ಜೋಡಿ
ಮಧು, ಜಿಜೆಮ್​

ಟರ್ಕಿ ದೇಶದ ಯುವತಿಯೊಬ್ಬಳು ಆಂದ್ರಪ್ರದೇಶದ ಯುವಕನನ್ನು ಭಾರತೀಯ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಆಂದ್ರ ಪ್ರದೇಶದ ಗುಂಟೂರಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.

TV9kannada Web Team

| Edited By: Pavitra Bhat Jigalemane

Dec 30, 2021 | 1:32 PM

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ವಿಶೇಷ ಕ್ಷಣ. ಋಣಾನುಬಂಧ ಎನ್ನುವುದು ಎಲ್ಲೊ ಇರುವವರನ್ನು ಇನ್ನೆಲ್ಲೂ ಸೇರಿಸುತ್ತದೆ. ಭಾಷೆ, ದೇಶ, ಜಾತಿ, ಗಡಿ ಈ ರೀತಿಯ ಯಾವುದೇ ಕಟ್ಟುಪಾಡಿಲ್ಲದ ಸುಂದರ ಸಂಬಂಧ ಪ್ರೀತಿ. ಹೀಗಾಗಿ ಕೆಲವರು ಸಂಗಾತಿ ಹುಡುಕಲು ವಿದೇಶಕ್ಕೂ ತೆರಳಬೇಕಾದೀತು. ಅಂತಹ ಒಂದು ಪ್ರೀತಿಯ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಹೌದು, ಟರ್ಕಿ ದೇಶದ ಯುವತಿಯೊಬ್ಬಳು ಆಂದ್ರಪ್ರದೇಶದ ಯುವಕನನ್ನು ಭಾರತೀಯ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಆಂದ್ರ ಪ್ರದೇಶದ ಗುಂಟೂರಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಗುಂಟೂರು ಮೂಲದ ವರ ಮಧು ಸಂಕೀರ್ತ್ ಹಾಗೂ ಟರ್ಕಿಯ ವಧು ಜಿಜೆಮ್​ ವಿವಾಹವಾಗಿದ್ದಾರೆ.

ಮಧು 2016ರಲ್ಲಿ ಜಿಜೆಮ್​ ಅವರನ್ನು ಭೇಟಿಯಾಗಿದ್ದರು. ಮಧು ಕೆಲಸದ ಪ್ರಯುಕ್ತ ಟರ್ಕಿಗೆ ತೆರಳಿದ ವೇಳೆ ಜಿಜೆಮ್​​ ಪರಿಚಯವಾಗಿದ್ದು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ನಡುವೆ ಸ್ನೇಹ ಬೆಳೆದಿದೆ. ಸದ್ಯ ಈ ದಂಪತಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ನೇಹವಾಗಿ ಕೆಲವೇ ದಿನಗಳಲ್ಲಿ ಅವರಲ್ಲಿ ಪ್ರೀತಿ ಹುಟ್ಟಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇಬ್ಬರ ಮನೆಯಲ್ಲೂ ಪೋಷಕರ ವಿರೋಧ ವ್ಯಕ್ತವಾಗಿತ್ತು. ಕೊನೆಗೂ ಪೋಷಕರ ಒಪ್ಪಿಗೆ ಪಡೆದು 2019ರಲ್ಲಿ ಮಧು ಹಾಗೂ ಜಿಜೆಮ್​ ನಿಶ್ಷಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ 2020ರಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೊರೋನಾ ಕಾರಣದಿಂದ ಮದುವೆ ಮುಂದೂಡಲ್ಪಟ್ಟಿತ್ತು. ಇದೀಗ ಇಬ್ಬರೂ ಹಸೆಮಣೆ ಏರುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.

turky girl married indian men

ಹಿರಿಯರು, ಕುಟುಂಬ ಸದಸ್ಯರ ಆಶೀರ್ವಾದ ಪಡೆದು ಎರಡು ದಿನಗಳ ಹಿಂದೆ ವಿವಾಹವಾಗಿದ್ದಾರೆ. ಮಧು ಹಾಗೂ ಜಿಜೆಮ್​ ಹಿಂದೂ ಮತ್ತು ತೆಲುಗು ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಭಾಷೆ, ಗಡಿ, ಜಾತಿ, ಮತ ಎಲ್ಲವನ್ನೂ ಬದಿಗೊತ್ತಿ ಪ್ರೀತಿಯನ್ನು ಮುನ್ನಲೆಗೆ ತಂದು ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ಫೋಟೋಗಳನ್ನು ನೋಡಿ ನೆಟ್ಟಿಗರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:

ಪಲ್ಟಿ ಹೊಡೆದು ಬಂದು ಶಾರ್ಟ್​ ಪ್ಯಾಂಟ್​ ಧರಿಸಿದ ಯುವಕ; ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

Follow us on

Related Stories

Most Read Stories

Click on your DTH Provider to Add TV9 Kannada