Street Food: ಬೀದಿಬದಿಯ ವ್ಯಾಪಾರಿಗಳು ಪ್ರಚಾರಕ್ಕೆ ಮಾಡುವಂಥ ವಿಚಿತ್ರ ಪಾಕಪ್ರಯೋಗಗಳನ್ನು ವ್ಲಾಗರ್ಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ (Social Media) ಹಾಕುವುದು ಮತ್ತವುಗಳನ್ನು ನೆಟ್ಟಿಗರು ಕೋಪ ನೆತ್ತಿಗೇರಿಸಿಕೊಂಡು ಬಯ್ಯುವುದನ್ನು ನೋಡುತ್ತಲೇ ಬಂದಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ಕೂಡ ಈ ಲಿಸ್ಟಿಗೇ ಸೇರುತ್ತದೆ. ಬಾಂಗ್ಲಾದೇಶದ ಬೀದಿವ್ಯಾಪಾರಿಯೊಬ್ಬ ಅವಲಕ್ಕಿ ಖಾದ್ಯವನ್ನು ತಯಾರಿಸಿದ್ದಾರೆ. ಅವಲಕ್ಕಿಗೆ ಬಾಳೆಹಣ್ಣು, ರಸಗುಲ್ಲಾ ಮತ್ತು ಮೊಸರನ್ನು ಸೇರಿಸಿ ತಯಾರಿಸಿದ ಈ ತಿಂಡಿಯ ಬಗ್ಗೆ ನೆಟ್ಟಿಗರು ದಯವಿಟ್ಟು ಈ ತಿಂಡಿ ತಯಾರಿಸುವುದನ್ನು ನಿಲ್ಲಿಸು ಮಾರಾಯಾ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಅವಲಕ್ಕಿ ಅನ್ನೋ ರುಚಿಕರವಾದ ಖಾದ್ಯಕ್ಕೆ ಏನೆಲ್ಲ ಅವಸ್ಥೆ ತಂದಿಟ್ಟಿದ್ದಾರೆ ಎಂದು ಖೇದವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಇಟಲಿ; ಮದುವೆಗೆ ಮೊದಲೇ ವರನ ಪಾಸ್ಪೋರ್ಟ್ ಜಗಿದಿಟ್ಟ ಗೋಲ್ಡನ್ ರಿಟ್ರೈವರ್!
ಬಾಂಗ್ಲಾದೇಶದ ಬೀದಿಬದಿ ವ್ಯಾಪಾರಿಯೊಬ್ಬರು ಈ ವಿಡಿಯೋದಲ್ಲಿ ‘ದೋಯಿ ಚಿರೆ ಪೋಹಾ’ ಎನ್ನುವ ಈ ಖಾದ್ಯವನ್ನು ತಯಾರಿಸಿದ್ದಾರೆ. ಈ ವಿಡಿಯೋ ಅನ್ನು ಅಮರ್ ಸಿರೋಹಿ ಎನ್ನುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೂ. 24ರಂದು ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 1.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಈತನಕ ಈ ವಿಡಿಯೋ ಅನ್ನು 11ಮಿಲಿಯನ್ ಜನರು ನೋಡಿದ್ದಾರೆ. ದಯವಿಟ್ಟು ಈತನಿಗೆ ಈ ಖಾದ್ಯವನ್ನು ತಯಾರಿಸುವುದನ್ನು ನಿಲ್ಲಿಸಲು ಹೇಳಿ ಎಂದು ನೆಟ್ಟಿಗರು ಗೋಗರಿಯುತ್ತಿದ್ದಾರೆ. ಈ ಮಿಶ್ರಣವು ಸಂಪೂರ್ಣ ವಿಷಯುಕ್ತವಾಗಿದೆ ಎಂದಿದ್ದಾರೆ ಒಬ್ಬರು. ಅವಲಕ್ಕಿಗೆ ಇಂಥ ಗತಿ ತರಬಾರದಿತ್ತು ಎಂದಿದ್ದಾರೆ ಮತ್ತೊಬ್ಬರು. ಇದು ಒಡಿಶಾ ಜನರ ನಿತ್ಯದ ಉಪಹಾರವಾಗಿದೆ. ಇದನ್ನು ತಿನ್ನಲು ಬೇರೆ ದೇಶಕ್ಕೆ ಹೋಗಬೇಕಿಲ್ಲ, ಭಾರತದಲ್ಲಿಯೇ ಸಿಗುತ್ತದೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಸೀಲಿಂಗ್ ಮ್ಯೂರಲ್ಸ್; ಮನೆಯೊಳಗೆ ಬಂದಿಳಿದ ಮೋಡ ಮರ ಹಕ್ಕಿ ಸೂರ್ಯಬಳಗ
ಅಯ್ಯೋ ನನ್ನ ನೆಚ್ಚಿನ ಖಾದ್ಯ ಅವಲಕ್ಕಿಯನ್ನು ಇಲ್ಲಿ ಕೊಲೆಯನ್ನೇ ಮಾಡಿಬಿಟ್ಟರಲ್ಲ! ಎಂದು ಅನೇಕರು ಮರುಗಿದ್ದಾರೆ. ಎಂಥ ಜಾಗದಲ್ಲಿ ಎಂಥ ನೀರು, ಆಹಾರ ಪದಾರ್ಥಗಳನ್ನು ಉಪಯೋಗಿಸಿ ಈತ ತಯಾರಿಸುತ್ತಾನೆ ನೋಡಿ, ಹೊಟ್ಟೆ ತೊಳೆಸಿದಂತಾಗುತ್ತಿದೆ ಎಂದು ಹಲವಾರು ಜನ ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ