
ಬಾಬಾ ವಂಗಾ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇದೆ. ಬಾಬಾ ವಂಗಾ ಬಲ್ಗೇರಿಯಾದ ಒಬ್ಬ ಪ್ರವಾದಿ. ಆಕೆಯ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವ್. 1911 ರಲ್ಲಿ ಜನಿಸಿದ ಇವರು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಚಂಡಮಾರುತದ ಧೂಳಿನಿಂದ ಶಾಶ್ವತವಾಗಿ ಕಣ್ಣನ್ನು ಕಳೆದುಕೊಂಡರು. ದೃಷ್ಟಿ ಕಳೆದುಕೊಂಡ ನಂತರ ಅವರು ಭವಿಷ್ಯ ಕಾಣಲು ಪ್ರಾರಂಭಿಸಿದರು. 1966 ರಲ್ಲಿ ಮರಣ ಹೊಂದಿದ ಬಾಬಾ ವಂಗಾ 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗ, ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಆರ್ಥಿಕ ಬಿಕ್ಕಟ್ಟು ಮುಂತಾದ ಪ್ರಮುಖ ಘಟನಾವಳಿಗಳನ್ನು ಮುಂಚೆಯೇ ಊಹಿಸಿದ್ದ ಬಾಬಾ ವಂಗಾ 2025 ರಲ್ಲಿ ನಡೆಯಲಿರುವ ಕೆಲವು ಕುತೂಹಲಕಾರಿ ಅಂಶಗಳ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
2025 ರಿಂದಲೇ ಈ ಪ್ರಪಂಚದಲ್ಲಿ ವಿನಾಶಕಾರಿ ಘಟನೆಗಳು ಆರಂಭವಾಗಲಿದ್ದು, ಇದು ಮಾನವೀಯತೆಯ ಅವನತಿಗೆ ಕಾರಣವಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ವಿನಾಶವು ಮುಂದಿನ ವರ್ಷ (2025) ಯುರೋಪಿನ ಸಂಘರ್ಷದೊಂದಿಗೆ ಪ್ರಾರಂಭವಾಗಿ ಇಡೀ ಮಾನವ ಕುಲವೇ ನಾಶವಾಗುತ್ತಾ ಹೋಗಿ ಪ್ರಪಂಚವು 5079 ರಲ್ಲಿ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
2025 ರಲ್ಲಿ ಯುರೋಪ್‌ನಲ್ಲಿ ವಿನಾಶಕಾರಿ ಸಂಘರ್ಷ ಪ್ರಾರಂಭವಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ಸಂಘರ್ಷ ಎಲ್ಲೆಡೆ ಭಾರಿ ವಿನಾಶವನ್ನು ಉಂಟುಮಾಡುತ್ತದೆ. ಮತ್ತು ಈ ಕಾರಣದಿಂದಾಗಿ, ಯುರೋಪ್ ಖಂಡದಲ್ಲಿ ಜನ ಸಂಖ್ಯೆಯೂ ಕುಸಿಯುತ್ತಾ ಹೋಗಿ ನಂತರದ ವರ್ಷಗಳಲ್ಲಿ ಇಡೀ ಜಗತ್ತು ಅವನತಿಯತ್ತ ಸಾಗಬಹುದು ಎಂದು ಭವಿಷ್ಯ ವಾಣಿಯಲ್ಲಿ ಹೇಳಿದ್ದಾರೆ.
ಹವಾಮಾನ ಬದಲಾವಣೆಯು 2033 ರಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬಾಬಾ ವಾಂಗ ಭವಿಷ್ಯ ನುಡಿದಿದ್ದಾರೆ. ಮಂಜುಗಡ್ಡೆಯ ಕರಗುವಿಕೆಯು ಪ್ರಪಂಚದಾದ್ಯಂತ ಸಮುದ್ರ ಮಟ್ಟದಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತದೆ. 2170 ರಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಜಗತ್ತು ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ಅವರು ಹೇಳಿದ್ದಾರೆ.
ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 3005 ರಲ್ಲಿ ಭೂಮಿ ಮತ್ತು ಮಂಗಳ ಗ್ರಹದ ನಡುವೆ ಯುದ್ಧ ಸಂಭವಿಸಬಹುದು. 3797 ರ ಹೊತ್ತಿಗೆ, ಭೂಮಿಯ ಮೇಲೆ ವಾಸಿಸಲು ಅಸಾಧ್ಯವಾಗಿ, ಮಾನವರು ಬೇರೆ ಯಾವುದಾದರೂ ಗ್ರಹದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ ಅಂತಿಮವಾಗಿ 5079 ರ ಹೊತ್ತಿಗೆ ಭೂಮಿಯಿಂದ ಎಲ್ಲವೂ ನಾಶವಾಗುತ್ತದೆ ಮತ್ತು ಪ್ರಪಂಚವು ಅಂತ್ಯಗೊಳ್ಳುತ್ತದೆ ಎಂಬ ಭಯಾನಕ ಭವಿಷ್ಯ ನುಡಿದಿದ್ದಾರೆ.