AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊರೋನಾ ವ್ಯಾಕ್ಸಿನ್​ಗೆ ಹೆದರಿ ಮರವೇರಿ ಕುಳಿತ ವ್ಯಕ್ತಿ: ವೀಡಿಯೋ ವೈರಲ್​

ಪಾಂಡೀಚೆರಿಯ ವಿಲ್ಲನೂರ್​ ಎನ್ನುವ ಗ್ರಾಮದಲ್ಲಿ ಮನೆಯ ಬಾಗಿಲಿಗೆ ಆರೋಗ್ಯ ಕಾರ್ಯಕರ್ತೆಯರು ಬಂದ ವೇಳೆ ವ್ಯಕ್ತಿ ಮನೆಯ ಎದುರಿದ್ದ ಮರವೇರಿ ಕುಳಿತಿದ್ದಾನೆ.

Viral Video: ಕೊರೋನಾ ವ್ಯಾಕ್ಸಿನ್​ಗೆ ಹೆದರಿ ಮರವೇರಿ ಕುಳಿತ ವ್ಯಕ್ತಿ: ವೀಡಿಯೋ ವೈರಲ್​
ಮರವೇರಿ ಕುಳಿತ ವ್ಯಕ್ತಿ
TV9 Web
| Edited By: |

Updated on:Dec 30, 2021 | 10:01 AM

Share

ಕೊರೋನಾದಿಂದ ರಕ್ಷಣೆ ಪಡೆಯಲು ವ್ಯಾಕ್ಸಿನ್​​ ತೆಗೆದುಕೊಳ್ಳುವುದು ಒಳಿತು. ಸರ್ಕಾರವೂ ಪ್ರತಿಯೊಬ್ಬ ನಾಗರಿಕನೂ ಕೋವಿಡ್​ ವ್ಯಾಕ್ಸಿನ್​ ಪಡೆಯಬೇಕೆಂದು ನಿಯಮವನ್ನೂ ಮಾಡಿದೆ. ಆದರೆ ಇನ್ನೂ ಹಳ್ಳಿಗಳಲ್ಲಿ ವ್ಯಾಕ್ಸಿನ್​ಗೆ ಹೆದರಿ ದೂರ ಓಡುವವರಿದ್ದಾರೆ. ವ್ಯಾಕ್ಸಿನ್​ಗೆ ಹೆದರಿ ವ್ಯಕ್ತಿ ಮರವೇರಿ ಕುಳಿತ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪಾಂಡೀಚೆರಿಯ ವಿಲ್ಲನೂರ್​ ಎನ್ನುವ ಗ್ರಾಮದಲ್ಲಿ ಮನೆಯ ಬಾಗಿಲಿಗೆ ಆರೋಗ್ಯ ಕಾರ್ಯಕರ್ತೆಯರು ಬಂದ ವೇಳೆ ವ್ಯಕ್ತಿ ಮನೆಯ ಎದುರಿದ್ದ ಮರವೇರಿ ಕುಳಿತಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. 

ವೀಡಿಯೋದಲ್ಲಿ ಆರೋಗ್ಯ ಕಾರ್ಯಕರ್ತೆಯರು ಮನೆಯ ಬಳಿ ವ್ಯಾಕ್ಸಿನ್​ ನೀಡಲು ಬಂದು ನಿಂತ ವೇಳೆ 40 ವರ್ಷದ  ವ್ಯಕ್ತಿ ಮರವೇರಿ ತುದಿಯಲ್ಲಿ ಹೋಗಿ ಕುಳಿತಿರುವುದನ್ನು ಕಾಣಬಹುದು.  ಅಲ್ಲೇ ಕುಳಿತುಕೊಂಡು ನನಗೆ ವ್ಯಾಕ್ಸಿನ್​ ಬೇಡ ಎಂದು ಕೂಗಿದ್ದಾನೆ. ನಾನು ನಿಮಗೆ ಸಿಗುವುದಿಲ್ಲ ಎಂದಿದ್ದಾನೆ. ಇದರಿಂದ ಆರೋಗ್ಯ ಕಾರ್ಯಕರ್ತೆಯರು ಏನೂ ಮಾಡಲಾಗದೆ ನಿಂತುಕೊಂಡಿದ್ದರು. ಪಾಂಡೀಚೇರಿ ಸರ್ಕಾರ 100 ರಷ್ಟು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲು ನಿರ್ಧರಿಸಿದೆ. ಆದ್ದರಿಂದ ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತೆಯರು ಮೊದಲ ಡೋಸ್​ ಮತ್ತು ಎರಡನೇ ಡೋಸ್​ಅನ್ನೂ ನೀಡುತ್ತಿದ್ದಾರೆ.

ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿದೆ. ಹಲವರು ವ್ಯಾಕ್ಸಿನ್​ ತೆಗೆದುಕೊಳ್ಳಲು ಹೆದರಿ ಅಥವಾ ವ್ಯಾಕ್ಸಿನ್​ ಬೇಡವೆಂದು ನಿರಾಕರಿಸಿ ಮರವೇರಿದ ಘಟನೆ ನಡೆದಿದೆ. ಈಗಲೂ ಇಂತಹದ್ದೇ ಘಟನೆ ಪಾಂಡೀಚೇರಿಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ಕಿಟಕಿಯಿಂದ ಹಾರಿ ಪತ್ನಿ ಪರಾರಿ; ಹೆಂಡತಿಯ ಸುಳಿವು ನೀಡಿದವರಿಗೆ 5,000 ರೂ. ಬಹುಮಾನ ಘೋಷಿಸಿದ ಗಂಡ!

Published On - 9:45 am, Thu, 30 December 21

Follow Us
TV9 Web
TV9 Web

TV9 Kannada

Read More
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!