Viral Video: ಮರಿಯಾನೆ ಮೊದಲ ಸಲ ಈ ಮೋಜಿಗೆ ಬಿದ್ದಾಗ

| Updated By: ಶ್ರೀದೇವಿ ಕಳಸದ

Updated on: Aug 26, 2022 | 1:46 PM

Baby Elephant : ಮೊದಲ ಸಲ ಬಬಲ್ಸ್​ ಜೊತೆ ಆಟವಾಡುತ್ತಿರುವ ಈ ಮರಿಯಾನೆ. ನೆಟ್ಟಿಗರು ಮೈಮರೆತು ನೋಡುತ್ತಿರುವ ಈ ಮನೋಹರ ದೃಶ್ಯ.

Viral Video: ಮರಿಯಾನೆ ಮೊದಲ ಸಲ ಈ ಮೋಜಿಗೆ ಬಿದ್ದಾಗ
ಗುಳ್ಳೆಯಾಟ ಚೆನ್ನಾಗಿದೆ
Follow us on

Viral Video: ಪುಟ್ಟಾನೆಯು ನೀರುಗುಳ್ಳೆಗಳನ್ನು ಹಿಡಿಯಲು ಪ್ರಯತ್ನಿಸುತ್ತಿದೆ. ಬೇಬಿ ಬ್ರಾಜೋಸ್​ ತನ್ನ ತಾಯಿ ಬ್ಲ್ಯೂಬೊನೆಟ್​ನೊಂದಿಗೆ ಆಗಸ್ಟ್​ 18ರಂದು ಈ ಮೋಜನ್ನು ಮೊದಲ ಬಾರಿ ಅನುಭವಿಸಿದ ದೃಶ್ಯ ಇದಾಗಿದೆ. ಬ್ರಾಜೋಸ್​ಗೆ 10 ತಿಂಗಳು. ಈ ಮನೋಹರವಾದ ಕ್ಲಿಪ್​ ಅನ್ನು ಈ ತನಕ 33,000 ಜನರು ವೀಕ್ಷಿಸಿದ್ದಾರೆ. 900 ಲೈಕ್ಸ್​ ಪಡೆದಿದೆ. ಫೋರ್ಟ್ ವರ್ತ್​ ಮೃಗಾಲಯದ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್​ ಇದೆ. ಮನುಷ್ಯರು ಮತ್ತು ಪರಿಸರದ ಮಧ್ಯೆ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಈ ಮೃಗಾಲಯವು ಹೊಂದಿದೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆಟ, ಮೋಜು ಯಾರಿಗಿಷ್ಟವಿಲ್ಲ? ಅದರಲ್ಲೂ ಮರಿಗಳ, ಮಕ್ಕಳ ಜನ್ಮಸಿದ್ಧ ಹಕ್ಕು ಇದು! ಆಡಿಸುವವರಿಗೇ ಸುಸ್ತಾಗುವಷ್ಟು ಆಟಕ್ಕೆ ಬೀಳಿಸುತ್ತಲೇ ಇರುವ ಜಾಯಮಾನ ಈ ಪಿಳ್ಳೆಗಳದ್ದು.

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 1:45 pm, Fri, 26 August 22