Viral Video: ವಿಮಾನದಲ್ಲಿ ಮಾಸ್ಕ್ ತೆಗೆದು ಆಹಾರ ಸೇವಿಸಿದ ವೃದ್ಧನಿಗೆ ಕಪಾಳಮೋಕ್ಷ ಮಾಡಿದ ಮಹಿಳೆಯ ಬಂಧನ
ಮಹಿಳೆ ಹಾಗೂ ವೃದ್ಧನ ನಡುವೆ ಗಲಾಟೆಯನ್ನು ತಪ್ಪಿಸಲು ಮಧ್ಯ ಬಂದ ವಿಮಾನ ಸಿಬ್ಬಂದಿ ಮಹಿಳೆಗೆ ಸರಿಯಾಗಿ ಮಾಸ್ಕ್ ಧರಸಲು ಹೇಳುತ್ತಾರೆ. ಈ ವೇಳೆ ಕೋಪಗೊಂಡ ಮಹಿಳೆ ವೃದ್ಧನ ಬಳಿ ಕೈತೋರಿಸಿ ಅವರಿಗೆ ಮೊದಲು ಮಾಸ್ಕ್ ಧರಿಸಲು ಹೇಳಿ ಎಂದು ಗುದ್ದಿದ್ದಾರೆ.
ವಿಮಾನದಲ್ಲಿ ಮಾಸ್ಕ್ ತೆಗೆದು ತಿಂಡಿ ತಿಂದಿದ್ದಕ್ಕಾಗಿ ಮಹಿಳೆಯೊಬ್ಬಳು ವೃದ್ಧರೊಬ್ಬರಿಗೆ ಕಪಾಳಮೋಕ್ಷ ಮಾಡಿ, ಗುದ್ದಿದ ಘಟನೆ ನಡೆದಿದೆ. ಡೆಲ್ಟಾ ಏರ್ಲೈನ್ಸ್ನ ವಿಮಾನದಲ್ಲಿ ಈ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಗೆ ಹೊಡೆದ ಮಹಿಳೆಯೂ ಸರಿಯಾಗಿ ಮಾಸ್ಕ್ ಧರಿಸದ ಕಾರಣ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಟ್ಲಾಂಟಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ವೀಡಿಯೋದಲ್ಲಿ ಮಹಿಳೆ ವೃದ್ಧನ ಬಳಿ ಬಂದು ಮಾಸ್ಕ್ ತೆಗೆದು ತೆಗೆದಿದ್ದೀರಾ ಎಂದು ಬೆದರಿಸಿದ್ದಾಳೆ. ಆಗ ಅವರು ತಿನ್ನುತ್ತಿದ್ದೇನೆ ಎಂದಿದ್ದಾರೆ. ಅದನ್ನು ಸರಿಯಾಗಿ ಕೇಳಿಸಿಕೊಳ್ಳುವಷ್ಟು ತಾಳ್ಮೆ ಇಲ್ಲದ ಮಹಿಳೆ ನಿಮಗೆ ಇಲ್ಲಿ ಕೂರಲು ಯಾರು ಹೇಳಿದ್ದಾರೆ ಎಂದು ಗುದ್ದಿದ್ದಾರೆ. ಬಳಿಕ ಅವರ ನಡುವೆ ವಾಗ್ವಾದ ನಡೆದಿದೆ. ಆಗ ಮಹಿಳೆ ನಿಮಗೆ ನನ್ನ ಬಳಿ ಎದುರು ಮಾತನಾಡಲು ಎಷ್ಟು ಧೈರ್ಯ ಎಂದು ಕೇಳಿದ್ದಾಳೆ. ಹೀಗೆ ಅವರ ನಡುವೆ ಹಲವು ಮಾತಗಳು ನಡೆದಿವೆ. ಈ ವೇಳೆ ವೃದ್ಧ, ಕುಳಿತುಕೊಳ್ಳಿ ಕರೆನ್, ಜನರು ನಿಮ್ಮನ್ನು ನೋಡಿ ನಗುತ್ತಿದ್ದಾರೆ. ದೇವರು ಎಂದಿಗೂ ನಿಂತು ಕೂಗಬಾರದು ಎಂದು ತಮಾಷೆ ಮಾಡಿದ್ದಾರೆ. ಕರೆನ್ ಎಂದರೆ ಅಸಹ್ಯ ಅಥವಾ ಬಿಳಿ ಮಹಿಳೆಗೆ ಅವಮಾನ ಮಾಡುವ ಪದವಾಗಿದೆ.
ಮಹಿಳೆ ಹಾಗೂ ವೃದ್ಧನ ನಡುವೆ ಗಲಾಟೆಯನ್ನು ತಪ್ಪಿಸಲು ಮಧ್ಯ ಬಂದ ವಿಮಾನ ಸಿಬ್ಬಂದಿ ಮಹಿಳೆಗೆ ಸರಿಯಾಗಿ ಮಾಸ್ಕ್ ಧರಸಲು ಹೇಳುತ್ತಾರೆ. ಈ ವೇಳೆ ಕೋಪಗೊಂಡ ಮಹಿಳೆ ವೃದ್ಧನ ಬಳಿ ಕೈತೋರಿಸಿ ಅವರಿಗೆ ಮೊದಲು ಮಾಸ್ಕ್ ಧರಿಸಲು ಹೇಳಿ ಎಂದು ಗುದ್ದಿದ್ದಾರೆ. ತಕ್ಷಣ ವಿಮಾನ ಸಿಬ್ಬಂದಿ ಮಹಿಳೆಯನ್ನು ದೂರ ಸರಿಸದಿದ್ದಾರೆ. ಅಟ್ಲಾಂಟದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:
ಆಂಧ್ರ ಹುಡುಗನನ್ನು ವರಿಸಿದ ಟರ್ಕಿ ದೇಶದ ಯುವತಿ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ಜೋಡಿ
Published On - 3:39 pm, Thu, 30 December 21