Viral Video : ಹುಟ್ಟುಹಬ್ಬವೆಂದರೆ ಕಣ್ಮುಂದೆ ಬರುವುದು ಕೇಕ್. ಈಗಂತೂ ಕಸ್ಟಮೈಸ್ಡ್ ಕೇಕ್ಗಳ ಜಮಾನಾ. ಬೇಕರಿಯವರಿಗೆ ನಿಮಗೆ ಬೇಕಾದ ಥೀಮ್ ವಿವರಿಸಿದರೆ ಮರುದಿನವೇ ಕೇಕ್ ನಿಮ್ಮ ಮನೆ ತಲುಪಿರುತ್ತದೆ. ಮಗುವಿನ ಮೊದಲ ಹುಟ್ಟುಹಬ್ಬದ ತಯಾರಿ ಮತ್ತು ಸಂಭ್ರಮವನ್ನಂತೂ ವಿವರಿಸುವುದೇ ಬೇಡ. ಎದುರಿಗಿರುವ ಕೇಕ್ ಮುಟ್ಟಲು ಜೀಕು ಹೊಡೆಯುವ ಮಗುವನ್ನು ಸಂಭಾಳಿಸುವ ಸರ್ಕಸ್ ಇದೆಯಲ್ಲ! ಭಾರೀ ಮಜಾ ಇರುತ್ತದೆ. ಅಂತೂ ಕೇಕಿನ ವಿನ್ಯಾಸ ಕೆಡದಂತೆ ಮೆಲ್ಲ ಕೇಕ್ ಕಟ್ ಮಾಡಿ, ಅದನ್ನು ಸಣ್ಣಸಣ್ಣ ಹೋಳುಗಳನ್ನಾಗಿಸಿ ಬಂದ ಅತಿಥಿಗಳಿಗೆ ಕೊಟ್ಟು ಉಪಚರಿಸಿದರೆ ದೊಡ್ಡ ಕೆಲಸ ಮುಗಿದಂತೆ! ಆದರೆ ಇದೀಗ ವೈರಲ್ ಆಗುತ್ತಿರುವ ಈ ಹುಟ್ಟುಹಬ್ಬದ ಕೇಕ್ ಅವತಾರದ ವಿಡಿಯೋ ನೋಡಿ.
ಬಹಳ ಮುದ್ದಾಗಿದೆಯಲ್ಲ ಈ ಮಗು ಕೇಕ್ ತಿನ್ನುವ ಪರಿ! ಈತನಕ ಈ ವಿಡಿಯೋ ಸುಮಾರು 60,000 ಮತಗಳನ್ನು ಗಳಿಸಿದೆ. ಇದನ್ನು ನೋಡಿದ ಅನೇಕರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ‘ನನಗೀಗ 40. ಈಗಲೂ ಹೀಗೆಯೇ ಮಾಡುತ್ತೇನೆ. ಈ ವಿಷಯವಾಗಿ ನನ್ನನ್ನು ಯಾರೂ ತಡೆಯರು’ ಎಂದಿದ್ದಾರೆ ಒಬ್ಬರು. ‘ನನಗೂ ಹೀಗೇ ಮಾಡುವ ಮನಸಿತ್ತು. ಏನು ಮಾಡುವುದು ನನಗೀಗ 40 ಆಗಿ ಹೋಯಿತಲ್ಲ’ ಎಂದಿದ್ದಾರೆ ಮತ್ತೊಬ್ಬರು. ‘ಇನ್ನುಮುಂದೆ ನನ್ನ ಹುಟ್ಟುಹಬ್ಬಕ್ಕೆ ನಾನೂ ಹೀಗೆ ಮಾಡುತ್ತೇನೆ’ ಎಂದು ಮಗದೊಬ್ಬರು ಹೇಳಿದ್ದಾರೆ. ‘ನನ್ನ 30ನೇ ಹುಟ್ಟುಹಬ್ಬದ ದಿನ ಹೀಗೇ ಕೇಕ್ ತಿನ್ನಬೇಕೆಂದು ಬಯಸಿದೆ ಆದರೆ ಯಾಕೋ ಧೈರ್ಯವಾಗಲಿಲ್ಲ’ ಎಂದಿದ್ದಾರೆ ಇನ್ನೂ ಒಬ್ಬರು. ‘ಹೀಗೇ ಬದುಕಬೇಕು. ವೆರಿಗುಡ್’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:05 am, Thu, 20 October 22