Video: ಆಟೋದಲ್ಲಿ ಅಳುತ್ತಾ ಕುಳಿತಿದ್ದ ಯುವತಿಗೆ ಧೈರ್ಯ ತುಂಬಿದ ಡ್ರೈವರ್, ಕಾರಣ ಇದೇ ನೋಡಿ

ಈಗಿನ ಕಾಲದಲ್ಲಿ ಬೇರೆಯವರ ಕಷ್ಟಕ್ಕೆ ಸ್ಪಂದಿಸುವವರು ಸಿಗೋದೇ ಕಡಿಮೆ. ಆದರೆ ಇಲ್ಲೊಬ್ಬ ಆಟೋ ಡ್ರೈವರ್ ತನ್ನ ಒಳ್ಳೆಯ ನಡೆ ನುಡಿಯಿಂದಲೇ ಗಮನ ಸೆಳೆದಿದ್ದಾನೆ. ತನ್ನ ಆಟೋದಲ್ಲಿ ಅಳುತ್ತಾ ಕುಳಿತಿದ್ದ ಯುವತಿಗೆ ಸಾಂತ್ವನ ನೀಡಿದ್ದಾನೆ. ಈ ಹೃದಯ ಸ್ಪರ್ಶಿ ಘಟನೆಯ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಆಟೋದಲ್ಲಿ ಅಳುತ್ತಾ ಕುಳಿತಿದ್ದ ಯುವತಿಗೆ ಧೈರ್ಯ ತುಂಬಿದ ಡ್ರೈವರ್, ಕಾರಣ ಇದೇ ನೋಡಿ
ವೈರಲ್‌ ಪೋಸ್ಟ್
Image Credit source: Twitter

Updated on: Aug 25, 2026 | 3:30 PM

ಈಗಿನ ಕಾಲದಲ್ಲಿ ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಸಿಗುವುದೇ ಅಪರೂಪ. ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವ, ಸಾಂತ್ವನ ನೀಡುವ ವ್ಯಕ್ತಿಗಳನ್ನು ನೋಡಿದಾಗ ಖುಷಿಯಾಗುತ್ತದೆ. ಇದೀಗ ಯುವತಿಗೆ ಕೆಲಸಕ್ಕೆ ತೆರಳುವ ವೇಳೆ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ತೊಂದರೆ ಕೊಟ್ಟಿದ್ದಾನೆ. ಇದರಿಂದ‌ ನೊಂದ ಯುವತಿಯು ಆಟೋದಲ್ಲಿ ಕುಳಿತು ಅಳಲು ಪ್ರಾರಂಭಿಸಿದ್ದಾಳೆ. ಇದನ್ನು ಗಮನಿಸಿದ ಆಟೋ ಚಾಲಕನು (auto driver) ಯುವತಿಯನ್ನು ಸಮಾಧಾನಪಡಿಸಿ ಧೈರ್ಯ ತುಂಬಿದ್ದಾನೆ. ತನಗಾದ ಕಹಿ ಅನುಭವ ಹಂಚಿಕೊಂಡ ಯುವತಿಯ ಪೋಸ್ಟ್ ಸದ್ಯ ವೈರಲ್ ಆಗಿದೆ.

ಆಯುಷಿ (Ayushi) ತನ್ನ ಹೆಸರಿನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ, ಸ್ವಲ್ಪ ಹೊತ್ತಿನ ಹಿಂದಷ್ಟೇ ದಾರಿಯಲ್ಲಿ ಎದುರಾದ ಒಬ್ಬ ವ್ಯಕ್ತಿಯಿಂದಾಗಿ, ಕಚೇರಿಗೆ ಹೋಗುವ ದಾರಿಯಲ್ಲಿ ಆಟೋದಲ್ಲೇ ಅಳಲು ಶುರುಮಾಡಿದೆ. ಆದರೆ ಇದನ್ನೂ ನೋಡಿದ ಆಟೋಚಾಲಕ ಹಿಂದಿ ಭಾಷೆ ಸ್ವಲ್ಪವೂ ಬರದಿದ್ದರೂ ನನ್ನನ್ನು ಸಮಾಧಾನಪಡಿಸುತ್ತಾ, ದೇವರಿದ್ದಾನೆ ಎಂದನು. ಈ ಮುದ್ದಾದ ಅಣ್ಣ ಬೆಳಗಿನ ಉಪಾಹಾರ ತಿಂದಿದ್ದೀರಾ?ಎಂದು ವಿಚಾರಿಸಿದನು. ಇಲ್ಲಿ ಇಂತಹ ಆತ್ಮೀಯತೆಯನ್ನು ನಾನು ಇದಕ್ಕೂ ಮುನ್ನ ಅನುಭವಿಸಿರಲಿಲ್ಲ. ನಮ್ಮ ಮನಸ್ಸನ್ನು ನೋಯಿಸುವ ಅದೇ ಸ್ಥಳವು ಅದನ್ನು ಗುಣಪಡಿಸಬಲ್ಲದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ನೀವು ಚಿನ್ನಕ್ಕಾಗಿ ಹುಡುಕಿದರೆ, ನಿಮಗೆ ಚಿನ್ನವೇ ಸಿಗುತ್ತದೆ. ಚಂದನ್ ಅಣ್ಣಾ ಗ್ರೇಟ್ ಎಂದು ಯುವತಿ ಬರೆದುಕೊಂಡಿದ್ದಾಳೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೀದಿನಾಯಿಗಳ ಜತೆಗೆ ಜಾಲಿ ರೈಡ್ ಹೊರಟ ರಿಕ್ಷಾ ಚಾಲಕ

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಆರಾಮಾಗಿ ಇದ್ದೀರಾ ಅಲ್ವಾ, ಜಾಗರೂಕರಾಗಿರಿ ಎಂದಿದ್ದಾರೆ. ಮತ್ತೊಬ್ಬರು, ಎಲ್ಲಾ ಗಂಡಸರು ಕೆಟ್ಟವರಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಹೇಳುವುದನ್ನು ಕೇಳುವುದನ್ನು ಬೇಸರವಾಗುತ್ತಿದೆ. ಬೇಗನೇ ಚೇತರಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us