ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಡಿಜಿಟಲ್ ಇಂಡಿಯಾವನ್ನು(Digital India) ಜಾರಿಗೆ ತಂದಿದೆ. ಹೀಗಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಹಣಪಾವತಿಯ ಎಲ್ಲ ಕೆಲಸವೂ ಆನ್ಲೈನ್ನಲ್ಲಿಯೇ ನಡೆಯುತ್ತದೆ. ಹಣ ಪಾವತಿಯ ಬಹುತೇಕ ಸಂದರ್ಭಗಳಲ್ಲಿ ಕ್ಯಾಶ್ಲೆಸ್ (Cash Less) ಆಗಿಯೇ ಇರಲು ಬಯಸುತ್ತೇವೆ. ಅದು ಸುರಕ್ಷಿತ ಕೂಡ ಹೌದು. ಈ ಡಿಜಿಟಲ್ ಇಂಡಿಯಾ ಯೋಜನೆ ದೇಶದ ಪ್ರತೀ ವ್ಯಕ್ತಿಗೂ ತಲುಪಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹೌದು ಭಿಕ್ಷುಕನೊಬ್ಬ (Begger) ಜನರಿಂದ ಹಣ ಪಡೆಯಲು ಫೋನ್ ಪೇಯನ್ನು (PhonePe) ಅಳವಡಿಸಿಕೊಂಡಿದ್ದಾನೆ. ಸದ್ಯ ಈ ವಿಚಾರ ದೇಶದೆಲ್ಲೆಡೆ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಬಿಹಾರದ ರಾಜು ಪಟೇಲ್ ಎನ್ನುವ 40 ವರ್ಷದ ಭಿಕ್ಷುಕ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾನೆ.
Bihar | Raju Patel, a beggar in Bettiah, goes digital; accepts PhonePe & puts a QR code around his neck
“I accept digital payments, it’s enough to get the work done & fill my stomach,” said Raju Patel
Visuals from Bettiah railway station pic.twitter.com/nbw83uXop6
— ANI (@ANI) February 8, 2022
ಬಿಹಾರದ ಬೆಟ್ಟೈ ರೈಲು ನಿಲ್ದಾಣದಲ್ಲಿ ರಾಜು ಪಟೇಲ್ ಎನ್ನುವ ಭಿಕ್ಷುಕ ಕುತ್ತಿಗೆಯಲ್ಲಿ ಕ್ಯೂರ್ ಕೋಡ್ ಅನ್ನು ನೇತುಹಾಕಿಕೊಂಡು, ಟ್ಯಾಬ್ ಇಟ್ಟುಕೊಂಡು ರಿಚ್ ಅಗಿ ಭಿಕ್ಷೆ ಬೇಡುತ್ತಿದ್ದಾನೆ. ಈ ಕುರಿತು ಎ ಎನ್ಐ ಜೊತೆ ಮಾತನಾಡಿದ ರಾಜು ಪಟೇಲ್ ಕೊರೊನಾ ಬಳಿಕವಂತೂ ಜನ ದುಡ್ಡುನ್ನು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಚಿಲ್ಲರೆ ಇಲ್ಲ, ಕ್ಯಾಶ್ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ ನಾನು ಕೂಡ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಂಡಿದ್ದೇನೆ. ಚಿಕ್ಕಂದಿನಿಂದಲು ಇದೇ ಜಾಗದಲ್ಲಿ ಭಿಕ್ಷೆ ಬೇಡುತ್ತಿದ್ದೇನೆ. ಈಗ ವಿಧಾನವನ್ನು ಬದಲಿಸಿಕೊಂಡಿದ್ದೇನೆ. ಭಿಕ್ಷೆ ಬೇಡಿದ ಬಳಿಕ ರೈಲ್ವೆ ನಿಲ್ದಾಣದಲ್ಲಿಯೇ ಮಲಗುತ್ತೇನೆ ಎನ್ನುವ ರಾಜು, ಡಿಜಿಟಲ್ ಮೂಲಕ ಹಣ ಪಡೆಯಲು ಬ್ಯಾಂಕ್ ಖಾತೆಯನ್ನೂ ತೆರೆದು, ಆನ್ಲೈನ್ ಪೇಮೆಂಟ್ ಸೌಲಭ್ಯವನ್ನು ಪಡೆದಿದ್ದೇನೆ ಎಂದಿದ್ದಾರೆ.
ಬ್ಯಾಂಕ್ ಖಾತೆ ತೆರೆಯಲು ಆಧಾರ್ ಮತ್ತು ಪಾನ್ ಕಾರ್ಡ್ನ ಅಗತ್ಯವಿತ್ತು. ಹೀಗಾಗಿ ರಾಜು ಪಾನ್ಕಾರ್ಡ್ ಅನ್ನು ಮಾಡಿಸಿಕೊಂಡಿದ್ದಾರೆ. ರಾಜು ಪಟೇಲ್ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಅಭಿಮಾನಿಯಾಗಿದ್ದು ಅವರ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರಂತೆ. ಎಎನ್ಐ ವರದಿಯ ಪ್ರಕಾರ, ರಾಜು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಿಂದ ಪ್ರೇರಿತರಾಗಿದ್ದು, ಮನ್ ಕೀ ಬಾತ್ ಅನ್ನು ತಪ್ಪದೇ ಕೇಳುತ್ತಾರಂತೆ. ಸದ್ಯ ಈ ಡಿಜಿಟಲ್ ಹೈಟೆಕ್ ಭಿಕ್ಷುಕನ ವಿಚಾರ ದೇಶದೆಲ್ಲೆಡೆ ವೈರಲ್ ಆಗಿದೆ.
ಈ ಕುರಿತು ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಎಎನ್ಐ ಟ್ವಿಟರ್ನಲ್ಲಿ ರಾಜು ಪಟೇಲ್ ಅವರ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಬಳಕೆದಾರರೊಬ್ಬರು ಭಿಕ್ಷುಕರಲ್ಲೂ ಡಿಜಿಟಲ್ ಇಂಡಿಯಾ ಅಳವಡಿಕೆಯಾಗಿರುವುದು ಅಚ್ಚರಿಯ ವಿಚಾರ. ಅಲ್ಲದೆ ಆನ್ಲೈನ್ ಪೇಮೆಂಟ್ ಮಾಡಿದಾಗ ಅವರು ಕ್ಯಾಶ್ ಬ್ಯಾಕ್ ಕೂಡ ಗೆಲ್ಲಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಡಿಜಿಟಲ್ ಇಂಡಿಯಾ ಸಧ್ಬಳಕೆಯ ಬಗ್ಗೆ ಸಂತಸವಿದೆ ಆದರೆ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಎದ್ದು ಕಾಣುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ;
ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಟೈರ್ ಹೊರತೆಗೆದ ವ್ಯಕ್ತಿ