ಪಲ್ಟಿ ಹೊಡೆದು ಬಂದು ಶಾರ್ಟ್ ಪ್ಯಾಂಟ್ ಧರಿಸಿದ ಯುವಕ; ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು
ಯುವಕನೋರ್ವ ಪಲ್ಟಿ ಹೊಡೆದು ಬಂದು ಇನ್ನಿಬ್ಬರು ಯುವಕರು ಹಿಡಿದ ಶಾರ್ಟ್ ಪ್ಯಾಂಟ್ನೊಳಗೆ ಕಾಲನ್ನು ಸುಲಭವಾಗಿ ಇಳಿಸುತ್ತಾನೆ. ಇದನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.
ವಿವಿಧ ರೀತಿಯ ಪ್ರತಿಭೆಯ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣ ಸದಾ ತಾಣವಾಗಿರುತ್ತದೆ. ಹಲವು ವೀಡಿಯೋಗಳು ಅಗಾಗ ನೆಟ್ಟಿಗರನ್ನು ಅಚ್ಚರಿಗೊಳಿಸುತ್ತವೆ. ಹಲವು ರೀತಿಯ ಸಾಹಸಗಳ ವೀಡಿಯೋಗಳು ಆಗಾಗ ಸೆಳೆಯುತ್ತಿರುತ್ತವೆ. ಇದೀಗ ಮೂವರು ಹುಡುಗರ ಸಾಹಸದ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಯುವಕನೋರ್ವ ಪಲ್ಟಿ ಹೊಡೆದು ಬಂದು ಇನ್ನಿಬ್ಬರು ಯುವಕರು ಹಿಡಿದ ಶಾರ್ಟ್ ಪ್ಯಾಂಟ್ನೊಳಗೆ ಕಾಲನ್ನು ಸುಲಭವಾಗಿ ಇಳಿಸುತ್ತಾನೆ. ಇದನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.
ವೀಡಿಯೋದಲ್ಲಿ ಮೊದಲು ಇಬ್ಬರು ಯುವಕರು ಎರಡೂ ಬದಿಯಲ್ಲಿ ಶಾರ್ಟ್ ಪ್ಯಾಂಟ್ ಹಿಡಿದು ನಿಂತುಕೊಂಡಿರುವುದನ್ನು ನೋಡಬಹುದು. ನಂತರ ದೂರದಿಂದ ಓಡಿಬಂದ ಯುವಕ ನೆಗೆದು ಪಲ್ಟಿ ಹೊಡೆದು ಪ್ಯಾಂಟ್ ಒಳಗೆ ಕಾಲನ್ನು ಇಳಿಸುತ್ತಾನೆ. ಈ ವೀಡಿಯೋವನ್ನು ಬಲವಂತ್ ಸಿಂಗ್ ಎನ್ನುವವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 16ರಂದು ಹಂಚಿಕೊಂಡ ವೀಡಿಯೋ 14 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಹಲವರು ವೀಡಿಯೋ ನೋಡಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
View this post on Instagram
ಈ ಹಿಂದೆ ಆಂದ್ರ ಪ್ರದೇಶದ ನೆಲ್ಲೋರೆ ಎನ್ನುವ ಗ್ರಾಮದಲ್ಲಿ ಇಬ್ಬರು ಯುವಕರು ತೆಲುಗಿನ ವಕೀಲ್ ಸಾಬ್ ಚಿತ್ರದ ಸಾಹಸದ ಸೀನ್ ಅನ್ನು ರೀ ಕ್ರಿಯೇಟ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದರು. ಇನ್ನೊಂದು ವೀಡಿಯೋದಲ್ಲಿ ತೆಲಂಗಾಣದ ದುರ್ಗಂ ಚೆರುವ ಎನ್ನುವ ಸೇತುವೆಯ ಬಳಿ ಯುವಕನೋರ್ವ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಡ್ಯಾನ್ಸ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೈದರಾಬಾದ್ ಪೊಲೀಸರು ಆತನನ್ನು ಹಿಡಿದು ಬಂಧಿಸಿ ಆತನ ಡ್ಯಾನ್ಸ್ನ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ:
Viral Video: ಕೊರೋನಾ ವ್ಯಾಕ್ಸಿನ್ಗೆ ಹೆದರಿ ಮರವೇರಿ ಕುಳಿತ ವ್ಯಕ್ತಿ: ವೀಡಿಯೋ ವೈರಲ್